ಕೊರೊನಾ ಒಂದು ರೋಗವಲ್ಲ, ಅಲ್ಲಾನ ಎದುರು ಅಳುತ್ತಾ ಕ್ಷಮೆ ಕೇಳಿದರೆ ಅದು ನಾಶವಾಗುತ್ತದೆ !

ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್ ಇವರ ಹೇಳಿಕೆ !

ಮುಸಲ್ಮಾನ ಮತ್ತು ಕ್ರೈಸ್ತ ನಾಯಕರು ಕೊರೊನಾದ ನಾಶಕ್ಕಾಗಿ ದೇವರಿಗೆ ಶರಣಾಗುವ ಕರೆಯನ್ನು ನೀಡುತ್ತಾರೆ; ಆದರೆ ಯಾವುದೇ ಹಿಂದೂ ನಾಯಕನು ಇಂತಹ ಮನವಿಯನ್ನು ಮಾಡುವುದಿಲ್ಲ; ಏಕೆಂದರೆ ಅವರು ತಮ್ಮನ್ನು ಪ್ರಗತಿ(ಅಧೋಗತಿ)ಪರ ಹಾಗೂ ವಿಜ್ಞಾನನಿಷ್ಠರೆಂದು ತಿಳಿದುಕೊಳ್ಳುತ್ತಾರೆ !

ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್

ನವ ದೆಹಲಿ – ಕೊರೊನಾ ಒಂದು ರೋಗವಲ್ಲ. ಕೊರೊನಾವು ರೋಗ ಎಂದಾಗಿದ್ದರೆ, ಜಗತ್ತಿನಲ್ಲಿ ಅದಕ್ಕೆ ಏನಾದರೂ ಪರಿಹಾರ ಇರುತ್ತಿತ್ತು. ಕೊರೊನಾದ ಬಿಕ್ಕಟ್ಟು ಕೇಂದ್ರ ಸರಕಾರದ ತಪ್ಪು ನಿರ್ಧಾರಗಳಿಂದ ಉಂಟಾದ ಬಿಕ್ಕಟ್ಟಾಗಿದೆ. ಅಲ್ಲಾನ ಮುಂದೆ ಅಳುತ್ತಾ ಕ್ಷಮೆಯಾಚಿಸಿದರೆ ಬಿಕ್ಕಟ್ಟು ನಾಶವಾಗುತ್ತದೆ ಎಂದು ಉತ್ತರ ಪ್ರದೇಶದ ಮುರಾದಾಬಾದನ ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್ ಹೇಳಿದರು.

‘ಕೇಂದ್ರ ಸರಕಾರವು ಮಾಡಿದ ಅಪರಾಧಗಳಿಂದಲೇ ಕೊರೊನಾದ ಸಂಕಟ(ವಂತೆ) ಬಂದಿದೆ!’ – ಸಮಾಜವಾದಿ ಪಕ್ಷದ ಸಂಸದ ಶಫಿಕುರ್ರಹಮಾನ್ ಬರ್ಕ್

ಶಫಿಕುರ್ರಹಮಾನ್ ಬರ್ಕ್

ಸಂಸದ ಹಸನ್ ನಂತರ ಅವರದೇ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ರಹಮಾನ್ ಬರ್ಕ್ ಇವರೂ ಅದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಬರ್ಕ್ ಅವರು, ಪ್ರಸ್ತುತ ಕೇಂದ್ರ ಸರಕಾರವು ಷರಿಯತ ಕಾನೂನಿನಲ್ಲಿ ಬದಲಾವಣೆ ಮಾಡುವುದು, ಜನಸಮೂಹದ ಮೂಲಕ ಹತ್ಯೆ ಮಾಡಿಸುವುದು ಮತ್ತು ಇತರ ಅನೇಕ ಅಪರಾಧಗಳನ್ನು ಮಾಡಿದೆ, ಇದರಿಂದ ದೇಶದಲ್ಲಿ ಕೊರೊನಾದಂತಹ ದೊಡ್ಡ ಬಿಕ್ಕಟ್ಟು ಬಂದೆರಗಿದೆ. (ಗೋಹತ್ಯೆ, ಲ್ಯಾಂಡ್ ಜಿಹಾದ, ಲವ್ ಜಿಹಾದ, ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ಇತ್ಯಾದಿಗಳಿಂದ ಕೊರೊನಾ ಬಿಕ್ಕಟ್ಟು ಬಂದಿತು, ಎಂದು ಯಾರಾದರು ಹೇಳಿದರೆ ಅದು ತಪ್ಪು ಹೇಗಾಗುತ್ತದೆ ? – ಸಂಪಾದಕರು) ಎಂದು ಹೇಳಿದ್ದಾರೆ. ಕಳೆದ ವರ್ಷ ನಾನು ಕೊರೊನಾ ಇದು ರೋಗವಲ್ಲ ಎಂದು ಹೇಳಿದ್ದೆ. ರೋಗವಾಗಿದ್ದರೆ, ಅದಕ್ಕೆ ಚಿಕಿತ್ಸೆ ಇದೆ; ಆದರೆ ಕೊರೊನಾದ ಬಗ್ಗೆ ಹಾಗಿಲ್ಲ. ಅಲ್ಲಾಹನ ಮುಂದೆ ಅಳುತ್ತಾ ತಪ್ಪುಗಳಿಗೆ ಕ್ಷಮೆಯಾಚಿಸುವುದೇ ಕೊರೊನಾವನ್ನು ಜಯಿಸಲು, ಅದನ್ನು ನಾಶಮಾಡಲು ಇರುವ ಏಕೈಕ ಮಾರ್ಗವಾಗಿದೆ. ನಾವು ಮುಸಲ್ಮಾನರಿಗೆ ಮಸೀದಿಗಳಲ್ಲಿ ಮತ್ತು ಮದರಸಾಗಳಲ್ಲಿ ನಮಾಜ ಪಠಣಕ್ಕೆ ಅವಕಾಶ ನೀಡುವಂತೆ ಕೇಳಿದೆವು; ಆದರೆ ಸರಕಾರವು ನಮ್ಮ ಮಾತನ್ನು ಕೇಳಲಿಲ್ಲ. ಈ ತಪ್ಪುಗಳಿಂದ ಇಂದು ಅನೇಕ ಬಿಕ್ಕಟ್ಟುಗಳು ಬರುತ್ತಿವೆ, ಎಂದೂ ಹೇಳಿದರು. (ಒಂದುವೇಳೆ ಹೀಗಿದ್ದರೆ, ಮಧ್ಯಪ್ರಾಚ್ಯ ದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ ಇತ್ಯಾದಿಗಳಲ್ಲಿ ಮಸೀದಿಯಲ್ಲಿ ಜಿಹಾದಿ ಭಯೋತ್ಪಾದಕರು ಬಾಂಬ್ ಸ್ಫೋಟ ನಡೆಸುತ್ತಾರೆ, ಅಲ್ಪಸಂಖ್ಯಾತರ ನರಮೇಧ ಮಾಡಲಾಗುತ್ತದೆ; ಆದ್ದರಿಂದ ಅಲ್ಲಿಯೂ ಕೊರೊನಾದ ಬಿಕ್ಕಟ್ಟು ಉಂಟಾಗಿದೆ, ಎಂದು ತಿಳಿಯಬೇಕೆ ? -ಸಂಪಾದಕರು)