ನಿರ್ಲಕ್ಷಿತ‘ದ್ವೀಪ’ !
ಅರಬೀ ಸಮುದ್ರದಲ್ಲಿ ಕೇರಳದ ಬಳಿಯ ಕೇಂದ್ರಾಡಳಿತ ಪ್ರದೇಶವಾದ ‘ಲಕ್ಷದ್ವೀಪ’ವು ಸದ್ಯ ಚರ್ಚೆಯ ವಿಷಯವಾಗಿದೆ. ಇಲ್ಲಿನ ಹೊಸ ಆಡಳಿತಗಾರರಾದ ಪ್ರಫುಲ್ಲ ಪಟೇಲ ಇವರು ೪ ಅಧಿನಿಯಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಶೇ. ೯೮ ರಷ್ಟು ಮುಸಲ್ಮಾನರ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಜಾರಿಗೆ ತರಲಾದ ಈ ಕಾನೂನುಗಳಿಗೆ ರಾಜಕೀಯ ಸ್ತರದಲ್ಲಿ ವಿರೋಧವಾಗತೊಡಗಿದೆ.