
ಅನೇಕ ಆರ್ಥಿಕ ಅಪರಾಧಿಗಳು, ಭಯೋತ್ಪಾದಕರು, ಮಾನವ ಕಳ್ಳಸಾಗಾಟ ಮಾಡುವವರು, ಭಾರತದ ಕಾನೂನಿನಲ್ಲಿನ ಕೊರತೆಯನ್ನು ಹುಡುಕಿ ಅದನ್ನು ದುರುಪಯೋಗಿಸಿಕೊಂಡು ವಿದೇಶಕ್ಕೆ ಪಲಾಯನಗೈದು ಭಾರತೀಯ ನ್ಯಾಯಪದ್ಧತಿಯಿಂದ ತಮ್ಮನ್ನು ರಕ್ಷಿಸಿ ಕೊಳ್ಳುತ್ತಾರೆ, ಇದು ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವುದು ಕಂಡುಬಂದಿದೆ. ರಾಜಕೀಯ ಬೆಂಬಲ ಇರುವುದರಿಂದ ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಪಡೆದು ವಿಜಯ ಮಲ್ಯಾ ಇಂಗ್ಲೆಂಡ್‌ಗೆ ಪಲಾಯನಗೈದ. ಆತ ೧೭ ಭಾರತೀಯ ಬ್ಯಾಂಕ್‌ಗಳಿಗೆ ಮೋಸ ಮಾಡಿ ೯ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಮೊತ್ತವನ್ನು ಮುಳುಗಿಸಿದ್ದಾನೆ, ಅದೇ ರೀತಿ ವಜ್ರದ ವ್ಯಾಪಾರಿ ನೀರವ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕಿನಿಂದ ೧೧ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಮೊತ್ತದ ಸಾಲ ಪಡೆದು ಭಾರತದ ಹೊರಗೆ ಪಲಾಯನ ಗೈದನು. ‘ಟೋರೆಸ್ ಜ್ಯುವೆಲ್ಲರ್ಸ್‌ನಂತಹ ‘ಪಾಂಝೀ’ (ಯೋಜನೆಯಲ್ಲಿ (ಒಂದು ರೀತಿ ಮೋಸಗಾರಿಕೆಯ (ನಕಲಿ) ಹೂಡಿಕೆಯ ಯೋಜನೆ, ಅದರಲ್ಲಿ ಜನರಿಂದ ಹಣ ಪಡೆದು ಹೆಚ್ಚು ಪ್ರಮಾಣದ ಲಾಭ ನೀಡುವ ಆಮಿಷ ತೋರಿಸಿ ಹಣವನ್ನು ಮುಳುಗಿಸಲಾಗುತ್ತದೆ.) ಮಧ್ಯಮವರ್ಗದ ಜನರನ್ನು ಆಕರ್ಷಿಸುವಂತಹ ಯೋಜನೆಯಡಿಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿ ಆ ಹಣದೊಂದಿಗೆ ಅನಿರೀಕ್ಷಿತವಾಗಿ ದೇಶದಿಂದ ಪಲಾಯನ ಗೈಯ್ಯುತ್ತಾರೆ. ಈ ರೀತಿ ಮುಳುಗಿಸಿದ ಸಾಲದ ಮೊತ್ತ ಅನೇಕ ಲಕ್ಷಕೋಟಿ ಇರಬಹುದೆಂದು ಕೇಂದ್ರೀಯ ತನಿಖಾ ದಳದವರು (ಸಿಬಿಐ) ಅಂದಾಜು ಮಾಡಿದ್ದಾರೆ. ಈ ರೀತಿ ಲೂಟಿ ಮಾಡಿದ ಹಣವನ್ನು ಅವರು ನೇರವಾಗಿ ವಿದೇಶಕ್ಕೆ ಕಳುಹಿಸಿದ್ದರು.
