ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ ೧೫ ರಂದು ಮುಂಬಯಿಯ ಮಝಗಾವ ಡಾಕ್‌ನಲ್ಲಿ ’ಐ.ಎನ್.ಎಸ್. ಸುರತ’ ಮತ್ತು ಐ.ಎನ್.ಎಸ್. ನೀಲಗಿರಿ’ ಈ ೨ ಹೊಸ ಯುದ್ಧನೌಕೆಗಳು ಮತ್ತು ಐ.ಎನ್.ಎಸ್. ವಾಘಶೀರ’ ಈ ಸಬ್‌ಮೆರೀನ್ (ಜಲಾಂತರ್ಗಾಮಿ) ಇವುಗಳ ಲೋಕಾರ್ಪಣೆ ಮಾಡಿದರು. ಈ ಯುದ್ಧನೌಕೆಗಳು ಭಾರತೀಯ ನೌಕಾಪಡೆಯ ಹೋರಾಟದ ಕ್ಷಮತೆಯನ್ನು ಸಾಕಷ್ಟು ವೃದ್ಧಿಸಿವೆ.

೧. ’ಐ.ಎನ್.ಎಸ್. ಸುರತ’ (ಗೈಡೆಡ್ ಮಿಸೈಲ್ ಡಿಸ್ಟ್ರಾಯರ್-ಮಾರ್ಗದರ್ಶಕ ಕ್ಷಿಪಣಿ ವಿನಾಶಕ)
ಇದು ಭಾರತೀಯ ನೌಕಾದಳದ ’ಪ್ರೊಜೆಕ್ಟ್-೧೫ ಬಿ’ಯಲ್ಲಿನ ನಾಲ್ಕನೇ ಅತ್ಯಾಧುನಿಕ ’ಡಿಸ್ಟ್ರಾಯರ್’ ಆಗಿದೆ. ’ವಿಶಾಖಪಟ್ಟಣಮ್’ ಶ್ರೇಣಿಯ ಈ ಯುದ್ಧನೌಕೆ ಶೇ. ೭೫ ರಷ್ಟು ಭಾರತೀಯ ನಿರ್ಮಿತವಾಗಿದ್ದು ಅದು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಪ್ರಗತಿ ಹೊಂದಿದ ಸಂಪರ್ಕ ಪದ್ಧತಿಯನ್ನು ಉಪಯೋಗಿಸಲು ಸಕ್ಷಮವಾಗಿದೆ. ಈ ಶ್ರೇಣಿಯ ಯುದ್ಧನೌಕೆಯನ್ನು ಶತ್ರುವಿಗೆ ತಕ್ಷಣ ಕಂಡುಹಿಡಿಯಲಾಗದ, ಸ್ವಯಂಚಾಲಿತ ಹಾಗೂ ಸುಧಾರಿಸಿದ ಶಸ್ತ್ರಾಸ್ತ್ರಗಳೊಂದಿಗೆ ತಯಾರಿಸಲಾಗಿದೆ. ಈ ಶ್ರೇಣಿಯ ’ಐ.ಎನ್.ಎಸ್. ವಿಶಾಖಪಟ್ಟಣಮ್’, ’ಐ.ಎನ್.ಎಸ್. ಮರ್ಮಾಗೋವಾ’ ಮತ್ತು ಐ.ಎನ್.ಎಸ್. ಇಂಫಾಳ’ ಇವು ಇಂತಹ ಇತರ ಯುದ್ಧನೌಕೆಗಳಾಗಿವೆ.
