ಮೋಕ್ಷದಾಯಿನಿ ಕಾಶಿವಿಶ್ವನಾಥ ನಗರ !

‘ಕಾಶಿನಗರ ಶಿವನ ತ್ರಿಶೂಲದ ಮೇಲೆ ವಿರಾಜಮಾನವಾಗಿದೆ’, ಎಂದು ಹಿಂದೂ ಧರ್ಮಗ್ರಂಥಗಳ ಆಧಾರ ನೀಡಿ ಹೇಳಲಾಗುತ್ತದೆ. ಕಾಶಿಯ ಭೂಮಿ ತ್ರಿಶೂಲದ ಮೇಲೆ ಇರುವುದರಿಂದ ಪ್ರಳಯದಲ್ಲಿ ಸಂಪೂರ್ಣ ಪೃಥ್ವಿಯು ಮುಳುಗಿದರೂ, ಕಾಶಿನಗರ ಸುರಕ್ಷಿತವಾಗಿರುವುದು, ಎಂಬುದು ಅದರ ಅದ್ಭುತ ಮಹಾತ್ಮೆಯಾಗಿದೆ ! ಕಾಶಿಯು ಭಗವಾನ ಶಿವನ ರಾಜಧಾನಿಯಾಗಿದೆ. ಕಾಶಿ, ಬನಾರಸ್‌ ಅಥವಾ ವಾರಾಣಸಿ ಇವು ಕಾಶಿಕ್ಷೇತ್ರದ ಕೆಲವು ಪ್ರಸಿದ್ಧ ಹೆಸರುಗಳಾಗಿವೆ. ಕಾಶಿಯ ಅರ್ಥ ಪ್ರಕಾಶ ಕೊಡುವ ನಗರ, ಪವಿತ್ರ ತೇಜಸ್ವಿ ನಗರ ! ವರುಣಾ (ನದಿ) ದಿಂದ ಅಸ್ತೀ (ಘಟ್ಟದ) ವರೆಗೆ ಈ ಪ್ರದೇಶ ಇರುವುದರಿಂದ ಅದಕ್ಕೆ ವಾರಾಣಸಿ ಎನ್ನುತ್ತಾರೆ. ಈ ಸ್ಥಳದಲ್ಲಿ ಸಂಗೀತ, ಭಕ್ತಿ ಹಾಗೂ ಶ್ರದ್ಧೆಯ ರಸ ಶಾಶ್ವತವಾಗಿರುವುದರಿಂದ ಅದಕ್ಕೆ ‘ಬನಾರಸ್’ ಎಂದೂ ಹೇಳುತ್ತಾರೆ. ಕಾಶಿ ಇದು ಮೋಕ್ಷದಾಯಿನಿ ಆಗಿದೆ. ಇಂತಹ ಕಾಶಿಯ ವಿಷಯದಲ್ಲಿ ತಿಳಿದುಕೊಳ್ಳೋಣ.

ಶ್ರೀ. ಯಜ್ಞೇಶ ಸಾವಂತ

೧. ಸಂಕ್ಷಿಪ್ತ ಇತಿಹಾಸ

ಕಾಶಿವಿಶ್ವನಾಥ ಮಂದಿರದ ಇತಿಹಾಸವನ್ನು ಸಂಕ್ಷಿಪ್ತದಲ್ಲಿ ತಿಳಿದುಕೊಳ್ಳೋಣ. ೧೦೩೪ ರಲ್ಲಿ ಮೂಲ ಮಂದಿರವನ್ನು ಕೆಡವಲಾಯಿತು. ಅದನ್ನು ಪುನಃರ್ನಿರ್ಮಿಸಿದಾಗ ೧೧೯೪ ರಲ್ಲಿ ಮಹಮ್ಮದ ಘೋರಿಯ ಸೇನಾಪತಿ ಕುತುಬುದ್ದೀನ ಐಬಕನು ಮಂದಿರವನ್ನು ಕೆಡವಿದನು, ಆಗ ಓರ್ವ ಗುಜರಾತಿ ವ್ಯಾಪಾರಿ ಅದನ್ನು ಪುನರ್ನಿರ್ಮಿಸಿದರು. ೧೪೪೭ ರಲ್ಲಿ ಜೌನಪುರದ ಸುಲ್ತಾನ ಮಹಮೂದ ಶಾಹ ಶರ್ಕೀ ಎಂಬವನು ಮಂದಿರವನ್ನು ಪುನಃ ಕೆಡವಿದನು, ಅಕ್ಬರನ ನವರತ್ನಗಳ ಪೈಕಿ ರಾಜಾ ತೋಡರಮಲ ಎಂಬವನು ಪುನಃ ೧೫೮೫ ರಲ್ಲಿ ಮಂದಿರವನ್ನು ನಿರ್ಮಿಸಿದನು. ೧೬೩೨ ರಲ್ಲಿ ಶಹಾಜಹಾನನು ಈ ಮಂದಿರವನ್ನು ಉರುಳಿಸಲು ಸೈನ್ಯವನ್ನು ಕಳುಹಿಸಿದನು. ಈ ಸಂದರ್ಭದಲ್ಲಿ ಹಿಂದೂಗಳು ತೀವ್ರ ವಿರೋಧಿಸಿದುದರಿಂದ ಶಹಾಜಹಾನನಿಗೆ ಈ ಮಂದಿರವನ್ನು ಉರುಳಿಸಲು ಸಾಧ್ಯವಾಗಲಿಲ್ಲ; ಆದರೆ ಸುತ್ತಮುತ್ತಲಿನ ೬೦ ಕ್ಕಿಂತಲೂ ಹೆಚ್ಚು ಮಂದಿರಗಳನ್ನು ನೆಲಸಮಗೊಳಿಸಿದನು.

