ಬೆಂಗಳೂರು – ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಮರುದಿನ (ಫೆಬ್ರುವರಿ ೨೭ ರಂದು) ಹಿಂದೂ ಸಿಬ್ಬಂದಿಗಳಿಗೆ ರಜೆ ನೀಡಿ, ಎಂದು ಹಿಂದೂ ನಾಯಕರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ. ರಮಝಾನಗಾಗಿ ಮುಸಲ್ಮಾನ ಸಿಬ್ಬಂದಿಗಳು ಪ್ರತಿ ದಿನ ಒಂದು ಗಂಟೆ ಮೊದಲೇ ಕಚೇರಿಯಿಂದ ಬೇಗ ಹೋಗಲು ಅನುಮತಿ ನೀಡಬೇಕೆಂದು ಮುಸಲ್ಮಾನ ನಾಯಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದರ ನಂತರ ತಕ್ಷಣವೇ ಹಿಂದೂ ನಾಯಕರು ಮೇಲಿನ ಮನವಿ ಸಲ್ಲಿಸಿದ್ದಾರೆ. ಮಹಾಶಿವರಾತ್ರಿಯ ದಿನದಂದು ಜನರು ಜಾಗರಣೆ ಮಾಡುತ್ತಿರುವುದರಿಂದ ಮರುದಿನ ಕಾರ್ಯಾಲಯಕ್ಕೆ ಬಂದು ಕೆಲಸ ಮಾಡುವುದು ಕಠಿಣವಾಗುತ್ತದೆ, ಎಂದು ಹಿಂದೂ ನಾಯಕರು ಹೇಳಿದ್ದಾರೆ.