ಮಹಾಶಿವರಾತ್ರಿಯಂದು ದೆಹಲಿಯ ಸೌಥ ಏಷ್ಯಂ ಯುನಿವರ್ಸಿಟಿಯಲ್ಲಿ ಮಾಂಸಾಹಾರ; ಘರ್ಷಣೆ

ಸಂಬಂಧಪಟ್ಟವರಿಗೆ ಜೈಲಿಗಟ್ಟಿ!

ನವದೆಹಲಿ: ಇಲ್ಲಿನ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದ ಕ್ಯಾಂಟೀನ್‌ನಲ್ಲಿ ಮಹಾಶಿವರಾತ್ರಿಯಂದು ಮಾಂಸಾಹಾರ ನಿಡಿದ್ದರಿಂದ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ. ಇದಾದ ನಂತರ ಕಾಂಗ್ರೆಸ್ ನೇತೃತ್ವದ ‘ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ’ ಮತ್ತು ಭಾಜಪ ನೇತೃತ್ವದ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ಈ ವಿದ್ಯಾರ್ಥಿ ಸಂಘಟನೆಗಳು ಪರಸ್ಪರರ ಮೇಲೆ ವಿದ್ಯಾಪೀಠದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಆರೋಪಿಸಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಈ ಸಂದರ್ಭದಲ್ಲಿ ವಿದ್ಯಾಪೀಠದ ಆಡಳಿತವು ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದರೂ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

1. ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಪ್ರಕಾರ, ವಿಶ್ವವಿದ್ಯಾಲಯದಲ್ಲಿ ಎರಡು ಭೋಜನ ಗೃಹಗಳಿವೆ. ಅವುಗಳಲ್ಲಿ ಒಂದರಲ್ಲಿ ಮಹಾಶಿವರಾತ್ರಿಯ ದಿನದಂದು ಅಂದರೆ ಫೆಬ್ರವರಿ 26 ರಂದು ಮಾಂಸಾಹಾರ ಊಟವನ್ನು ನೀಡಲಾಗುತ್ತಿತ್ತು. ಎಬಿವಿಪಿಗೆ ಸಂಬಂಧಿಸಿದ ಕೆಲವು ವಿದ್ಯಾರ್ಥಿಗಳು ಭೋಜನ ಗೃಹಕ್ಕೆ ನುಗ್ಗಿ ಆಹಾರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಆಗ ಊಟದ ಹಾಲ್‌ನಲ್ಲಿದ್ದ ಓರ್ವ ವಿದ್ಯಾರ್ಥಿನಿ ಇದನ್ನು ವಿರೋಧಿಸಿದಾಗ ಅವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.

2. ಕೆಲವು ಎಡಪಂಥೀಯ ವಿದ್ಯಾರ್ಥಿಗಳು ಉಪವಾಸ ಮುರಿಯಲು ಪ್ರಯತ್ನಿಸುತ್ತಿದ್ದರು. ಎಂದು ಎಬಿವಿಪಿ ಹೇಳಿದೆ. ಮಹಾಶಿವರಾತ್ರಿಯಂತಹ ದಿನಗಳಲ್ಲಿ ಮಾಂಸಾಹಾರಿ ಊಟ ನೀಡುವುದು ಸೈದ್ಧಾಂತಿಕ ಭಯೋತ್ಪಾದನೆ ಎಂದು ಅವರು ಹೇಳಿದ್ದಾರೆ.