೧. ದಿನಪ್ರತಿದಿನ ಹೆಚ್ಚುತ್ತಿರುವ ಮಾನವ ಕಳ್ಳಸಾಗಾಟ
ಮಾನವ ಕಳ್ಳಸಾಗಾಟ ಅಂತಾರಾಷ್ಟ್ರೀಯ ಸ್ತರದಲ್ಲಿ ನಡೆಯುವ ಅತ್ಯಂತ ಗೊಂದಲಮಯ ಘಟನೆಯಾಗಿದೆ. ಮಾನವ ಕಳ್ಳಸಾಗಾಟದಲ್ಲಿ ಪ್ರಾಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ಮೋಸಹೋಗುತ್ತಾರೆ; ಆದರೆ ಪುರುಷರ ಕಳ್ಳಸಾಗಾಟವೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಪ್ರತಿವರ್ಷ ೬ ರಿಂದ ೮ ಲಕ್ಷ ವ್ಯಕ್ತಿಗಳ ಮಾನವ ಕಳ್ಳಸಾಗಾಟವಾಗುತ್ತದೆ ಹಾಗೂ ಈ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಾ ಇರುತ್ತದೆ. ಮಾನವ ಕಳ್ಳಸಾಗಾಟ ಆಗಿರುವ ವ್ಯಕ್ತಿಗಳು ದೇಹ ಮಾರಾಟ, ಗಣಿ ಕಾರ್ಮಿಕರು, ಕೃಷಿಕೂಲಿಗಳು, ಮನೆಕೆಲಸ ಹಾಗೂ ಇನ್ನಿತರ ಅನೇಕ ಪ್ರಕಾರದ ಇಷ್ಟವಾಗದ ಕೆಲಸಗಳಿಂದ ಗುಲಾಮಗಿರಿ ಮಾಡಬೇಕಾಗುತ್ತದೆ. ಇಂತಹ ವ್ಯಕ್ತಿಗಳನ್ನು ಬಲವಂತವಾಗಿ ಅವರ ಇಚ್ಛೆಯ ವಿರುದ್ಧ ಶೋಷಣೆ ಮಾಡಲಾಗುತ್ತದೆ. ದೊಡ್ಡ ಪ್ರಮಾಣದ ನಿರುದ್ಯೋಗ ಹಾಗೂ ಸರಕಾರಿ ಅಧಿಕಾರಿಗಳ ನಿಷ್ಕ್ರಿಯತೆಯೇ ದೊಡ್ಡ ಪ್ರಮಾಣದಲ್ಲಿ ಇದಕ್ಕೆ ಹೊಣೆಯಾಗಿದೆ. ಇದಕ್ಕೆ ಬಡತನವೇ ದೊಡ್ಡ ಕಾರಣವಾಗಿದೆ. ಮಾನವ ಕಳ್ಳಸಾಗಾಟದಲ್ಲಿ ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಕಂಡುಬರುತ್ತದೆ. ಅದರಿಂದಾಗುವ ಲಾಭದಿಂದ ಸಂಘಟಿತ ಅಪರಾಧ, ಅಮಲು ಪದಾರ್ಥಗಳ ವ್ಯಾಪಾರ, ಶಸ್ತ್ರಾಸ್ತ್ರಗಳ ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುತ್ತದೆ. ಇದರಿಂದ ಎಲ್ಲ ದೇಶಗಳಿಗೂ ಭದ್ರತೆಯ ವಿಷಯದಲ್ಲಿ ದೊಡ್ಡ ಅಪಾಯ ಉದ್ಭವಿಸುತ್ತದೆ. ದೇಹಮಾರಾಟದ ಹೊರತು ಯಾವುದೇ ವ್ಯಕ್ತಿಯನ್ನು ಬಲವಂತದಿಂದ, ಮೋಸಗಾರಿಕೆಯಿಂದ, ಸುಳ್ಳು ಆಮಿಷ ತೋರಿಸಿ ಗುಲಾಮರ ಹಾಗೆ ಕೆಲಸ ಮಾಡಿಸುವುದು, ಈ ಮಾನವ ಕಳ್ಳಸಾಗಾಟದಲ್ಲಿ ಕಂಡು ಬರುತ್ತಿದೆ. ಮಾನವ ಕಳ್ಳಸಾಗಾಟವಾಗಿರುವ ವ್ಯಕ್ತಿಗಳಿಗೆ ಅತ್ಯಾಚಾರದ ವಿರುದ್ಧ ಧ್ವನಿಯೆತ್ತಲು ಯಾವುದೇ ಅವಕಾಶ ಸಿಗುವುದಿಲ್ಲ; ಏಕೆಂದರೆ, ಎಲ್ಲ ದೇಶಗಳು ಅವರನ್ನು ಕಾನೂನುಬಾಹಿರವಾಗಿ ಅವರು ದೇಶದೊಳಗೆ ಬಂದಿದ್ದಾರೆ ಹಾಗೂ ಅವರು ತಪ್ಪು ಮಾಡಿದ್ದಾರೆ, ಎಂದು ತಿಳಿಯುತ್ತವೆ; ಆದರೆ ಅದರಿಂದ ಲಾಭ ಗಳಿಸುವ ದಲಾಲರು ಮಾತ್ರ ಯಾವುದೇ ಶಿಕ್ಷೆಯಾಗದೆ ತಪ್ಪಿಸಿಕೊಳ್ಳುತ್ತಾರೆ.
೨. ಭಾರತದಿಂದ ಪಲಾಯಗೈದಿರುವ ಅಪರಾಧಿಗಳನ್ನು ಹಿಂತಿರುಗಿ ತರುವ ಸಲುವಾಗಿ ಕೇಂದ್ರ ಸರಕಾರ ಮಾಡಿದ ಮಹತ್ವದ ಬದಲಾವಣೆ
ಇದೇ ರೀತಿ ೧೯೯೩ ರ ಮುಂಬಯಿ ಬಾಂಬ್‌ಸ್ಫೋಟದಲ್ಲಿನ ದಾವೂದ ಇಬ್ರಾಹಿಮ್ ಮತ್ತು ಅವನ ಜೊತೆಗಾರರು ಭಾರತದಿಂದ ಪಲಾಯನ ಗೈದು ವಿದೇಶದಲ್ಲಿದ್ದು ಭಾರತದ ವಿರುದ್ಧ ಷಡ್ಯಂತ್ರ ರಚಿಸುವುದು ಕಾಣಿಸುತ್ತಿದೆ. ಅನೇಕ ಅಪರಾಧಿಗಳು ಪಂಜಾಬ್ ನಲ್ಲಿ ಹಪ್ತಾವಸೂಲಿ, ಕೊಲೆ ಹಾಗೂ ಇನ್ನಿತರ ಅಪರಾಧಗಳನ್ನು ಮಾಡಿ ಭಾರತದಿಂದ ಓಡಿ ಹೋಗಿ ಕೆನಡಾದಲ್ಲಿ ಖಲಿಸ್ತಾನಿಗಳಾಗಿ ಉಳಿದುಕೊಂಡಿದ್ದಾರೆ. ಈ ಹಿಂದಿನ ಭಾರತೀಯ ದಂಡಸಂಹಿತೆಯಲ್ಲಿ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸದೆ ಮುಂದಿನ ಕಾನೂನು ಕ್ರಮ ನಡೆಸಲು