ಔರಂಗಜೇಬನು ೧೬೬೯ ರಲ್ಲಿ ಮಂದಿರ ಮತ್ತು ಸಂಸ್ಕೃತ ವಿದ್ಯಾಲಯವನ್ನು ಉರುಳಿಸಲು ಆದೇಶ ನೀಡಿದನು. ಆಗ ಅದನ್ನು ಕೆಡವಲಾಯಿತು. ಮಾಸಿರ-ಎ-ಆಲಮಗಿರಿ ಈ ಪುಸ್ತಕ ದಲ್ಲಿ ಲೇಖಕ ಮುಸ್ತಯೀದ ಖಾನ್‌ ಇವನು ಔರಂಗಜೇಬನ ಮಂದಿರಗಳನ್ನು ಉರುಳಿಸುವ ಆದೇಶಗಳನ್ನು ಉಲ್ಲೇಖಿಸಿದ್ದಾನೆ. ಇತಿಹಾಸಕಾರ ಆಡ್ರೆ ದುಶ್ಕೆ ಇವನ ಔರಂಗಜೇಬನ ಕುರಿತಾದ ಪುಸ್ತಕಕ್ಕನುಸಾರ ಜ್ಞಾನವಾಪಿ ಮಸೀದಿಯನ್ನು ಔರಂಗಜೇಬನ ಕಾಲದಲ್ಲಿ ನಿರ್ಮಿಸಲಾಯಿತು. ಈ ಮಸೀದಿಯಲ್ಲಿ ಮೂಲ ವಿಶ್ವನಾಥ ಮಂದಿರದ ಅವಶೇಷಗಳನ್ನು ಉಪಯೋಗಿಸಲಾಗಿದೆ.

ಅನಂತರ ಮರಾಠರ ಸುಭೇದಾರ ಮಲ್ಹಾರರಾವ ಹೋಳಕರ್‌ ಇವರು ಮಸೀದಿಯನ್ನು ಉರುಳಿಸಲು ದೊಡ್ಡ ಸೈನ್ಯ ಕಟ್ಟಿಕೊಂಡು ಬಂದರು; ಆದರೆ ಅಲ್ಲಿನ ಅರ್ಚಕರು ಅವರಿಗೆ ‘ನೀವು ಮಸೀದಿಯನ್ನು ಉರುಳಿಸಿ ಹೊರಟು ಹೋಗುವಿರಿ; ಆದರೆ ನಾವು ಮೊಗಲರನ್ನು ಎದುರಿಸಬೇಕಾಗುವುದು’, ಎಂದು ಹೇಳಿದಾಗ ಅವರು ಹಿಂದಿರುಗಿದರು. ೧೭೭೭ ರಲ್ಲಿ ಇಂದೂರಿನ ರಾಣಿ ಪುಣ್ಯಶ್ಲೋಕ ಅಹಿಲ್ಯಾಬಾಯಿ ಹೋಳಕರ್‌ ಇವರು ವಿಶ್ವನಾಥ ಮಂದಿರವನ್ನು ನಿರ್ಮಿಸಲು ನಿರ್ಧರಿಸಿದರು ಹಾಗೂ ೩ ವರ್ಷಗಳಲ್ಲಿ ಮಂದಿರ ಪೂರ್ಣವಾಯಿತು. ಬ್ರಿಟಿಷ್‌ ವಾಸ್ತುವಿಶಾರದ ಹಾಗೂ ಲೇಖಕ ಜೇಮ್ಸ್ ಪ್ರಿನ್ಸೆಸ್‌ ಇವರು ೧೮೩೧ ರಲ್ಲಿ ವಾರಾಣಸಿಯ ವಿಷಯದಲ್ಲಿ ಅವರು ಬರೆದ ಪುಸ್ತಕದಲ್ಲಿ ಲಿಥೋಗ್ರಾಫಿ ತಂತ್ರದ ಮೂಲಕ ಮಂದಿರದ ಅಸ್ತಿತ್ವದ ಪುರಾವೆಯನ್ನು ನೀಡಿದ್ದರು. ಮಂದಿರದ ನಕಾಶೆಯನ್ನು ಪುಸ್ತಕದಲ್ಲಿ ನೀಡಿದರು. ವಿಶ್ವೇಶ್ವರ ಮಂದಿರದ ಸುತ್ತಲೂ ೩ ಕಟ್ಟಡಗಳಿಂದ ಸುತ್ತುವರಿದ ಮಂದಿರದ ಚಿತ್ರವನ್ನು ತೋರಿಸಿದ್ದಾರೆ. ಜ್ಞಾನವಾಪಿ ಮಸೀದಿಯ ದೊಡ್ಡ ಗುಮ್ಮಟದ ಮೇಲೆ ಉಲ್ಟಾ ಕಮಲ, ಕಲಶದೊಂದಿಗೆ ತೋರಿಸಿದ್ದಾರೆ.

