ಬಾಲ್ಯದಿಂದಲೇ ಪೋಷಕರಿಂದ ಮತಾಂಧತೆ ಮತ್ತು ಮುಸಲ್ಮಾನೇತರರನ್ನು ದ್ವೇಷಿಸುವ ಶಿಕ್ಷಣ ನೀಡಲಾಗಿತ್ತು !

ಬ್ರಿಟನ್‍ನಲ್ಲಿ ಪಾಕಿಸ್ತಾನ ಮೂಲದ ಮಾಜಿ ಭಯೋತ್ಪಾದಕನಿಂದ ಪೊಲೀಸರಲ್ಲಿ ದೂರು !

ಈ ಘಟನೆಯು ಪ್ರಪಂಚದಾದ್ಯಂತದ ಒಂದು ನಿರ್ದಿಷ್ಟ ಪಂಥದ ಜನರು ಭಯೋತ್ಪಾದನೆಯತ್ತ ಏಕೆ ಹೊರಳುತ್ತಾರೆ ಅಥವಾ ಮತಾಂಧರಾಗುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ. ಈಗ ಈ ಮಾಜಿ ಭಯೋತ್ಪಾದಕನ ಆರೋಪಗಳು ಹೇಗೆ ತಪ್ಪಿದೆ ಎಂದು ವಿವರಿಸಲು ಇಸ್ಲಾಮಿಕ್ ಸಂಘಟನೆಗಳು ಮತ್ತು ಅವರ ಬೆಂಬಲಿಗರು ಮುಂದೆ ಬರುತ್ತಾರೆ !

ಮುಸಲ್ಮಾನ ಮಕ್ಕಳಲ್ಲಿ ಜಿಹಾದ್‍ನ ಮದ್ದು ಎಲ್ಲಿ ಸಿಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಜಗತ್ತು ಮತ್ತು ಭಾರತದಲ್ಲಿ ತಥಾಕಥಿತ ಜಾತ್ಯತೀತವಾದಿಗಳು ಕಣ್ಣು ತೆರೆದು ನೋಡಬೇಕು ಮತ್ತು ಪ್ರಪಂಚದಾದ್ಯಂತದ ಇಂತಹ ಮಕ್ಕಳಿಗೆ ಮನೆಯಲ್ಲಿ ಹೇಗೆ ಸಂಸ್ಕಾರ ನೀಡಲಾಗುತ್ತಿದೆ ಎಂಬುದರ ಕಡೆ ಗಮನ ನೀಡಬೇಕು !

ಮತಾಂಧರಿಗೆ ಮನೆಗಳಲ್ಲಿ ಮಾತ್ರವಲ್ಲ, ಮದರಸಾಗಳಲ್ಲಿ ನೀಡಲಾಗುವ ಶಿಕ್ಷಣದಿಂದಲೂ ಭಯೋತ್ಪಾದಕರು ತಯಾರಾಗುತ್ತಾರೆ, ಇದು ಅನೇಕ ಘಟನೆಗಳಿಂದ ಬಹಿರಂಗ ಆಗುತ್ತಿರುವಾಗ ಅಲ್ಲಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತದೆ, ಇದರ ಬಗ್ಗೆಯೂ ಗಂಭೀರವಾಗಿ ವಿಚಾರ ಮಾಡಬೇಕಿದೆ !

ಲಂಡನ – ಇಲ್ಲಿಯ ಪಾಕಿಸ್ತಾನ ಮೂಲದ ೨೯ ವರ್ಷದ ಮಾಜಿ ಜಿಹಾದಿ ಭಯೋತ್ಪಾದಕ ತನ್ನ ಸ್ವಂತ ಪೋಷಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ‘ನನ್ನ ಪೋಷಕರು ನನಗೆ ೫ ವರ್ಷದವನಿದ್ದಾಗ ನನಗೆ ಮತಾಂಧತೆಯನ್ನು ಕಲಿಸಲು ಪ್ರಾರಂಭಿಸಿದರು. ಇಸ್ಲಾಂಗಾಗಿ ಹೋರಾಡಲು, ಮುಸ್ಲಿಮೇತರರನ್ನು ದ್ವೇಷಿಸಲು ಮತ್ತು ಜಿಹಾದಿ ಸಲಾಫಿ ಸಿದ್ಧಾಂತದ ಅಡಿಯಲ್ಲಿ ಬ್ರಿಟನ್ ವಿರುದ್ಧ ಯುದ್ಧ ಮಾಡಲು ಶಿಕ್ಷಣ ನೀಡಿದರು’, ಎಂದು ಆತ ದೂರಿನಲ್ಲಿ ಹೇಳಿದ್ದಾನೆ. ‘ನನ್ನ ಸಹೋದರ ಸಹೋದರಿಯರು ಸಹ ಜಿಹಾದಿ ಮನೋಭಾವದರಾಗಿದ್ದಾರೆ’, ಎಂದು ಆತ ಹೇಳಿದ್ದಾನೆ. ಅಲ್-ಖೈದಾದ ಭಯೋತ್ಪಾದಕ ಅಲನವರ ಅಲ್ ಅವಲಾಕಿ ಇವನಿಂದ ಮುಸಲ್ಮಾನ ಯುವಕರ ಬ್ರೈನ್ ವಾಷ್ ಮಾಡಲು ತರಗತಿಗಳನ್ನು ಆಯೋಜಿಸಲಾಗುತ್ತದೆ. ಈ ಭಯೋತ್ಪಾದಕನೂ ಇದರಲ್ಲಿ ಭಾಗವಹಿಸಿದನು. ಅವಲಾಕಿಯು ಯೆಮನ್‍ನಲ್ಲಿ ಕೊಲ್ಲಲ್ಪಟ್ಟನು. ಬ್ರಿಟನ್‍ನ ಭಯೋತ್ಪಾದನಾ ವಿರೋಧಿ ದಳವು ಮಾಜಿ ಭಯೋತ್ಪಾದಕನನ್ನು ವಿಚಾರಣೆ ನಡೆಸಿ ಆತನನ್ನು ಸುರಕ್ಷಿತ ತಾಣದಲ್ಲಿ ಇಡಲಾಗಿದೆ. ಈ ಮಾಜಿ ಭಯೋತ್ಪಾದಕನ ಹೆಸರು ತಿಳಿದುಬಂದಿಲ್ಲ.

ಮಾಜಿ ಭಯೋತ್ಪಾದಕ, ‘ನನ್ನ ಪೋಷಕರು ಇಸ್ಲಾಂನ ವಿರುದ್ಧ ಯುದ್ಧ ನಡೆಯುತ್ತಿದೆ. ನಾನು ನನ್ನ ದೇಶದ ವಿರುದ್ಧದ ಯುದ್ಧಕ್ಕೆ ತಯಾರಾಗಬೇಕು; ಕಳೆದ ಐದು ವರ್ಷಗಳಿಂದ ನಾನು ಅವರೊಂದಿಗೆ ಸಂಪರ್ಕದಲ್ಲಿಲ್ಲ, ಎಂದು ಹೇಳಿದ್ದಾನೆ.’