Illegal Indian Immigrants In US : 17 ಸಾವಿರ 940 ಭಾರತೀಯರ ಕಾಲುಗಳನ್ನು ‘ಡಿಜಿಟಲ್ ಟ್ರ್ಯಾಕರ್’ನಿಂದ ಬಂಧನ !

  • ಅಮೇರಿಕಾದಿಂದ 20 ಸಾವಿರ 407 ಅಕ್ರಮ ಭಾರತೀಯರ ಸ್ಥಳಾಂತರ

  • `ಡಿಟೆಂಶನ್ ಸೆಂಟರ್’ಗಳಲ್ಲಿ 2 ಸಾವಿರ 467 ಭಾರತೀಯರು

(‘ಡಿಜಿಟಲ್ ಟ್ರ್ಯಾಕರ್’ ಎಂದರೆ ಇದರಲ್ಲಿ ಉಪಕರಣಗಳು, ಅಪ್ಲಿಕೇಶನ್‌ಗಳು ಇತ್ಯಾದಿಗಳ ಮೂಲಕ ಸಂಬಂಧಪಟ್ಟ ವ್ಯಕ್ತಿಯನ್ನು ಬೆನ್ನುಹತ್ತುವುದು ಮತ್ತು ನಿಗಾವಹಿಸುವುದು ಇತ್ಯಾದಿ ಮಾಡಲಾಗುತ್ತದೆ.)

(ಡಿಟೆಂಶನ್ ಸೆಂಟರ’ ಎಂದರೆ ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಜನರನ್ನು ಒಂದು ನಿರ್ದಿಷ್ಟ ಅವಧಿಗೆ ಇಡಲು ಗೊತ್ತುಪಡಿಸಿದ ಸ್ಥಳ)

ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾವು 104 ಭಾರತೀಯರನ್ನು ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಅಪರಾಧಕ್ಕಾಗಿ ಭಾರತಕ್ಕೆ ಮರಳಿ ಕಳುಹಿಸುತ್ತಿದೆ. ಅಮೇರಿಕಾ ಇಲ್ಲಿಯವರೆಗೆ ಸರಿಯಾದ ದಾಖಲೆಗಳಿಲ್ಲದೆ ದೇಶದಲ್ಲಿ ವಾಸಿಸುವ 20 ಸಾವಿರದ 407 ಭಾರತೀಯರನ್ನು ಗುರುತಿಸಿದೆ. ಅವರೆಲ್ಲರನ್ನೂ ‘ಅಕ್ರಮ ಭಾರತೀಯ ವಲಸಿಗರು’ ಎಂದು ಕರೆಯಲಾಗುತ್ತಿದೆ. ಅವರು ‘ಅಂತಿಮ ತೆಗೆದುಹಾಕುವ ಆದೇಶ’ (ಫೈನಲ್ ರಿಮೂವಲ್ ಆರ್ಡರ)ಕ್ಕಾಗಿ ಕಾಯುತ್ತಿದ್ದಾರೆ. ಈ ಪೈಕಿ 17 ಸಾವಿರದ 940 ಭಾರತೀಯರ ಕಾಲುಗಳಿಗೆ ‘ಡಿಜಿಟಲ್ ಟ್ರ್ಯಾಕರ್’ಗಳಿರುವ ‘ಆಂಕಲ್ ಮಾನಿಟರ್’ಗಳನ್ನು ಅಳವಡಿಸಲಾಗಿದೆ. ಇವರೆಲ್ಲರ ಸ್ಥಳಗಳ ಮೇಲೆ ಸ್ಥಳೀಯ ಪೊಲೀಸ್ ಠಾಣೆಗಳು ಅಥವಾ ಇಮಿಗ್ರೇಶನ ಅಂಡ ಕಸ್ಟಮ್ ಎನ್ ಫೋರ್ಸಮೆಂಟ್(ಐ.ಸಿ.ಇ)‘ ಇವರಿಂದ ದಿನದ 24 ಗಂಟೆಗಳ ಕಾಲ ಗಮನವಿಡಲಾಗುತ್ತಿದೆ. ಸಧ್ಯಕ್ಕೆ `ಐಸಿಇ’ಯ `ಡಿಟೆನ್ಷನ್ ಸೆಂಟರ’ ನಲ್ಲಿ 2 ಸಾವಿರದ 467 ಭಾರತೀಯರಿದ್ದಾರೆ. ಈ ಪೈಕಿ 104 ಭಾರತೀಯರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.

‘ಐ.ಸಿ.ಇ.’ ಮಾಹಿತಿಯ ಪ್ರಕಾರ ಅವರ `ಡಿಟೆಂಶನ್ ಸೆಂಟರ’ ಗಳಲ್ಲಿ ಕ್ಷಮತೆಯ ತುಲನೆಯಲ್ಲಿ ಶೇ. 109 ರಷ್ಟು ಜನರು ಹೆಚ್ಚು ಇದ್ದಾರೆ. ಗೃಹ ಇಲಾಖೆಯ ಪ್ರಕಾರ, ಈ ಕೇಂದ್ರಗಳ ಒಟ್ಟು ಸಾಮರ್ಥ್ಯ 38 ಸಾವಿರದ 521 ಹಾಸಿಗೆಗಳು ಇವೆ. ಸಧ್ಯಕ್ಕೆ ಈ ಕೇಂದ್ರದಲ್ಲಿ 42 ಸಾವಿರ ಅಕ್ರಮ ವಲಸಿಗರಿದ್ದಾರೆ. ಈ ಪೈಕಿ ಅರ್ಧದಷ್ಟು ಜನರನ್ನು ಮೆಕ್ಸಿಕನ್ ಗಡಿಯಲ್ಲಿ ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

ಕೇವಲ ಭಾರತ ಅಲ್ಲದೇ ಪ್ರಪಂಚದಾದ್ಯಂತದ ನುಸುಳುಕೋರರನ್ನು ಅಮೇರಿಕ ತನ್ನ ದೇಶದಿಂದ ಹೊರಹಾಕುತ್ತಿದೆ. ಇದಕ್ಕಾಗಿ ಸಮರೋಪಾದಿಯಲ್ಲಿ ಪ್ರಯತ್ನಗಳು ಮಾಡುತ್ತಿದೆ. ಭಾರತವು ಕನಿಷ್ಠ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳಿಗೆ ಸಂಬಂಧಿಸಿದಂತೆ ಆರಂಭಿಕ ಪ್ರಯತ್ನವನ್ನು ಮಾಡಿದರೂ ಸಾಕಷ್ಟಾಗುತ್ತದೆಯೆಂದು ರಾಷ್ಟ್ರಪ್ರೇಮಿಗಳು ಅಪೇಕ್ಷಿಸುತ್ತಾರೆ !