ತೇಜಸ್ವಿ ಜ್ಯೋತಿರ್ಲಿಂಗಗಳು !

ಭಗವಾನ ಶಿವನ ಪ್ರಮುಖ ಜ್ಯೋತಿರ್ಲಿಂಗಗಳು

ಭಗವಾನ ಶಿವನ ೧೨ ಜ್ಯೋತಿರ್ಲಿಂಗಗಳು ಪ್ರಸಿದ್ಧವಾಗಿವೆ.ಜ್ಯೋತಿರ್ಲಿಂಗಗಳ ದರ್ಶನವನ್ನು ಪಡೆಯಲು ಸಾವಿರಾರು ಜನರು ಸೇರುತ್ತಾರೆ. ‘ಜ್ಯೋತಿರ್ಲಿಂಗ’ ಈ ಶಬ್ದದ ಅರ್ಥವೆಂದರೆ, ‘ವ್ಯಾಪಕ ಬ್ರಹ್ಮಾತ್ಮಲಿಂಗ’ ಅಂದರೇ ‘ವ್ಯಾಪಕ ಪ್ರಕಾಶ’ ! ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚಮಹಾಭೂತಗಳು ಎಂಬ ಹನ್ನೆರಡು ತತ್ತ್ವ ಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ. ಪಾಣಿಪೀಠವು ಯಜ್ಞವೇದಿಕೆಯ ಮತ್ತು ಲಿಂಗವು ಯಜ್ಞದ ಪ್ರತೀಕವಾಗಿರುವ ಜ್ಯೋತಿಯ, ಅಂದರೆ ಯಜ್ಞಶಿಖೆಯ ಪ್ರತೀಕವಾಗಿದೆ. ಭಾರತದಲ್ಲಿ ೧೨ ಶಿವಸ್ಥಾನಗಳು ಅಂದರೆ ೧೨ ಮುಖ್ಯ ಜ್ಯೋತಿರ್ಲಿಂಗಗಳಿವೆ. ಅವುಗಳು ತೇಜೋಮಯ ರೂಪದಲ್ಲಿ ಪ್ರಕಟವಾಗಿವೆ.

ಶ್ರೀ. ರಮೇಶ ಶಿಂದೆ

ಜ್ಯೋತಿರ್ಲಿಂಗ ಸ್ಥಾನ

೧. ಸೋಮನಾಥ ಪ್ರಭಾಸಪಟ್ಟಣ, ವೇರಾವಳದ ಹತ್ತಿರ, ಸೌರಾಷ್ಟ್ರ, ಗುಜರಾತ.
೨. ಮಲ್ಲಿಕಾರ್ಜುನ ಶ್ರೀಶೈಲ, ಆಂಧ್ರಪ್ರದೇಶ.
೩. ಮಹಾಕಾಳ ಉಜ್ಜೈನಿ, ಮಧ್ಯಪ್ರದೇಶ.
೪. ಓಂಕಾರ / ಅಮಲೇಶ್ವರ ಓಂಕಾರ, ಮಾಂಧಾತಾ, ಮಧ್ಯಪ್ರದೇಶ.
೫. ಕೇದಾರನಾಥ ಹಿಮಾಲಯ
೬. ಭೀಮಾಶಂಕರ ಡಾಕಿನಿ ಕ್ಷೇತ್ರ, ಖೇಡ ತಾಲೂಕು, ಪುಣೆ ಜಿಲ್ಲೆ, ಮಹಾರಾಷ್ಟ್ರ.
೯. ವೈದ್ಯನಾಥ (ವೈಜನಾಥ) ಪರಳಿ, ಬೀಡ ಜಿಲ್ಲೆ, ಮಹಾರಾಷ್ಟ್ರ.

೭. ವಿಶ್ವೇಶ್ವರ ವಾರಾಣಸಿ, ಉತ್ತರ ಪ್ರದೇಶ.
೮. ತ್ರ್ಯಂಬಕೇಶ್ವರ ನಾಸಿಕದ ಹತ್ತಿರ, ಮಹಾರಾಷ್ಟ್ರ.
೧೦. ನಾಗೇಶ (ನಾಗನಾಥ) ದಾರುಕಾವನ, ಔಂಢಾ, ಹಿಂಗೋಲಿ ಜಿಲ್ಲೆ, ಮಹಾರಾಷ್ಟ್ರ.
೧೧. ರಾಮೇಶ್ವರ ಸೇತುಬಂಧ, ಕನ್ಯಾಕುಮಾರಿಯ ಹತ್ತಿರ, ತಮಿಳುನಾಡು.
೧೨. ಘೃಷ್ಣೇಶ್ವರ (ಘೃಷ್ಮೇಶ) ವೇರುಳ, ಸಂಭಾಜಿನಗರ ಜಿಲ್ಲೆ, ಮಹಾರಾಷ್ಟ್ರ.