೨. ಕಾಶಿಯ ಶಿವಲಿಂಗದ ಸಾಮರ್ಥ್ಯ !

ವಿಶ್ವನಾಥನ ಶಿವಲಿಂಗವನ್ನು ಕಿತ್ತೆಸೆಯುವ, ಅಪಹರಿಸಲು ಮಂದಿರದ ಮೇಲೆ ಆಕ್ರಮಣ ಮಾಡುವ ಜಿಹಾದಿ ಶಾಸಕರಿಂದ ಪದೇ ಪದೇ ಪ್ರಯತ್ನಿಸಲಾಯಿತು; ಆದರೆ ಅದು ಒಂದು ಇಂಚಿನಷ್ಟೂ ಅಲ್ಲಾಡಲಿಲ್ಲ. ಕ್ರೂರ ಆಕ್ರಮಣಕಾರರು ಮಂದಿರದ ಸಂಪತ್ತನ್ನು ಲೂಟಿ ಮಾಡಿದರು, ಮಂದಿರವನ್ನು ಕೆಡಹಿದರು, ಆದರೆ ಶಿವಲಿಂಗ ಇದ್ದಲ್ಲಿಯೆ ಇದೆ. ಇದುವೇ ಭಗವಾನ ಶಿವನ ಶಕ್ತಿ !

೩. ಕಾಶಿಖಂಡದ ಮಹಾತ್ಮೆ

ಕಾಶಿಯ ಮಹಾತ್ಮೆಗೆ ಸಂಬಂಧಿಸಿದ ಅನೇಕ ಗ್ರಂಥಗಳಿವೆ. ‘ಸ್ಕಂದಪುರಾಣ’ದಲ್ಲಿನ ಒಂದು ಖಂಡವೆಂದರೆ ಕಾಶಿಖಂಡ. ಅದರಲ್ಲಿ ಕಾಶಿಯ ಪರಿಚಯ, ಮಹಾತ್ಮೆ, ಆಧಿದೈವಿಕ ಸ್ವರೂಪದ ವರ್ಣನೆಯಿದೆ. ಕಾಶಿಗೆ ‘ಆನಂದವನ’ ಎಂದು ಕೂಡ ಹೇಳಲಾಗುತ್ತದೆ. ಕಾಶಿಯ ಅಲೌಕಿಕ ಮಹತ್ವದ ವಿಷಯವನ್ನು ಭಗವಾನ ಶಿವನು ಪಾರ್ವತಿ ಮಾತೆಗೆ ಹೇಳಿದನು. ಕಾರ್ತಿಕೇಯನು ತನ್ನ ತಾಯಿಯ ಮಡಿಲಲ್ಲಿ ಕುಳಿತು ಕೇಳಿದನು ಹಾಗೂ ನಂತರ ಅಗಸ್ತ್ಯಋಷಿಗಳಿಗೆ ಅದನ್ನು ಹೇಳಿದನು. ಋಷಿಗಳು ಅದನ್ನು ಶಬ್ದಗಳಲ್ಲಿ ಪೋಣಿಸಿದರು. ಅದುವೇ ಈ ಕಾಶಿಖಂಡ !

