ಗಾಜಿಯಾಬಾದ್‍ನ ಡಾಸನಾ ದೇವಿ ದೇವಸ್ಥಾನಕ್ಕೆ ಸಂದೇಹಾಸ್ಪದವಾಗಿ ಬಂದ ಇಬ್ಬರು ಪೊಲೀಸ್ ವಶದಲ್ಲಿ !

‘ಸರ್ಜಿಕಲ್ ಬ್ಲೇಡ್’ ಜಫ್ತಿ

ನನ್ನನ್ನು ಕೊಲ್ಲಲು ಬಂದಿದ್ದಾರೆಂದು ಮಹಂತ ಯತಿ ನರಸಿಂಹಾನಂದ ಅವರ ಹೇಳಿಕೆ

ಇದರಿಂದ ಉತ್ತರಪ್ರದೇಶದಲ್ಲಿ ಹಿಂದೂ ಸಂತರು, ಮಹಂತರು ಮತ್ತು ಸಾಧುಗಳು ಅಸುರಕ್ಷಿತರಾಗಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಆದ್ದರಿಂದ ಸರಕಾರವು ಸಂತರು ಮತ್ತು ಮಹಂತರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು, ಎಂಬುದು ಹಿಂದೂಗಳ ಅಪೇಕ್ಷೆವಾಗಿದೆ!

( ಎಡದಿಂದ ಮಹಂತ ಯತಿ ನರಸಿಂಹಾನಂದ ಸರಸ್ವತಿ, ಮತ್ತು ಬಂಧಿತ ಆರೋಪಿಗಳು)

ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿಯ ಪ್ರಸಿದ್ಧ ಡಾಸನಾ ದೇವಿ ದೇವಸ್ಥಾನದಲ್ಲಿ ಜೂನ್ ೨ ರ ರಾತ್ರಿ ಇಬ್ಬರು ಯುವಕರನ್ನು ದೇವಾಲಯದ ಸೇವಕರು ಹಿಡಿದಿದ್ದಾರೆ. ಇಬ್ಬರೂ ಯುವಕರು ತಾವು ಹಿಂದೂಗಳೆಂದು ಹೇಳಿಕೊಂಡು ದೇವಾಲಯದ ಪ್ರವೇಶದ್ವಾರಕ್ಕೆ ಬಂದಿದ್ದರು; ಆದರೆ ವಿಚಾರಣೆ ವೇಳೆ ಅವರಲ್ಲಿ ಒಬ್ಬರು ಮುಸಲ್ಮಾನ ಎಂದು ತಿಳಿದುಬಂದಿದೆ. ಶೋಧದ ವೇಳೆ ಆತನ ಬಳಿ `ಸರ್ಜಿಕಲ್ ಬ್ಲೇಡ್’ ಪತ್ತೆಯಾಗಿದೆ. ದೇವಾಲಯದ ಮಹಂತ ಯತಿ ನರಸಿಂಹಾನಂದ ಸರಸ್ವತಿಯವರು, ‘ಇವರಿಬ್ಬರೂ ಅವರನ್ನು ಕೊಲ್ಲಲು ಬಂದ ಭಯೋತ್ಪಾದಕರು’ ಎಂದು ಆರೋಪಿಸಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಅವರನ್ನು ಪ್ರಶ್ನಿಸಲಾಗುತ್ತಿದೆ.

೧. ಇವರಿಬ್ಬರು ದೇವಾಲಯದ ಪ್ರವೇಶದ್ವಾರದಲ್ಲಿದ್ದ ಪೊಲೀಸರು ಅವರಲ್ಲಿ ಹೆಸರನ್ನು ಕೇಳಿದಾಗ ನಾಗಪುರದ ವಿಪುಲ್ ವಿಜಯವರ್ಗಿಯಾ ಮತ್ತು ಕಾಶಿ ಗುಪ್ತಾ ಎಂದು ತಿಳಿಸಿದ್ದರು. ಅವರ ಬಳಿ ಒಂದು ಚೀಲ ಇತ್ತು. ಅದರ ನಂತರ ಸೇವಕರು ಅವರನ್ನು ವಿಚಾರಿಸಿದಾಗ, ಕಾಶಿ ಎಂಬ ಹೆಸರನ್ನು ಉಲ್ಲೇಖಿಸಿದ ವ್ಯಕ್ತಿಯ ನಿಜವಾದ ಹೆಸರು ಕಾಸಿಫ ಮೊಹಮ್ಮದ ಎಂದು ತಿಳಿದುಬಂದಿದೆ. ಆತ ಗಾಜಿಯಾಬಾದ್‍ನ ಸಂಜಯ್‍ನಗರದಲ್ಲಿ ವಾಸಿಸುತ್ತಿದ್ದಾನೆ.

೨. ವಿಪುಲ ವಿಜಯವರ್ಗಿಯಾ, ‘ನಾನು ಸರ್ಜಿಕಲ್ ಬ್ಲೇಡ್‍ನಿಂದ ಚಿಕಿತ್ಸೆ ನೀಡುತ್ತೇನೆ’. ವಿಪುಲ ಮತ್ತು ಕಾಸಿಫ ಮೂರು ವರ್ಷಗಳ ಹಿಂದೆ ಫೇಸ್‍ಬುಕ್‍ನಲ್ಲಿ ಸ್ನೇಹಿತರಾಗಿದ್ದರು. ವಿಪುಲ್‍ನು ಗಾಜಿಯಾಬಾದ್‍ಗೆ ಬಂದಾಗ, ಆತ ಡಾಸನಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದುದರಿಂದ ತಾವಿಬ್ಬರೂ ದೇವಸ್ಥಾನಕ್ಕೆ ಬಂದಿದ್ದೆವು ಎಂದು ವಿಚಾರಣೆಯ ಸಮಯದಲ್ಲಿ ಹೇಳಿದರು.

. ಮಹಂತ ಯತಿ ನರಸಿಂಹಾನಂದ ಸರಸ್ವತಿಯನ್ನು ಹತ್ಯೆ ಮಾಡಲು ಕಾಶ್ಮೀರದಿಂದ ದೆಹಲಿಗೆ ಬಂದ ಭಯೋತ್ಪಾದಕನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಆತನನ್ನು ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಯು ಕಳುಹಿಸಿತ್ತು. ಮಹಂತ ಯತಿ ಸರಸಿಂಹಾನಂದ ಇವರು ಇಸ್ಲಾಂ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅವರನ್ನು ಗುರಿಯಾಗಿಸಲು ಪ್ರಯತ್ನಗಳಾಗುತ್ತಿವೆ.