ಈ ೧೨ ಜ್ಯೋತಿರ್ಲಿಂಗಗಳು ಅಂದರೆ ಪ್ರತಿಕಾತ್ಮಕ ರೂಪ ದಲ್ಲಿನ ದೇಹವಾಗಿದೆ. ಕಾಠ್ಮಾಂಡುನಲ್ಲಿ ಪಶುಪತಿನಾಥವು ಜ್ಯೋತಿರ್ಲಿಂಗದ ಮಸ್ತಕವಾಗಿದೆ, ‘ದಕ್ಷಿಣ ದಿಕ್ಕಿನ ಸ್ವಾಮಿಯಾದ ಯಮರಾಜನು ಶಿವನ ನಿಯಂತ್ರಣದಲ್ಲಿರುತ್ತಾನೆ; ಆದ್ದರಿಂದ ದಕ್ಷಿಣ ದಿಕ್ಕು ಶಿವನಿಗೆ ಸೇರಿದೆ’, ಎಂದು ಮನ್ನಣೆ ಇದೆ. ‘ಅರ್ಘಾ’ದ ಸ್ರೋತವು ದಕ್ಷಿಣ ದಿಕ್ಕಿಗೆ ಇದ್ದರೆ ಆ ಜ್ಯೋತಿರ್ಲಿಂಗವು ದಕ್ಷಿಣಾಭಿಮುಖವಾಗಿರುತ್ತದೆ ಮತ್ತು ಇಂತಹ ಶಿವಲಿಂಗಗಳು ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಉಜ್ಜೈನಿಯು ಭಗವಾನ ಮಹಾಕಾಲ ದೇವನ ಲಿಂಗವು ಇದೇ ರೀತಿ ದಕ್ಷಿಣಾಭಿಮುಖವಾಗಿದೆ. ಎಲ್ಲ ದೇವಸ್ಥಾನಗಳು ದಕ್ಷಿಣಾಭಿಮುಖವಾಗಿರುವುದಿಲ್ಲ.

ಜ್ಯೋತಿರ್ಲಿಂಗಗಳ ಮಹತ್ವ !

ಸಂತರು ಸಮಾಧಿಯನ್ನು ಸ್ವೀಕರಿಸಿದ ನಂತರ ಅವರ ಕಾರ್ಯವು ಹೆಚ್ಚು ಪ್ರಮಾಣದಲ್ಲಿ ಸೂಕ್ಷ್ಮದಲ್ಲಿ ನಡೆಯುತ್ತದೆ. ಸಂತರು ದೇಹತ್ಯಾಗ ಮಾಡಿದ ನಂತರ ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯಲಹರಿ ಮತ್ತು ಸಾತ್ತ್ವಿಕ ಲಹರಿಗಳ ಪ್ರಮಾಣವು ಹೆಚ್ಚಿರುತ್ತದೆ. ಹೇಗೆ ಸಂತರ ಸಮಾಧಿಯು ಭೂಮಿಯ ಕೆಳಗಿರುತ್ತದೆಯೋ, ಹಾಗೆಯೇ ಜ್ಯೋತಿರ್ಲಿಂಗಗಳು ಮತ್ತು ಸ್ವಯಂಭೂ ಶಿವಲಿಂಗಗಳು ಭೂಮಿಯ ಕೆಳಗಿರುತ್ತವೆ. ಈ ಶಿವಲಿಂಗಗಳಲ್ಲಿ ಇತರ ಶಿವಲಿಂಗಗಳ ತುಲನೆಯಲ್ಲಿ ನಿರ್ಗುಣ ತತ್ತ್ವದ ಪ್ರಮಾಣವು ಹೆಚ್ಚಿರುವುದರಿಂದ ಅವುಗಳಿಂದ ಚೈತನ್ಯ ಮತ್ತು ಸಾತ್ತ್ವಿಕತೆಯು ಹೆಚ್ಚು ಪ್ರಮಾಣದಲ್ಲಿ ಮತ್ತು ಸತತವಾಗಿ ಪ್ರಕ್ಷೇಪಿಸುತ್ತಿರುತ್ತದೆ. ಇದರಿಂದ ಪೃಥ್ವಿಯ ಮೇಲಿನ ವಾತಾವರಣವು ಸತತವಾಗಿ ಶುದ್ಧವಾಗುತ್ತಿರುತ್ತದೆ, ಅದರೊಂದಿಗೆ ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳು ಪಾತಾಳದ ದಿಕ್ಕಿ ನಲ್ಲಿಯೂ ಸತತವಾಗಿ ಚೈತನ್ಯ ಮತ್ತು ಸಾತ್ತ್ವಿಕತೆಯನ್ನು ಪ್ರಕ್ಷೇಪಿಸುತ್ತವೆ. ಅದರ ಪರಿಣಾಮ ಪೃಥ್ವಿಯ ವಾತಾವರಣವು ಸತತವಾಗಿ ಶುದ್ಧವಾಗುತ್ತದೆ. ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಯಿಂದ ಪಾತಾಳದ ದಿಶೆಯಿಂದ ಸತತವಾಗಿ ಚೈತನ್ಯ ಮತ್ತು ಸಾತ್ತ್ವಿಕತೆಯ ಪ್ರಕ್ಷೇಪಿಸುತ್ತದೆ. ಆದ್ದರಿಂದ ಅನಿಷ್ಟ ಶಕ್ತಿಗಳ ಆಕ್ರಮಣದಿಂದ ಪೃಥ್ವಿಯ ರಕ್ಷಣೆಯಾಗುತ್ತದೆ.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.