|
ನವದೆಹಲಿ – ಭಾರತದಲ್ಲಿರುವ ಬಾಂಗ್ಲಾದೇಶದ ಹಂಗಾಮಿ ಹೈಕಮಿಷನರ್ ಮಹಮ್ಮದ್ ನುರಲ್ ಇಸ್ಲಾಂ ಅವರನ್ನು ಫೆಬ್ರುವರಿ ೭ ರಂದು ಸಾಯಂಕಾಲ ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಗಿತ್ತು. ಭಾರತವು ಬಾಂಗ್ಲಾದೇಶದ ಜೊತೆಗೆ ಒಳ್ಳೆಯ ಸಂಬಂಧ ಬಯಸುತ್ತದೆ, ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲೂ ಕೂಡ ಇದನ್ನೇ ಅನೇಕ ಬಾರಿ ಹೇಳಿದ್ದೇವೆ; ಆದರೆ ಬಾಂಗ್ಲಾದೇಶಿ ಅಧಿಕಾರಿಗಳು ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ, ಹಾಗೂ ಆಂತರಿಕ ವಿಷಯದ ಬಗ್ಗೆ ಭಾರತದ ಮೇಲೆ ಆರೋಪ ಮಾಡುತ್ತಿದ್ದಾರೆ, ಇದು ದುಃಖಕರ ವಿಷಯವಾಗಿದೆ ಎಂದು ಭಾರತ ಬೇಸರ ವ್ಯಕ್ತಪಡಿಸಿದೆ. ಬಾಂಗ್ಲಾದೇಶವು ನಮ್ಮ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕೆಂದು ತಿಳಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ ಜೈಸ್ವಾಲ್ ಅವರು ಮಾಹಿತಿ ನೀಡಿದರು.
೧. ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಫೆಬ್ರುವರಿ ೬ ರಂದು ಒಂದು ಸುತ್ತೋಲೆ ಜಾರಿಗೊಳಿಸಿ ಭಾರತದ ವಿರುದ್ಧ ನಿಷೇಧ ವ್ಯಕ್ತಪಡಿಸಿತ್ತು. ಭಾರತವು ಬಾಂಗ್ಲಾದೇಶದ ಪದಚ್ಯುತ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಹೇಳಿಕೆ ನೀಡುವುದನ್ನು ತಡೆಯಬೇಕೆಂದು ಬಾಂಗ್ಲಾದೇಶ ಆಗ್ರಹಿಸಿದ್ದು. ಯುನೂಸ್ ಸರಕಾರವು ಭಾರತದ ರಾಯಭಾರಿಗಳನ್ನು ಕರೆಸಿ, ಶೇಖ್ ಹಸೀನಾ ಭಾರತದಲ್ಲಿ ನೆಲೆಸಿ ಸುಳ್ಳು ಮತ್ತು ಕಲ್ಪಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿರೋಧಿಸಿದ್ದರು.
೨. ಫೆಬ್ರುವರಿ ೫ ರಂದು ರಾತ್ರಿ ಜಿಹಾದಿ ಮುಸಲ್ಮಾನರು ಢಾಕಾದಲ್ಲಿನ ಶೇಖ್ ಹಸೀನಾ ಅವರ ತಂದೆ ಮತ್ತು ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ‘ಬಂಗಬಂಧು ‘ ಅವರ ಮನೆಯನ್ನು ಧ್ವಂಸಗೊಳಿಸಿದ್ದರು. ಈ ಘಟನೆಯ ಬಳಿಕ ಹಸೀನಾ ಅವರು ತಮ್ಮ ಫೇಸ್ಬುಕ್ ನಲ್ಲಿ ತಮ್ಮ ಸಮರ್ಥಕರನ್ನು ಸಂಬೋಧಿಸಿ, ‘ಇತಿಹಾಸ ಸೇಡು ತೀರಿಸಿಕೊಳ್ಳುತ್ತದೆ ,’ ಎಂದು ಸಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.