ಆಗುತ್ತಿರಲಿಲ್ಲ. ಇದಕ್ಕೆ ಯೋಗ್ಯವಾದ ಉಪಾಯ ಮಾಡಲು ಭಾರತ ಸರಕಾರ ‘ಭಾರತೀಯ ದಂಡ ಸಂಹಿತೆ’ಯನ್ನು ರದ್ದುಪಡಿಸಿ ಅದರ ಬದಲಿಗೆ ‘ಭಾರತೀಯ ನ್ಯಾಯಸಂಹಿತೆ’ಯನ್ನು ೧ ಜುಲೈ ೨೦೨೪ ರಿಂದ ಅನ್ವಯಗೊಳಿಸಿದೆ. ಇದರ ಹೊರತು ಈ ಅಪರಾಧಿಗಳು ದೇಶದಲ್ಲಿ ಮತ್ತು ದೇಶದ ಹೊರಗೆ ಕಾನೂನುಬಾಹಿರ ಮಾರ್ಗದಲ್ಲಿ ಎಲ್ಲಿ ಹಾಗೂ ಯಾವ ಸಂಪತ್ತು ಮಾಡಿಟ್ಟಿದ್ದಾರೆ, ಎಂಬುದನ್ನು ಹುಡುಕಿ ತೆಗೆಯಬೇಕು, ಅದಕ್ಕಾಗಿ ಪ್ರಧಾನಮಂತ್ರಿ ಮೋದಿಯವರು ೨೦೧೫ ರಲ್ಲಿ ‘ಇಂಟರ್‌ಪೋಲ್’ಗೆ (ಅಂತಾರಾಷ್ಟ್ರೀಯ ಪೊಲೀಸ್ ಸಂಘಟನೆಗೆ) ವಿನಂತಿಸಿದ್ದರು. ಇದನ್ನು ಮಾಡುವಾಗ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಿಬೈಯ ಮೂಲಕ ‘ಇಂಟರ್‌ಪೋಲ್’ಗೆ ಹೋಗಲು ಅಡಚಣೆಯಾಗುತ್ತಿತ್ತು.
ಇದಕ್ಕೆ ಯೋಗ್ಯವಾದ ಉಪಾಯವೆಂದು ಭಾರತ :
ಅ. ಭಾರತದಲ್ಲಿನ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ ಆರೋಪಿಯ ಅನುಪಸ್ಥಿತಿಯಲ್ಲಿ ಅವನ ವಿರುದ್ಧ ಖಟ್ಲೆ ನಡೆಸಲು ಸಾಧ್ಯವಾಗುವಂತಹ ಮಹತ್ವದ ಸುಧಾರಣೆ ಮಾಡಿದೆ.
ಆ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಿಬಿಐಯ ಮೂಲಕ ಇಂಟರ್‌ಪೋಲ್‌ನೊಂದಿಗೆ ಪತ್ರವ್ಯವಹಾರ ಮಾಡಲು ಸಾಧ್ಯ ವಾಗ ಬೇಕೆಂದು, ‘ಭಾರತಪೋಲ್’ ಈ ಜಾಲತಾಣವನ್ನು ಆರಂಭಿಸಲಾಗಿದೆ.
ಇ. ಭಾರತ ಮಾಡಿರುವ ವಿನಂತಿಯನ್ನು ಸ್ವೀಕರಿಸಿ ಇಂಟರ್ ಪೋಲ್ ಈಗ ಕಾನೂನುಬಾಹಿರವಾಗಿ ಸಂಗ್ರಹಿಸಿದ ಸಂಪತ್ತುಗಳಿಗೆ ಸಂಬಂಧಿತ ‘ಸಿಲ್ವರ್ ನೋಟಿಸ್’ ಅನ್ವಯಿಸಲು ಅನುಮತಿಸಿದೆ.
