‘ಬ್ರಿಕ್ಸ್’ ಶೃಂಗಸಭೆಗಾಗಿ ರಷ್ಯಾಗೆ ತೆರಳಲಿರುವ ಪ್ರಧಾನಿ ಮೋದಿ !

ಅಕ್ಟೋಬರ್ 22 ಮತ್ತು 23 ರಂದು ರಷ್ಯಾದ ಕಜಾನ್‌ನಲ್ಲಿ ನಡೆಯಲಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ದಕ್ಷಿಣ ಆಫ್ರಿಕಾ, ಭಾರತ ಮತ್ತು ಚೀನಾ ಈ ದೇಶಗಳ ಸಂಘಟನೆ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ತೆರಳಲಿದ್ದಾರೆ.

‘ಭಾರತದ `ರಾ’ ಅಧಿಕಾರಿಗಳಿಂದ ಅಮೇರಿಕಾದಲ್ಲಿ ಪನ್ನೂ ಹತ್ಯೆಯ ಸಂಚನ್ನು ರೂಪಿಸಿದ್ದರಂತೆ !’

ಯಾವುದೇ ಸಾಕ್ಷಿಗಳಿಲ್ಲದಿರುವಾಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆಯ ಆರೋಪ ಮಾಡಿದ ಬಳಿಕ, ಈಗ ಅವರು ಪುರಾವೆಗಳಿಲ್ಲದೇ ಆರೋಪಿಸಿರುವುದಾಗಿ ನಾಚಿಕೆಯಿಲ್ಲದೇ ಒಪ್ಪಿಕೊಂಡರು. ಅದೇ ರೀತಿ ಅಮೇರಿಕಾದಿಂದಲೂ ಆಗುತ್ತದೆ.

ಸಾಕ್ಷಿ ಇಲ್ಲದೇ ನಾವು ಭಾರತದ ಮೇಲೆ ಆರೋಪ ಹೊರೆಸಿದೆವು ! – ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ ಮಾಡುವ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈಗ ಹಿಂದೆ ಸರಿದಿದ್ದಾರೆ.

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಕೃತ್ಯಗಳಿಂದ ಹಿಂದೂ ಸಮುದಾಯವು ಹೆದರಿದೆ ! – ಕೆನಡಾದಲ್ಲಿನ ಹಿಂದೂ ಸಂಸದ ಚಂದ್ರ ಆರ್ಯ

ಕೆನಡಾದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹಿಂದೂಗಳು ಭಯಭೀತರಾಗಿದ್ದಾರೆ. ಭಾರತದಲ್ಲಿಯೂ ಅವರು ಜೀವವನ್ನು ಗಟ್ಟಿ ಹಿಡಿದುಕೊಂಡೇ ಬದುಕುತ್ತಿದ್ದಾರೆ. ಇದು ಹಿಂದೂಗಳಿಗೇ ನಾಚಿಕೆಗೇಡು !

ಭಾರತದ ಮೇಲಿನ ಕೆನಡಾದ ಟ್ರುಡೋ ಸರಕಾರದ ಆರೋಪ ಖಲಿಸ್ತಾನಿ ಮತಗಳಿಂದ ಕೂಡಿದೆ !

ಖಲಿಸ್ತಾನಿಗಳ ಮತ ಪಡೆಯಲು ಟ್ರುಡೋ ಸರಕಾರ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸಿ ಭಾರತದ ಮೇಲೆ ಸುಳ್ಳು ಆರೋಪ ಹೊರೆಸುತ್ತಿದೆ. ಆದ್ದರಿಂದ ಭಾರತವು ಕೆನಡಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಣ್ಣ ಬಯಲು ಮಾಡಬೇಕು !

ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಿ ! – ಭಾರತ

ಇಸ್ರೇಲ್ ಮತ್ತು ಅಮೇರಿಕಾ ಯಾವ ರೀತಿ ತನ್ನ ಶತ್ರುಗಳನ್ನು ಬೇರೆ ದೇಶಗಳಿಗೆ ನುಗ್ಗಿ ಕೊಲ್ಲುತ್ತಾರೆಯೋ, ಅದೇ ರೀತಿ ಈಗ ಭಾರತವು ಕೆನಡಾಕ್ಕೆ ಈ ರೀತಿ ಮನವಿ ಮಾಡುವುದಕ್ಕಿಂತ ಕೆನಡಾದೊಳಗೆ ನುಗ್ಗಿ ಅಲ್ಲಿನ ಖಲಿಸ್ತಾನಿಗಳ ಹತ್ಯೆ ಮಾಡಬೇಕು ಎಂದೇ ರಾಷ್ಟ್ರಪ್ರೇಮಿ ಭಾರತೀಯರಿಗೆ ಅನಿಸುತ್ತದೆ !

ಖಲಿಸ್ತಾನಿ ಭಯೋತ್ಪಾದಕರ ಕುರಿತು ವರದಿ ಮಾಡಿದ ಪತ್ರಕರ್ತರ ಮೇಲೆ ದಾಳಿ : ಕೆನಡಾದಲ್ಲಿನ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಇವರಿಂದ ಆತಂಕ !

ಕೆನಡಾದ ಪ್ರಧಾನಮಂತ್ರಿಯವರೇ ಖಲಿಸ್ತಾನಿಗಳನ್ನು ಬಹಿರಂಗವಾಗಿಯೇ ರಕ್ಷಿಸುತ್ತಾರೆ, ಅಲ್ಲಿ ಅವರ ದೇಶದಲ್ಲಿ ಖಲಿಸ್ತಾನಿ ವಿರೋಧಿ ಪತ್ರಕರ್ತರ ಮೇಲೆ ದಾಳಿ ನಡೆದರೆ ಅದರಲ್ಲಿ ಆಶ್ಚರ್ಯವೇ ಇಲ್ಲ

ಲಾವೋಸನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವುದಾಗಿ ಕೆನಡಾ ಪ್ರಧಾನಿಯವರ ದಾವೆಯನ್ನು ತಿರಸ್ಕರಿಸಿದ ಭಾರತ !

ಟ್ರುಡೊ ಇವರ ಸುಳ್ಳುತನವೂ ಈಗ ಬಹಿರಂಗವಾಗಿರುವುದು ಇದರಿಂದ ಗಮನಕ್ಕೆ ಬರುತ್ತದೆ ! ಇಂತಹ ದೇಶದ ಪ್ರಧಾನಿಯೊಂದಿಗೆ ಭಾರತವು ಸಂಬಂಧವನ್ನಾದರೂ ಏಕೆ ಇಟ್ಟುಕೊಳ್ಳಬೇಕು ?

‘ಭಾರತದ ಭದ್ರತೆಗೆ ಧಕ್ಕೆಯಾಗುವಂತೆ ಏನೂ ಮಾಡುವುದಿಲ್ಲವಂತೆ !’ – ಮಾಲ್ಡೀವ್ಸ್ ರಾಷ್ಟ್ರಪತಿ ಮುಯಿಜ್ಜೂ

ಯಾವ ದೇಶವು ಚೀನಾದ ವಶಕ್ಕೆ ಹೋಗುತ್ತವೆಯೋ, ಅವು ಚೀನಾದ ಹಿತ ಮತ್ತು ಭಾರತದ ಅಹಿತವನ್ನು ಮಾಡುವುದಕ್ಕಾಗಿಯೇ ಹೆಜ್ಜೆ ಇಡುತ್ತಾರೆ ಇದೇ ಇತಿಹಾಸವಾಗಿದೆ. ಹಾಗಾಗಿ ಮುಯಿಜ್ಜೂರವರ ಹೇಳಿಕೆಯ ಮೇಲೆ ಯಾರು ವಿಶ್ವಾಸವಿಡುತ್ತಾರೆ ?

India backs Mauritius Island From UK : ಭಾರತದ ಸಹಾಯದಿಂದ ಮಾರಿಷಸ್ ಗೆ ಬ್ರಿಟನ್‌ನಿಂದ ದ್ವೀಪ ಮರಳಿ ಸಿಕ್ಕಿತು

ಬ್ರಿಟನ್‌ನಿಂದ ಚಾಗೋಸ್ ದ್ವೀಪವನ್ನು ವಶಪಡಿಸಿಕೊಂಡ ನಂತರ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರು ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.