೪. ಕಾಶಿಯ ವ್ಯಾಪ್ತಿ

ಕಾಲಭೈರವನು ಕಾಶಿಯ ಮುಖ್ಯ ರಕ್ಷಕ ದೇವತೆ ಅಥವಾ ನಗರರಕ್ಷಕನಾಗಿದ್ದಾನೆ. ಒಂದು ಓಣಿಯಲ್ಲಿ ಕಾಲಭೈರವನ ಮಂದಿರವಿದೆ. ಕಾಶಿಯಲ್ಲಿ ೧ ಸಾವಿರದ ೫೦೦ ಕ್ಕಿಂತಲೂ ಹೆಚ್ಚು ಮಂದಿರಗಳಿವೆ, ಅಂದರೆ ಪ್ರತಿಯೊಂದು ಓಣಿಯಲ್ಲಿ ಒಂದು ಮಂದಿರವಿದೆ. ಕಾಶಿಯಲ್ಲಿ ಬಹಳ ಪ್ರಸಿದ್ಧ ‘ಸಂಕಟಮೋಚನ ಹನುಮಾನ ಮಂದಿರ’ವೂ ಇದೆ. ಕೆಲವು ವರ್ಷಗಳ ಹಿಂದೆ ಭಯೋತ್ಪಾದಕರು ಇಲ್ಲಿ ಬಾಂಬ್‌ಸ್ಫೋಟ ಮಾಡಿದ್ದರು. ಇದರ ಜೊತೆಗೆ ಇಲ್ಲಿ ಲೋಲಕ ತೀರ್ಥ, ಸಂಗಮತೀರ್ಥ ಇಂತಹ ನೂರಾರು ತೀರ್ಥಗಳಿವೆ. ಕಾಶಿಖಂಡದಲ್ಲಿ ೧೫೦ ತೀರ್ಥಗಳು, ೫೬ ವಿನಾಯಕ ಮಂದಿರಗಳು ಹಾಗೂ ೧೪ ಮಹಾಲಿಂಗಗಳ ವರ್ಣನೆಯಿದೆ. ಅದೇ ರೀತಿ ಕಾಶಿಯಲ್ಲಿ ಅನೇಕ ಶಿವಮಂದಿರಗಳಿವೆ. ಇಲ್ಲಿ ಬನಾರಸ ಹಿಂದೂ ವಿಶ್ವವಿದ್ಯಾಲಯವಿದೆ, ಅದನ್ನು ಭಾರತರತ್ನ ಪಂಡಿತ ಮದನ ಮೋಹನ ಮಾಳವೀಯ ಇವರು ಸ್ಥಾಪಿಸಿದ್ದರು, ಅದು ಜಗತ್ಪ್ರಸಿದ್ಧವಾಗಿದೆ. ಕಾಶಿಯು ಇಂತಹ ತನ್ನ ಅನುಪಮ ಸಾಮರ್ಥ್ಯದ ಮೂಲಕ ಹಾಗೂ ಸೌಂದರ್ಯದ ಮೂಲಕ ಹಿಂದೂ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ, ತನ್ನಲ್ಲಿ ಸಮಾವೇಶಗೊಳಿಸಿಕೊಳ್ಳುತ್ತದೆ. ಕಾಶಿಯಲ್ಲಿ ಕಸಕಡ್ಡಿ, ಯಾವುದೇ ಅವ್ಯವಸ್ಥೆ, ಅಸ್ವಚ್ಛತೆ ನಮಗೆ ಕಾಣಿಸಿದರೂ ಅಲ್ಲಿನ ವೈಶಿಷ್ಟ್ಯಪೂರ್ಣ ಹಾಗೂ ದೈವೀ ಚೈತನ್ಯದಿಂದ ತುಂಬಿರುವ ವಾತಾವರಣದಲ್ಲಿ ನಮಗೆ ಅದರ ಅರಿವು ಕೂಡ ಆಗುವುದಿಲ್ಲ. ಕಾಶಿಗೆ ಹೋಗಿ ಬಂದನಂತರ, ಕಾಶಿಯಾತ್ರೆ ಪೂರ್ಣಗೊಳಿಸಿದ ನಂತರ ಜೀವನದಲ್ಲಿ ಏನಾದರೂ ಗಳಿಸಿದ ಆನಂದ ನಮಗೆ ಸಿಗುತ್ತದೆ.’

– ಶ್ರೀ. ಯಜ್ಞೇಶ ಸಾವಂತ, ಸನಾತನ ವಸತಿ ಸಂಕೀರ್ಣ, ದೇವದ ಪನವೇಲ್. (೭.೨.೨೦೨೪)