ನಿರ್ಲಕ್ಷಿತ‘ದ್ವೀಪ’ !

ಅರಬೀ ಸಮುದ್ರದಲ್ಲಿ ಕೇರಳದ ಬಳಿಯ ಕೇಂದ್ರಾಡಳಿತ ಪ್ರದೇಶವಾದ ‘ಲಕ್ಷದ್ವೀಪ’ವು ಸದ್ಯ ಚರ್ಚೆಯ ವಿಷಯವಾಗಿದೆ. ಇಲ್ಲಿನ ಹೊಸ ಆಡಳಿತಗಾರರಾದ ಪ್ರಫುಲ್ಲ ಪಟೇಲ ಇವರು ೪ ಅಧಿನಿಯಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಶೇ. ೯೮ ರಷ್ಟು ಮುಸಲ್ಮಾನರ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಜಾರಿಗೆ ತರಲಾದ ಈ ಕಾನೂನುಗಳಿಗೆ ರಾಜಕೀಯ ಸ್ತರದಲ್ಲಿ ವಿರೋಧವಾಗತೊಡಗಿದೆ. ಪಟೇಲರು ಇಲ್ಲಿ ಗೋವಂಶಹತ್ಯಾ ನಿಷೇಧವನ್ನು ಜಾರಿಗೆ ತಂದಿದ್ದಾರೆ. ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿಯೇ ಹಿಂದೂಗಳಿಗಾಗಿ ಪೂಜನೀಯವಾಗಿರುವ ಗೋಮಾತೆಯ ಹತ್ಯೆ ಮಾಡಿ ಅವರ ಭಾವನೆಯನ್ನು ತುಳಿಯಲಾಗುತ್ತದೋ, ಅಲ್ಲಿ ಬಹುಸಂಖ್ಯಾತ ಮುಸಲ್ಮಾನರ ಪ್ರದೇಶದಲ್ಲಿ ಗೋವಂಶ ಹತ್ಯೆಯ ಮೇಲೆ ನಿಷೇಧ ತಂದುದರಿಂದ ವಿರೋಧವಾಗುವುದು ಸಹಜವಾಗಿದೆ. ಪ್ರತ್ಯಕ್ಷದಲ್ಲಿಯೂ ಇದೇ ನಡೆದಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿದ ಪ್ರಫುಲ್ಲ ಪಟೇಲ ಇವರು, “ಲಕ್ಷದ್ವೀಪದಲ್ಲಿ ಕೃಷಿ ವ್ಯವಸಾಯಕ್ಕಾಗಿ ಅನುಕೂಲವಾಗಿರುವ ಗೋವು, ಎಮ್ಮೆ  ಮುಂತಾದವುಗಳ ಹತ್ಯೆ ಯಾಗಬಾರದೆಂದು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ’, ಎಂದು ಹೇಳಿದರು. ಇತರ ಅಧಿನಿಯಮಗಳಲ್ಲಿ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಮಕ್ಕಳೇ ಇರಬೇಕೆಂಬ ನಿಯಮ, ಹಾಗೆಯೇ ಸಮಾಜದ್ರೋಹಿ ವ್ಯಕ್ತಿಗಳನ್ನು ೧ ವರ್ಷ ಸೆರೆಮನೆಗೆ ತಳ್ಳುವ ಆದೇಶವನ್ನು ನೀಡಲಾಗಿದೆ. ಇದಕ್ಕೂ ಸ್ಥಳೀಯ ಮುಸಲ್ಮಾನರಿಂದ ತೀವ್ರ ವಿರೋಧವಾಗುತ್ತಿದೆ. ಈ ವಿರೋಧದ ಹಿಂದೆ ಆಶ್ಚರ್ಯವೆನಿಸುವಂತಹುದು ಏನೂ ಇಲ್ಲ. ಲಕ್ಷದ್ವೀಪದ ಗೊತ್ತಿರುವ ಇತಿಹಾಸವನ್ನು ನೋಡಿದರೆ ೭ ನೇ ಶತಮಾನದಲ್ಲಿ ಅಲ್ಲಿ ‘ಉಬೈದುಲ್ಲಾಹ’ ಎಂಬ ವ್ಯಕ್ತಿಯು ಬಂದನು.ಅವನು ಇಲ್ಲಿನ ಹಿಂದೂಗಳಲ್ಲಿ ಇಸ್ಲಾಮ್‌ನ ಪ್ರಚಾರ ಮಾಡುತ್ತಾ ಅವರನ್ನು ಮತಾಂತರಿಸಿದನು. ಉಬೈದುಲ್ಲಾಹನನ್ನು ಇಲ್ಲಿ ‘ಸಂತ’ ನೆಂದು ತಿಳಿಯಲಾಗುತ್ತದೆ. ಭಾರತದ ಸ್ವಾತಂತ್ರ್ಯದ ನಂತರ ಲಕ್ಷದ್ವೀಪದಲ್ಲಿ ಅನೇಕ ಸಂಸದರು ಮತ್ತು ಆಡಳಿತಗಾರರು ಆಗಿ ಹೋದರು; ಆದರೆ ಡಿಸೆಂಬರ್ ೨೦೨೦ ರಲ್ಲಿ ಗುಜರಾತನ ಭಾಜಪದ ಮುಖಂಡರಾದ ಮಾಜಿ ಗೃಹಮಂತ್ರಿ ಪ್ರಫುಲ್ಲ ಪಟೇಲರ ಆಯ್ಕೆಯಾದ ನಂತರ ಜಾರಿಗೆ ತಂದ ಅಧಿನಿಯಮಗಳಿಗೆ ಅನೇಕರಿಂದ ವಿರೋಧವಾಗುತ್ತದೆ.

ಪ್ರಫುಲ್ಲ ಪಟೇಲ

ಕೇಂದ್ರಾಡಳಿತ ಪ್ರದೇಶದ ಅಪಮಾನ !

ಪಟೇಲ ಇವರು ಪಕ್ಕದ ಮಾಲದೀವ್ ರಾಷ್ಟ್ರದಂತೆ ಲಕ್ಷದ್ವೀಪದಲ್ಲಿಯೂ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ದೊರಕಿಸಿಕೊಳ್ಳಲು ಇಲ್ಲಿನ ಸರಾಯಿ ನಿಷೇಧವನ್ನು ಸಡಿಲಗೊಳಿಸಿದರು. ಇದರಿಂದ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಲಕ್ಷದ್ವೀಪಕ್ಕೆ ಬರುವರು, ಎಂದು ಅವರ ಅಭಿಪ್ರಾಯವಾಗಿದೆ. ಹಾಗೆ ನೋಡಿದರೆ ಕಳೆದ ೭೪ ವರ್ಷಗಳಿಂದ ಲಕ್ಷದ್ವೀಪದ ಜಗತ್ತಿನೊಂದಿಗಿರುವ ಸಂಬಂಧವು ಕಡಿದು ಹೋಗಿದೆ. ೩೬ ಚಿಕ್ಕ ದ್ವೀಪಗಳಿರುವ ಲಕ್ಷದ್ವೀಪಗಳಲ್ಲಿ ಕೇವಲ ಒಂದು ಚಿಕ್ಕ ವಿಮಾನನಿಲ್ದಾಣವಿದೆ. ಯಾವುದೇ ಪ್ರವಾಸಿಗನು ಭಾರತದ ಯಾವುದೇ ದೊಡ್ಡ ನಗರದಿಂದ ಇಲ್ಲಿಗೆ ನೇರವಾಗಿ ವಿಮಾನದಿಂದ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಸಾಧಾರಣ ೪೦೦ ಕಿಲೋಮೀಟರ್ ದೂರದಲ್ಲಿರುವ ಕೊಚ್ಚಿ ನಗರದಿಂದ ವಿಮಾನ ಅಥವಾ ಹಡಗು ಇವುಗಳಲ್ಲಿ ಪ್ರಯಾಣ ಮಾಡಿ ಲಕ್ಷದ್ವೀಪಕ್ಕೆ ಬರಲು ಸಾಧ್ಯವಾಗುತ್ತದೆ. ಮಾಲದೀವ ಅಥವಾ ಅಂಡಮಾನ ಇವುಗಳಂತೆಯೇ ರಮಣೀಯ ನೈಸರ್ಗಿಕ ಸೌಂದರ್ಯವನ್ನು ಪಡೆದ ಲಕ್ಷದ್ವೀಪವು ಮಾತ್ರ ಈ ರೀತಿ ಏಕೆ ನಿರ್ಲಕ್ಷಿತವಾಗಿದೆ, ಎಂಬುದು ಚರ್ಚೆ ಮತ್ತು ಸಂಶೋಧನೆಯ ವಿಷಯವಾಗಬಹುದು. ಇದರ ಹಿಂದೆ ಇಲ್ಲಿಯ ವರೆಗಿನ ಆಡಳಿತದ ಅಸಡ್ಡೆಯು ಕಾರಣವಾಗಿದೆಯೋ ಅಥವಾ ಅಥವಾ ಇಲ್ಲಿನ ನೈಸರ್ಗಿಕ ಸಂಪತ್ತಿನ ರಕ್ಷಣೆ ಎಂಬ ಮೇಲುಮೇಲಿನ ತೋರಿಕೆಯ ನೆಪವಾಗಿದೆಯೇ ಅಥವಾ ಇಲ್ಲಿನ ಅಲ್ಪಸಂಖ್ಯಾತರ ಓಲೈಕೆಯೇ ? ಎಂದು ನೋಡುವುದು ಆವಶ್ಯಕವಾಗಿದೆ. ಇಲ್ಲಿರುವ ಮೂಲ ಕಾರಣವೆಂದರೆ ಸದ್ಯ ಯಾವುದೇ ಆಡಳಿತಗಾರರು ಲಕ್ಷದ್ವೀಪದ ಭೌತಿಕ ಪ್ರಗತಿಯನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ಅಲ್ಲಿನ ಸಾಂಸ್ಕೃತಿಕ ವಿಚಾರಸರಣಿ, ಜೀವನಶೈಲಿ, ಶ್ರದ್ಧೆ ಇವುಗಳ ಮೇಲೆ ಆಕ್ರಮಣಗಳಾಗುತ್ತಿದೆ ಎಂಬಂತೆ ಕೋಲಾಹಲವೇಳುತ್ತದೆ. ‘ಪ್ರಗತಿಯಾಗದಿದ್ದರೂ ನಡೆಯುತ್ತದೆ; ಆದರೆ ಜನತೆಯ ಧಾರ್ಮಿಕ ಹಿತಗಳ ಕಡೆಗೆ ನಿರ್ಲಕ್ಷ್ಯ ಮಾಡಿದರೆ ನಡೆಯುವುದಿಲ್ಲವಂತೆ !’

ಕೇವಲ ಪ್ರಗತಿಯ ನಿಟ್ಟಿನಲ್ಲಿ ನೋಡಿದರೆ ಪಟೇಲ ಇವರು ತೆಗೆದುಕೊಂಡ ನಿರ್ಣಯಗಳಲ್ಲಿ ಅಯೋಗ್ಯವಾದದ್ದು ಅಂತಹುದ್ದೇನೂ ಕಾಣಿಸುವುದಿಲ್ಲ; ಆದರೆ ಹತ್ತಿರದ ಕೇರಳದ ಆಡಳಿತಾರೂಢ ಮತ್ತು ವಿರೋಧಿ ರಾಜಕೀಯ ಪಕ್ಷ ಕಾಂಗ್ರೆಸ್ ಇವುಗಳು ಪಟೇಲ್‌ರ ವಿರುದ್ಧ ವಿಧಾನಸಭೆಯಲ್ಲಿ ಗೊತ್ತುವಳಿ ನಿರ್ಣಯವನ್ನೇ ಮಾನ್ಯ ಮಾಡಿಸಿಕೊಂಡಿದ್ದಾರೆ. ಅವರ ಹೇಳಿಕೆ ಏನಿದೆಯೆಂದರೆ, ಪಟೇಲರು ಹಿಂದುತ್ವದ ರಾಜಕಾರಣವನ್ನು ಮಾಡುತ್ತಿದ್ದಾರೆ. ಲಕ್ಷದ್ವೀಪದಲ್ಲಿ ಮೂಲ ಸಂಸ್ಕೃತಿ ಮತ್ತು ಅಲ್ಲಿನ ಜೀವನಶೈಲಿ ಇವುಗಳ ವಿರುದ್ಧ ಅವರು ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಕೇಂದ್ರವು ಪಟೇಲರನ್ನು ಹಿಂದೆ ಕರೆಯಿಸಿಕೊಳ್ಳಬೇಕು’, ಅಲ್ಲಿಯವರೆಗೆ ಇವರು ತಲುಪಿದ್ದಾರೆ. ಇಂತಹ ಬೇಡಿಕೆಯಾಗುವುದು ಅಂದರೆ ಪ್ರಜಾಪ್ರಭುತ್ವ ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳ ಅಪಮಾನವಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರೇ ಪಟೇಲರ ನಿರ್ಣಯವನ್ನು  ಖಂಡಿಸಿದ್ದಾರೆ. ‘ಸ್ಥಳೀಯ ಮುಸಲ್ಮಾನರ ಸಂಸ್ಕೃತಿಯ ಮೇಲೆ ಈ ಆಕ್ರಮಣವಾಗಿದೆ’, ಎಂದು ಕರೆದ ವಿಜಯನ್ ಇವರು ಹಿಂದೂಗಳ ಶಬರಿಮಲೈಯ ಪರಂಪರೆಯನ್ನು ನಿರಂತರವಾಗಿ ಕಾಪಾಡಲು ಲಕ್ಷಗಟ್ಟಲೆ ಹಿಂದೂಗಳು ಮಾಡಿದ ಆಂದೋಲನಕ್ಕೆ ತಾವು ಬಗ್ಗಲಿಲ್ಲವೆಂಬುದನ್ನು ಮಾತ್ರ ಹೇಗೆ ಮರೆಯುತ್ತಾರೆ ? ದೇವಸ್ವಮ್ ಬೋರ್ಡಗಳಲ್ಲಿ ಸರಕಾರಿ ಅಧಿಕಾರಿಗಳ ಬದಲು ಭಕ್ತರನ್ನು ನೇಮಿಸಬೇಕು, ಎಂದು ಅನೇಕ ವರ್ಷಗಳಿಂದ ನಡೆಯುತ್ತಿರುವ ಹಿಂದೂಗಳ ಬೇಡಿಕೆಯ ಕಡೆಗೆ ಮುಖ್ಯಮಂತ್ರಿಗಳು ಏಕೆ ನಿರ್ಲಕ್ಷಿಸುತ್ತಾರೆ ? ಕೇರಳದಲ್ಲಿ ಕ್ರೈಸ್ತ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ‘ಲವ್ ಜಿಹಾದ್’ನ ಹೆಚ್ಚಾಗುತ್ತಿರುವ ಪ್ರಕರಣಗಳ ವಿರುದ್ಧ ಧ್ವನಿಯನ್ನು ಎತ್ತಿದರೂ, ಶಾಂತವಾಗಿ ಏಕೆ ಕುಳಿತುಕೊಂಡಿದ್ದಾರೆ ? ಈ ಘಟನೆಯು ಕೇರಳದಲ್ಲಿನ ಬಹುಸಂಖ್ಯಾತರ ಸಂಸ್ಕೃತಿಯ ಮೂಲಕ್ಕೆ ಎದ್ದಿರುವ ಅಪಸ್ವರ ಅಲ್ಲವೇ ? ಕಾಂಗ್ರೆಸ್ ಸಹ ‘ವಿಕಾಸ ಮತ್ತು ಹಿಂದೂಗಳ ಶ್ರದ್ಧೆ’

ಇವುಗಳ ಸಮನ್ವಯವನ್ನು ಎಂದಿಗೂ ಸಾಧಿಸಿಯೇ ಇಲ್ಲ, ಇದು ಜಗತ್ತಿಗೆಲ್ಲ ತಿಳಿದಿದೆ. ವಿಕಾಸದ ಹೆಸರಿನಲ್ಲಿ ಕೋಟ್ಯವಧಿ ಹಿಂದೂಗಳಿಗಾಗಿ ಪೂಜನೀಯವಾಗಿರುವ ರಾಮಸೇತುವೆಗೆ ಕಟ್ಟುಕಥೆ ಎಂದು ಸಂಬೋಧಿಸಿ ಮತ್ತು ‘ರಾಮನೆಂಬ ವ್ಯಕ್ತಿಯು ಎಂದಿಗೂ ಇರಲೇ ಇಲ್ಲ’, ಎಂಬ ಪ್ರತಿಜ್ಞಾಪತ್ರವನ್ನು ಪ್ರಸ್ತುತಪಡಿಸಿ ರಾಮಸೇತುವೆಯನ್ನು ನಾಶ ಮಾಡುವ ಕಾರ್ಯಸೂಚಿ ಪತ್ರವನ್ನು ಕಾಂಗ್ರೆಸ್ ೨೦೦೭ ರಲ್ಲಿ ತಯಾರಿಸಿತ್ತು. ಲಕ್ಷದ್ವೀಪದ ವಿಕಾಸಕ್ಕಾಗಿ ಪ್ರಯತ್ನಿಸುವ ಜಾತ್ಯತೀತವಾದಿ ಪಟೇಲರನ್ನು ಬಹಿಷ್ಕರಿಸುವ ಭಾಷೆಯನ್ನು ಮಾತನಾಡುತ್ತಾರೆ. ನಿಜವಾಗಿಯೂ ಸರಾಯಿಯನ್ನು ನಿಷೇಧಿಸುವುದು ಆವಶ್ಯಕವಾಗಿದೆ, ಪ್ರವಾಸೋದ್ಯಮವನ್ನು ಇತರ ಅನೇಕ ಮಾರ್ಗಗಳಿಂದಲೂ ಹೆಚ್ಚಿಸಬಹುದಾಗಿದೆ; ಆದರೆ ಹಿಂದೂ ವಿರೋಧಿ ರಾಜಕಾರಣಿಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸದಾ ಕಸದ ಬುಟ್ಟಿ ತೋರಿಸುತ್ತಾರೆ, ಇದು ದುರ್ದೈವವಾಗಿದೆ.

ಇಲ್ಲಿ ಇನ್ನೊಂದು ಜಾತ್ಯತೀತದ ವಿಷಯ ಹೇಗಿದೆಯೆಂಬುದನ್ನು ನೋಡಿರಿ ! ೧೧ ವರ್ಷಗಳ ಹಿಂದೆ ಕಾಂಗ್ರೆಸ್ ಲಕ್ಷದ್ವೀಪದಲ್ಲಿ ಮ.ಗಾಂಧಿಯವರ ಪ್ರತಿಮೆಯನ್ನು ಸ್ಥಾಪಿಸಲು ಪ್ರಯತ್ನಿಸಿತು; ಆದರೆ ಮುಸಲ್ಮಾನರ ಪ್ರಖರ ವಿರೋಧದಿಂದ ಅದನ್ನು ಮುಚ್ಚಿಡಲಾಯಿತು. ಮುಸಲ್ಮಾನರ ಹೇಳಿಕೆಯೇನಿತ್ತೆಂದರೆ, ಪ್ರತಿಮೆ ಇದು ಇಸ್ಲಾಮ್‌ನಲ್ಲಿ ಹರಾಮ್ ಆಗಿದೆ. ಆಡಳಿತವು ಮಾತ್ರ ‘ಮುಸಲ್ಮಾನರ ವಿರೋಧದಿಂದ ಪ್ರತಿಮೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ’, ಎಂದು ಹೇಳಲು ಹಿಂದೇಟು ಹಾಕಿತು. ಯಾವ ಮುಸಲ್ಮಾನರ ಓಲೈಕೆಗಾಗಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರವನ್ನು ನಡೆಸಲಾಗುತ್ತದೋ, ಅವರಿಗಾಗಿ ಆಡಳಿತಾರೂಢರ ಸರ್ವಸ್ವವಾಗಿರುವ ಮ. ಗಾಂಧಿ ಇವರಿಗೆ ಬೆಲೆ ಇಲ್ಲ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಮುಸಲ್ಮಾನರ ಓಲೈಕೆಯನ್ನು ಕೇಂದ್ರದ ಸ್ಥಳದಲ್ಲಿ ನಡೆಸುವುದರಿಂದ ಅನೇಕ ದಶಕಗಳಿಂದ ವಿಕಾಸದಿಂದ ನಿರ್ಲಕ್ಷಿತವಾಗಿ ಉಳಿದ ಲಕ್ಷದ್ವೀಪದ ಭವಿಷ್ಯವು ಏನಾಗಿರಬಹುದು ಎಂಬ ಪ್ರಶ್ನೆಯು ಮಾತ್ರ ಈ ನಿಮಿತ್ತ ನಿರುತ್ತರವಾಗಿಯೇ ಉಳಿಯುತ್ತದೆ !