ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಹಾಗೂ ಶಿವನ ದರ್ಶನವನ್ನು ಪಡೆಯುವ ಪದ್ಧತಿ !

ಶಿವನಿಗೆ ಬಿಲ್ಚಪತ್ರೆಯನ್ನು ಅರ್ಪಿಸುವ ಪದ್ಧತಿ

 

ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್ |

ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ ||

– ಬಿಲ್ವಾಷ್ಟಕ, ಶ್ಲೋಕ ೧

ಅರ್ಥ : ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತೇನೆ.

ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ಪದ್ಧತಿಯ ಹಿಂದಿನ ಅಧ್ಯಾತ್ಮಶಾಸ್ತ್ರ

೧. ತಾರಕ ಅಥವಾ ಮಾರಕ ಉಪಾಸನೆಯ ಪದ್ಧತಿಗನುಸಾರ ಬಿಲ್ವವನ್ನು ಹೇಗೆ ಅರ್ಪಿಸಬೇಕು ?

ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.

೧ ಅ. ಶಿವನ ತಾರಕ ರೂಪದ ಉಪಾಸನೆ ಮಾಡುವವರು

ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಶಿವನ ತಾರಕ ಉಪಾಸನೆಯು ಅವರ ಪ್ರಕೃತಿಗೆ ಹೊಂದುವಂತಹ ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ. ಇಂತಹವರು ಶಿವನ ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. (ಬಿಲ್ವಂ ತು ನ್ಯುಬ್ಜಂ ಸ್ವಾಭಿಮುಖಾಗ್ರಂ ಚ |)

೧ ಆ. ಶಿವನ ಮಾರಕ ರೂಪದ ಉಪಾಸನೆ ಮಾಡುವವರು

ಶಾಕ್ತಪಂಥೀಯರು ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ. ಇಂತಹವರು ಶಿವನ ಮಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.

ಬಿಲ್ವಪತ್ರೆಯನ್ನು ಕೆಳಮುಖವಾಗಿ ಏಕೆ ಅರ್ಪಿಸಬೇಕು ?

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ. ಶಿವನಿಗೆ ತಾಜಾ ಬಿಲ್ವಪತ್ರೆ ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ.

ಶಿವಾಲಯದಲ್ಲಿ ಪೂಜೆಯನ್ನು ಮಾಡಲು ಎಲ್ಲಿ ಕುಳಿತುಕೊಳ್ಳಬೇಕು ?

ದೇವಸ್ಥಾನದಲ್ಲಿ ಪೂಜೆ ಮತ್ತು ಸಾಧನೆಯನ್ನು ಮಾಡುವವರು ಸಾಮಾನ್ಯವಾಗಿ ದೇವರ ಲಹರಿಗಳನ್ನು ನೇರವಾಗಿ ಶರೀರದ ಮೇಲೆ ತೆಗೆದುಕೊಳ್ಳುವುದಿಲ್ಲ; ಏಕೆಂದರೆ ಈ ಲಹರಿಗಳನ್ನು ನೇರವಾಗಿ ಶರೀರದ ಮೇಲೆ ತೆಗೆದುಕೊಂಡರೆ ತೊಂದರೆಯಾಗುತ್ತದೆ. ಶಿವಾಲಯದಲ್ಲಿ ಹರಿನಾಳದ (ಅಭಿಷೇಕದ ನೀರು ಹೋಗುವ ದಾರಿ) ಎದುರಿನಲ್ಲಿ ಕುಳಿತುಕೊಳ್ಳದೇ ಮೇಲಿನ ಆಕೃತಿಯಲ್ಲಿ ತೋರಿಸಿದಂತೆ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ; ಏಕೆಂದರೆ ಶಿವನ ಲಹರಿಗಳು ಎದುರಿನ ಬದಿಯಿಂದ ಹೊರಬೀಳದೇ ಹರಿನಾಳದ ಬದಿಯಿಂದ ಹೊರಬೀಳುತ್ತವೆ. ೧ ರಿಂದ ೭ – ಇಲ್ಲಿ ಕುಳಿತುಕೊಂಡು ಪೂಜೆ ಮಾಡಬೇಕು. ೮ – ಇಲ್ಲಿ ಕುಳಿತುಕೊಳ್ಳಬಾರದು.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನದ ಗ್ರಂಥ ‘ಶಿವ’)

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನದ ಗ್ರಂಥ ‘ಶಿವ’)

ಶಿವತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳು

೧ – ಶಾಂತಿಯ ಅನುಭೂತಿಯನ್ನು ನೀಡುವುದು

೨ – ಶಕ್ತಿಯ ಸ್ವಂದನವನ್ನು ನಿರ್ಮಿಸುವುದು

(ಆಧಾರ : ಸನಾತನದ ನಿರ್ಮಿತ ಕಿರುಗ್ರಂಥ ‘ದೇವತೆಗಳ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ ಗಳು’)

ಬಿಲ್ವ-ದೂರ್ವೆಗಳಂತೆ ಗುಣಾತೀತ ಅವಸ್ಥೆಯಿಂದ ಗುಣವನ್ನು ತೆಗೆದುಕೊಂಡು ಕಾರ್ಯ ಮಾಡಿದರೆ, ಆ ಕಾರ್ಯ ಮಾಡಿಯೂ ಮಾಡದಂತಿರಬಹುದು

‘ಶಿವನಿಗೆ ತ್ರಿದಳಬಿಲ್ವವು ಇಷ್ಟವಾಗುತ್ತದೆ; ಅಂದರೆ ಯಾರು ತನ್ನ ಸತ್ತ್ವ , ರಜ ಮತ್ತು ತಮ ಈ ಮೂರೂ ಗುಣಗಳನ್ನು ಶಿವನಿಗೆ ಅರ್ಪಿಸಿ ಸಮರ್ಪಣೆಯ ಬುದ್ಧಿಯಿಂದ ಭಗವತ್ಕಾರ್ಯವನ್ನು ಮಾಡುತ್ತಾನೆಯೋ ಅವನ ಮೇಲೆ ಶಿವನು ಸಂತುಷ್ಟನಾಗುತ್ತಾನೆ. ಶ್ರೀಗಣೇಶನು ಸಹ ತ್ರಿದಳ ದೂರ್ವೆಯನ್ನು ಸ್ವೀಕರಿಸುತ್ತಾನೆ. ಬಿಲ್ವ ಮತ್ತು ದೂರ್ವೆಗಳು ಗುಣಾತೀತ ಅವಸ್ಥೆಯಲ್ಲಿದ್ದು ಗುಣಗಳ ಮೂಲಕ ಭಗವಂತನ ಕಾರ್ಯ ಮಾಡುತ್ತವೆ, ಹಾಗಾಗಿ ಅವು ಭಕ್ತರಿಗೆ, ‘ನೀವು ಸಹ ಗುಣಾತೀತರಾಗಿ ಭಕ್ತಿಭಾವದಿಂದ ಕಾರ್ಯವನ್ನು ಮಾಡಿ’ ಎಂದು ಹೇಳುತ್ತವೆ. ಗುಣಾತೀತ ಅವಸ್ಥೆಯಿಂದ ಗುಣ ತೆಗೆದುಕೊಂಡು ಕಾರ್ಯ ಮಾಡಿದರೆ ಆ ಕಾರ್ಯ ಮಾಡಿಯೂ ಮಾಡದಂತಾಗುತ್ತದೆ’.

– ಪರಾತ್ಪರ ಗುರು ಪರಶರಾಮ ಮಾಧವ ಪಾಂಡೆ ಮಹಾರಾಜರು.