ಸದ್ಯ ಭಾರತ ೪೫ ದೇಶಗಳೊಂದಿಗೆ ಸಹಕಾರದ ಒಪ್ಪಂದ ಮಾಡಿಕೊಂಡಿದೆ, ಅದರಿಂದ ಕಾನೂನುಬಾಹಿರ ಸಂಪತ್ತುಗಳ ಮಾಹಿತಿ ನೀಡಲಾಗುತ್ತದೆ; ಆದರೆ ಈಗ ‘ಇಂಟರ್‌ಪೋಲ್’ನ ಸಹಾಯದಿಂದ ಜಗತ್ತಿನ ಎಲ್ಲ ದೇಶಗಳೊಂದಿಗೆ ಸಂಪರ್ಕ ಮಾಡಿ ಈ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿಕ್ಕಿದೆ. ‘ಭಾರತಪೋಲ್’ಅನ್ನು ಉಪಯೋಗಿಸಿ ರಾಜ್ಯಗಳು ಮತ್ತು ಕೇಂದ್ರ ಸರಕಾರದಲ್ಲಿನ ಭದ್ರತಾ ವ್ಯವಸ್ಥೆ ಸಿಬೈಯ ಮೂಲಕ ‘ಇಂಟರ್‌ಪೋಲ್’ಗೆ ಈ ಸೂಚನೆಯನ್ನು ಕಳುಹಿಸಲು ಸಾಧ್ಯ ವಾಗಲಿದೆ. ಇದರಲ್ಲಿನ ‘ಭಾರತಪೋಲ್’ ಈ ಪದ್ಧತಿಯ ವರದಿ ಯನ್ನು ಇಲ್ಲಿ ಕೊಡುತ್ತಿದ್ದೇನೆ.
೩. ‘ಭಾರತಪೋಲ್’ನಿಂದ ಆಗುವ ಪ್ರಕ್ರಿಯೆ
ಕೇಂದ್ರ ಗೃಹಮಂತ್ರಿ ಅಮಿತ ಶಾಹ ಇವರು ಇತ್ತೀಚೆಗಷ್ಟೆ (೭ ಜನವರಿ ೨೦೨೫ ರಂದು) ‘ಭಾರತಪೋಲ್’ ಈ ಜಾಲತಾಣವನ್ನು ಪ್ರಾರಂಭ ಮಾಡಿದ್ದಾರೆ. ಈ ಜಾಲತಾಣದಿಂದ ಭಾರತದಲ್ಲಿನ ಎಲ್ಲ ರಾಜ್ಯಗಳ ಪೊಲೀಸ್ ಅಧಿಕಾರಿಗಳು, ಭದ್ರತಾ ವ್ಯವಸ್ಥೆಗೆ ಸಹಜವಾಗಿ ಅಂತಾರಾಷ್ಟ್ರೀಯ ಪೊಲೀಸ್ ಸಂಘಟನೆ (ಇಂಟರ್‌ಪೋಲ್)ಯೊಂದಿಗೆ ಸಂಪರ್ಕ ಮಾಡಲು ಸಾಧ್ಯ ವಾಗಲಿಕ್ಕಿದೆ. ಗೃಹಮಂತ್ರಿಗಳು ಏನು ಹೇಳಿದ್ದಾರೆಂದರೆ, ಅನೇಕ ಅಪರಾಧಿಗಳು ಭಾರತದಲ್ಲಿ ಅಪರಾಧ ಮಾಡಿ ವಿದೇಶಕ್ಕೆ ಓಡಿ ಹೋಗುತ್ತಿದ್ದರು ಹಾಗೂ ಭಾರತೀಯ ನ್ಯಾಯ ವ್ಯವಸ್ಥೆಯನ್ನು ವರ್ಷಗಟ್ಟಲೆ ಮೋಸಗೊಳಿಸುತ್ತಿದ್ದರು; ಆದರೆ ‘ಭಾರತಪೋಲ್’ ನಂತಹ ಅತ್ಯಾಧುನಿಕ ವ್ಯವಸ್ಥೆಯಿಂದ ಈ ಅಪರಾಧಿಗಳಿಗೆ ನ್ಯಾಯಪದ್ಧತಿಯ ಮೂಲಕ ಸಹಜವಾಗಿ ಶಿಕ್ಷೆ ನೀಡಲು