ಶೇ. ೯೮ ರಷ್ಟು ಮುಸಲ್ಮಾನರಿರುವ ಲಕ್ಷದ್ವೀಪದಲ್ಲಿ ೧೧ ವರ್ಷಗಳಿಂದ ಮ. ಗಾಂಧಿ ಪ್ರತಿಮೆಯನ್ನು ಸ್ಥಾಪಿಸುವ ಕೆಲಸ ಬಾಕಿ ಇದೆ !

ಪ್ರತಿಮೆ ಸ್ಥಾಪನೆಯು ಷರಿಯತನ ಉಲ್ಲಂಘನೆಯಾಗಿರುವುದರಿಂದ ವಿರೋಧ !

ಗೋಹತ್ಯೆ ನಿಷೇಧಕ್ಕೆ ವಿರೋಧ

* ಮ. ಗಾಂಧಿಯವರು ತಮ್ಮ ಜೀವನದುದ್ದಕ್ಕೂ ಮುಸಲ್ಮಾನರ ಓಲೈಕೆ ಮಾಡಿದ್ದಾರೆ. ಅವರಿಗಾಗಿ ಭಾರತದ ವಿಭಜನೆಗೆ ಒಪ್ಪಿಗೆ ನೀಡಿ ಸ್ವತಂತ್ರ ಪಾಕಿಸ್ತಾನ ದೇಶವನ್ನು ನಿರ್ಮಾಣ ಮಾಡಿದರು. ಆದರೂ, ಅವರಿಗೆ ಮುಸಲ್ಮಾನರಿಂದ ಯಾವುದೇ ಗೌರವವು ಮೊದಲೂ ಸಿಕ್ಕಿರಲಿಲ್ಲ ಈಗಲೂ ಸಿಗುತ್ತಿಲ್ಲ ಎಂಬುದನ್ನೇ ಈ ಘಟನೆಯು ಹೇಳುತ್ತದೆ ! ಈ ಬಗ್ಗೆ ತಥಾಕಥಿತ ಗಾಂಧಿವಾದಿ, ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

* ಷರಿಯತ ನ್ಯಾಯವ್ಯವಸ್ಥೆಯನ್ನು ಭಾರತೀಯ ನ್ಯಾಯ ವ್ಯವಸ್ಥೆಗೆ ಸಮಾನಾಂತರವೆಂದು ಪರಿಗಣಿಸುವ ಮತಾಂಧರು ! ಶೇ. ೯೮ ರಷ್ಟು ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಲಕ್ಷದ್ವೀಪವು ನಾಳೆ ಭಾರತದಿಂದ ಬೇರ್ಪಟ್ಟರೆ ಆಶ್ಚರ್ಯವಾಗುವುದಿಲ್ಲ !

ಕವರತ್ತಿ (ಲಕ್ಷದ್ವೀಪ) – ಭಾರತದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಹೊಸ ಆಡಳಿತಾಧಿಕಾರಿ ಪ್ರಫುಲ ಪಟೇಲ್ ಅವರು ಇಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದಾರೆ. ಅದೇರೀತಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಮಕ್ಕಳ ಇರುವ ನಿಯಮ ಜೊತೆಗೆ ಪ್ರವಾಸೋದ್ಯಮವನ್ನು ಹೆಚ್ಚಿಸಲು ಮದ್ಯ ನಿಷೇಧವನ್ನು ತೆಗೆಯುವಂತೆ ಆದೇಶಿಸಿದೆ. ಇದನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಲಕ್ಷದ್ವೀಪದ ಜನಸಂಖ್ಯೆಯಲ್ಲಿ ಶೇ. ೯೮ ರಷ್ಟು ಮುಸ್ಲಿಮರು ಇದ್ದಾರೆ. ಅದಕ್ಕಾಗಿಯೇ ಅವರು ಅದನ್ನು ವಿರೋಧಿಸಿದ್ದಾರೆ. ಈ ವಿರೋಧಕ್ಕೆ ಕಾಂಗ್ರೆಸ್ ಸಹ ಬೆಂಬಲ ನೀಡಿದೆ. ಮೇಲಿನ ನಿಯಮಗಳನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು; ಆದರೆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ೧೧ ವರ್ಷಗಳ ಹಿಂದೆ ಕಾಂಗ್ರೆಸ್ ಇಲ್ಲಿ ಮ. ಗಾಂಧಿಯ ಪ್ರತಿಮೆಯನ್ನು ನಿರ್ಮಿಸಲು ಪ್ರಯತ್ನಿಸಿತ್ತು; ಆದರೆ ಮುಸಲ್ಮಾನರ ತೀವ್ರ ವಿರೋಧದಿಂದ, ಅದನ್ನು ಸುತ್ತಿಡಲಾಯಿತು. ಇಸ್ಲಾಂನಲ್ಲಿ ಪ್ರತಿಮೆಯನ್ನು ನಿಷೇಧಿಸಲಾಗಿದೆ ಎಂದು ಮುಸ್ಲಿಮರು ಹೇಳುತ್ತಾರೆ. ಆದರೆ, ಆಡಳಿತವು ಮುಸ್ಲಿಂ ವಿರೋಧದಿಂದ ಪ್ರತಿಮೆಯನ್ನು ನಿರ್ಮಿಸಲಾಗಿಲ್ಲ ಎಂದು ಹೇಳುವುದನ್ನು ಅಲ್ಲಗಳೆಯುತ್ತಿದೆ. (ಈ ಬಗ್ಗೆ ಕಾಂಗ್ರೆಸ್ ಮೌನವೇಕೆ ಅಥವಾ ಗಾಂಧಿಗಿಂತ ಮುಸಲ್ಮಾನರೇ ಮುಖ್ಯ ಎಂದು ಅವರಿಗೆ ಅನಿಸುತ್ತಿದೆಯೇ ? – ಸಂಪಾದಕ)

ಕೇರಳದ ಮಾಧ್ಯಮಗಳು ಆ ಸಮಯದಲ್ಲಿ, ಒಂದುವೇಳೆ ಅಲ್ಲಿ ಮ. ಗಾಂಧಿಯವರ ಪ್ರತಿಮೆಯನ್ನು ನಿರ್ಮಿಸಿದರೆ, ಅದರ ಗೌರವಕ್ಕಾಗಿ ಯಾವಾಗಲೂ ಹೂವುಗಳಿಂದ ಅಲಂಕರಿಸಬೇಕಾಗುತ್ತದೆ ಮತ್ತು ಇದು ಷರಿಯತ್‍ನ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಮುಸಲ್ಮಾನರು ಇದನ್ನು ವಿರೋಧಿಸಿದ್ದಾರೆ.