ಸಾಧ್ಯ ವಾಗಲಿಕ್ಕಿದೆ. ೧ ಜುಲೈ ೨೦೨೪ ರಿಂದ ಹಮ್ಮಿಕೊಂಡಿರುವ ‘ಭಾರತೀಯ ನ್ಯಾಯಸಂಹಿತೆ’ಯಿಂದ ಅಪರಾಧಿ ಪ್ರತ್ಯಕ್ಷ ಉಪಸ್ಥಿತನಿಲ್ಲದಿದ್ದರೂ, ಅವನ ವಿರುದ್ಧ ದೋಷಾರೋಪಪತ್ರ ದಾಖಲಿಸಲು ಸಾಧ್ಯವಾಗುತ್ತದೆ. ಈಗ ‘ಭಾರತಪೋಲ್’ನಿಂದ ಈ ಅಪರಾಧಿ ಜಗತ್ತಿನಲ್ಲಿ ಎಲ್ಲಿಯೆ ಅಡಗಿದ್ದರೂ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಕ್ಕಿದೆ. ಆದ್ದರಿಂದ ಹೊಸ ಕಾನೂನು ಪ್ರಕಾರ ಶಿಕ್ಷೆ ಆಗಿರುವ ಈ ಅಪರಾಧಿಗಳನ್ನು ಭಾರತಕ್ಕೆ ತರುವ ಪ್ರಕ್ರಿಯೆಯು ಸಹಜವಾಗಿ ಸಾಧ್ಯವಾಗಲಿಕ್ಕಿದೆ.
೪. ‘ಭಾರತಪೋಲ್’ ಜಾಲತಾಣದಿಂದ ಅಪರಾಧಿಗಳ ವಿರುದ್ಧ ಸಾಧ್ಯವಾಗುವ ಕಾರ್ಯಾಚರಣೆ
‘ಭಾರತಪೋಲ್’ ತಾಣವನ್ನು ಸಿಬೈ ತಯಾರಿಸಿದ್ದು ಪೊಲೀಸ್ ಅಧಿಕಾರಿಗಳ ತರಬೇತಿಯ ಹೊಣೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. – ಶ್ರೀ. ಪ್ರವೀಣ ದೀಕ್ಷಿತ
ಭಾರತದಲ್ಲಿ ಕಾನೂನನ್ನು ಹಮ್ಮಿಕೊಳ್ಳುವ ಎಲ್ಲ ವ್ಯವಸ್ಥೆಗಳಿಗೆ ‘ಭಾರತ ಪೋಲ್’ ಈ ತಾಂತ್ರಿಕ ಜಾಲತಾಣವನ್ನು ಸಿದ್ಧಪಡಿಸಲಾಗಿದೆ ಹಾಗೂ ಅದರಲ್ಲಿ ೫ ವಿವಿಧ ‘ಮೋಡ್ಯೂಲ್ಸ್’ಗಳನ್ನು (ವ್ಯವಸ್ಥೆ) ಇಡಲಾಗಿದೆ. ಅದನ್ನು ಹೀಗೆ ‘ಕನೆಕ್ಟ್’ (ಜೋಡಿಸುವುದು) ಹಾಗೂ ‘ಇಂಟರ್‌ಪೋಲ್ ನೋಟೀಸು’, ‘ರೆಫರೆನ್ಸಸ್’ (ಸಂದರ್ಭ ಕಳಿಸುವುದು), ‘ಬ್ರಾಡ್‌ಕಾಸ್ಟ್’ (ಪ್ರಸಾರ) ಹಾಗೂ ‘ರಿಸೋರ್ಸಸ್’ (ಮೂಲ). ಇದರಲ್ಲಿನ ‘ಕನೆಕ್ಟ್’ನ ಮೂಲಕ ‘ಇಂಟರ್‌ಪೋಲ್’ನ ಭಾರತದಲ್ಲಿ ಕಾರ್ಯನಿರ್ವಹಿಸುವ ‘ರಾಷ್ಟ್ರದಲ್ಲಿನ ಕೇಂದ್ರೀಯ ವ್ಯವಸ್ಥೆ’ (ನ್ಯಾಶನಲ್ ಸೆಂಟ್ರಲ್ ಬ್ಯುರೋ)ಯ ವಿಭಾಗದಂತೆಯೆ ಸ್ಥಳೀಯ ಪೊಲೀಸರಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅದರಿಂದ ಇಂಟರ್‌ಪೋಲ್’ಗೆ ತಕ್ಷಣ ಸೂಚನೆ ಕಳುಹಿಸಲು ಸಾಧ್ಯವಾಗುವುದು ಮತ್ತು ಅದರ ಪರಿಣಾಮದಿಂದ ಭಾರತದಿಂದ ಪಲಾಯನಗೈದಿರುವ ಅಪರಾಧಿಗಳನ್ನು ಅವರು ಯಾವ ದೇಶ ದಲ್ಲಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಈ ಜಾಲತಾಣದಿಂದ ವಿವಿಧ ದೇಶಗಳಲ್ಲಿ ಅಪರಾಧ ಮಾಡುವ ಅಪರಾಧಿಗಳು, ಭ್ರಷ್ಟಾಚಾರಿಗಳು ಮತ್ತು ಈ ಅಪರಾಧದಿಂದ ಅವರು ಸಂಗ್ರಹಿಸಿದ ಸಂಪತ್ತಿನ ವಿರುದ್ಧ ಕಾರ್ಯಾಚರಿಸಲು ಸಾಧ್ಯವಾಗಲಿಕ್ಕಿದೆ. ಈ ಹಿಂದೆ ಭಾರತದ ಹೊರಗಿರುವ ಅಪರಾಧಿ ಗಳ ವಿರುದ್ಧ ಕ್ರಮತೆಗೆದುಕೊಳ್ಳಲಿಕ್ಕಿದ್ದರೆ ಸ್ಥಳೀಯ ಪೊಲೀಸರು ಸಿಬೈಯ ಮೂಲಕ ಹೋಗಬೇಕಾಗುತ್ತಿತ್ತು, ಅದರಿಂದ ಅಪರಾಧಿಗಳನ್ನು ಹಿಡಿಯಲು ತುಂಬಾ ಸಮಯ ಹೋಗುತ್ತಿತ್ತು. ‘ಭಾರತ ಪೋಲ್’ನಿಂದ ಸೈಬರ್ ಮೋಸಗಾರರು, ಅಮಲು ಪದಾರ್ಥಗಳ ಹಾಗೂ ಮಾನವ ಕಳ್ಳಸಾಗಾಟ ಮಾಡುವ ಅಪರಾಧಿಗಳ ವಿರುದ್ಧ ತಕ್ಷಣ ಅಂತಾರಾಷ್ಟ್ರೀಯ ಸಹಾಯ ಸಿಗಲು ಸಾಧ್ಯವಾಗುವುದು. ಇಂತಹ ಅಪರಾಧಿಗಳ ವಿರುದ್ಧ ‘ರೆಡ್ ಕಾರ್ನರ್ ನೋಟೀಸು’ (ಪಲಾಯನ ಗೈದಿರುವ ಅಪರಾಧಿಗಳನ್ನು ಬಂಧಿಸುವ ಆದೇಶ) ಮತ್ತು ‘ಇಂಟರ್‌ಪೋಲ್’ನ ಇನ್ನಿತರ ನೋಟೀಸುಗಳನ್ನು ಈ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಹಜವಾಗಿ ಕಳುಹಿಸಲು ಸಾಧ್ಯವಾಗುತ್ತದೆ. ‘ರೆಡ್ ಕಾರ್ನರ್ ನೋಟೀಸು’ ಸಿಕ್ಕಿದ ನಂತರ ‘ಇಂಟರ್‌ಪೋಲ್’ ಎಲ್ಲ ಸದಸ್ಯ ದೇಶಗಳಿಗೆ ಕಾಣೆಯಾಗಿರುವ ಹಾಗೂ ಬೇಕಾಗಿರುವ ವ್ಯಕ್ತಿಯ ವಿಷಯವನ್ನು ತಿಳಿಸುತ್ತದೆ. ಅದೇ ರೀತಿ ಸದಸ್ಯ ದೇಶಗಳು ಇಂತಹ ವ್ಯಕ್ತಿಗಳನ್ನು ಬಂಧಿಸುವುದು ಕಡ್ಡಾಯವಿಲ್ಲದಿದ್ದರೂ, ಈ ಸೂಚನೆಗನುಸಾರ ಇಂತಹ ವ್ಯಕ್ತಿಗಳನ್ನು ಬಂಧನದಲ್ಲಿಟ್ಟು ಅವರನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಈ ನೋಟೀಸಿನಿಂದ ಕೇವಲ ಸಂಬಂಧಪಟ್ಟ ವ್ಯಕ್ತಿಯನ್ನು ಮಾತ್ರ ಹಿಡಿಯುವುದಲ್ಲ, ಅವನ ಬ್ಯಾಂಕ್ ಖಾತೆಯನ್ನು ಕೂಡ ಮುಟ್ಟುಗೋಲು ಹಾಕಲಾಗುತ್ತದೆ. ಆದರೆ ಈ ರೀತಿ ಪ್ರಾಪ್ತಿಯಾಗುವ ವಿನಂತಿ ರಾಜಕೀಯ ಹಿನ್ನೆಲೆಯದ್ದಾಗಿದ್ದರೆ ‘ಇಂಟರ್‌ಪೋಲ್’ ಅದನ್ನು ನಿರಾಕರಿಸಬಹುದು.
೫. ‘ಭಾರತಪೋಲ್’ನಿಂದ ಹೆಚ್ಚೆಚ್ಚು ಲಾಭ ಪಡೆಯುವುದು ಮಹತ್ವದ್ದಾಗಿದೆ !
ಹೀಗಿದ್ದರೂ ಭಾರತದಲ್ಲಿ ಆರ್ಥಿಕ ಅಪರಾಧ ಮಾಡುವವರು, ಭಯೋತ್ಪಾದಕರು, ಹಾಗೂ ಅಮಲು ಪದಾರ್ಥಗಳ ಮತ್ತು ಮಾನವ ಕಳ್ಳಸಾಗಾಟ ಮಾಡುವ ಅಪರಾಧಿಗಳು ಇನ್ನು ಮುಂದೆ ದೇಶ ದಲ್ಲಿ ನಡೆಯುವ ಕಾನೂನು ಕ್ರಮಗಳಿಂದ ತಮ್ಮನ್ನು ರಕ್ಷಿಸಿ ಕೊಳ್ಳಲು ಸಾಧ್ಯವಿಲ್ಲವೆಂಬುದು ಖಚಿತ ! ಎಲ್ಲ ಪೊಲೀಸ್ ಅಧಿಕಾರಿಗಳು ‘ಭಾರತಪೋಲ್’ ಈ ಹೊಸ ಪದ್ಧತಿಯನ್ನು ಅಭ್ಯಸಿಸಿ ಅದರಿಂದ ಹೆಚ್ಚೆಚ್ಚು ಲಾಭ ಪಡೆಯುವ ಅವಶ್ಯಕತೆಯಿದೆ.
– ಶ್ರೀ. ಪ್ರವೀಣ ದೀಕ್ಷಿತ, ಮಾಜಿ ಪೊಲೀಸ್ ಮಹಾಸಂಚಾಲಕರು ಮುಂಬಯಿ. (೧೩.೧.೨೦೨೫)
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
|| ಶ್ರೀ ರಾಜಮಾತಂಗಿ ಮಹಾಯಾಗ ||