೨. ’ಐ.ಎನ್.ಎಸ್. ನೀಲಗಿರಿ’ (ಸ್ಟೆಲ್ಥ್ ಗೈಡೆಡ್ ಮಿಸೈಲ್ ಫ್ರಿಗೇಟ್-ಶತ್ರುವಿಗೆ ತಕ್ಷಣ ಪತ್ತೆ ಹಚ್ಚಲಾಗದ ಮಾರ್ಗದರ್ಶಕ ಕ್ಷಿಪಣಿ ಯುದ್ಧನೌಕೆ)
ಭಾರತೀಯ ನೌಕಾದಳದ ’ವಾರ್‌ಶಿಪ್ ಡಿಝೈನ್ ಬ್ಯುರೋ’ ಡಿಝೈನ್ ಮಾಡಿದ, ’ಪ್ರೊಜೆಕ್ಟ್-೧೭ ಎ’ ಯಲ್ಲಿನ ಮೊಟ್ಟಮೊದಲ ಅತ್ಯಾಧುನಿಕ ’ಸ್ಟೆಲ್ಥ್ ಗೈಡೆಡ್ ಮಿಸೈಲ್ ಫ್ರಿಗೇಟ್’ (ನೀಲಗಿರಿ ಶ್ರೇಣಿಯ) ಆಗಿದೆ. ಮುಂದಿನ ಪೀಳಿಗೆಯ ಈ ಯುದ್ಧನೌಕೆಯನ್ನು ’ಮಝಗಾವ ಡಾಕ್ ಶಿಪ್‌ಬಿಲ್ಡರ್ಸ್’ ಮತ್ತು ’ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಎಂಡ್ ಇಂಜಿನಿಯರ್ಸ್’ ಇವರು ಭಾರತೀಯ ನೌಕಾದಳಕ್ಕಾಗಿ ಸಿದ್ಧಪಡಿಸಿದ್ದಾರೆ. ಈ ಯುದ್ಧನೌಕೆಯಲ್ಲಿ ’ಪ್ರಗತಿಶೀಲ ಪದ್ಧತಿಯಲ್ಲಿ ಅವಿತುಕೊಳ್ಳುವ ಕ್ಷಮತೆ, ಹೆಚ್ಚು ಕಾಲ ಸಾಗರದಲ್ಲಿ ತೇಲುವ ಹಾಗೂ ಶತ್ರುವಿಗೆ ಸುಲಭದಲ್ಲಿ ಸಿಗದಿರುವ ಕ್ಷಮತೆ ಮತ್ತು ಹೊಸ ಪೀಳಿಗೆಗೆ ಆತ್ಮನಿರ್ಭರ ’ಫ್ರಿಗೇಟ್’, ಇಂತಹ ಆಧುನಿಕ ತಂತ್ರಗಳಿವೆ. ಭಾರತೀಯ ನೌಕಾದಳದಲ್ಲಿನ ಇಂದಿನ ’ಶಿವಾಲಿಕ’ ಶ್ರೇಣಿಯ ’ಫ್ರಿಗೇಟ್’ನ (ಹಳೆಯ ಕಾಲದ ಯುದ್ಧನೌಕೆಯ) ತುಲನೆಯಲ್ಲಿ ಈ ಫ್ರಿಗೇಟ್‌ನಲ್ಲಿ ಮಹತ್ವಪೂರ್ಣ ಸುಧಾರಣೆಗಳನ್ನು ಮಾಡಲಾಗಿದೆ. ಅದರಲ್ಲಿ ’ಶತ್ರುವಿನ ರಾಡಾರ್ ನಲ್ಲಿ ಕಾಣಿಸಲು ಕಠಿಣ ಹಾಗೂ ಶತ್ರುವಿಗೆ ’ಇನ್ಫ್ರಾರೆಡ್’ ಕಿರಣಗಳ ಸಹಾಯದಿಂದ ಹುಡುಕಲು ಕೂಡ ಕಠಿಣ’, ಇಂತಹ ಮಹತ್ವದ ಸುಧಾರಣೆ ಮಾಡಲಾಗಿದೆ. ’ನೀಲಗಿರಿ’ ಈ ಶ್ರೇಣಿಯ ಒಟ್ಟು ೭ ’ಫ್ರಿಗೇಟ್ಸ್’ ಪ್ರೊಜೆಕ್ಟ್-೧೭ ಬಿ’ಯಲ್ಲಿ ಸಿದ್ಧಪಡಿಸಿ ಅವುಗಳನ್ನು ಭಾರತೀಯ ನೌಕಾದಳದ ಪೂರ್ವ ಹಡಗುಪಡೆಯ ’ಐ.ಎನ್.ಎಸ್.ವಿಕ್ರಾಂತ’ ಈ ವಿಮಾನವಾಹಕ ಹಡಗಿನ ತಂಡದಲ್ಲಿ (ಕ್ಯಾರಿಯರ್ ಬ್ಯಾಟಲ್ ಗ್ರೂಪ್’ನಲ್ಲಿ) ೨೦೨೭ ರ ವರೆಗೆ ನೇಮಕ ಮಾಡಲಾಗುವುದು.
೩. ವೈಶಿಷ್ಟ್ಯಗಳು
೩. ಅ. ಶತ್ರುವಿಗೆ ಸುಲಭದಲ್ಲಿ ಪತ್ತೆಹಚ್ಚಲಾಗದಂತಹ ಕ್ಷಮತೆ : ಈ ವೈಶಿಷ್ಟ್ಯವನ್ನು ಸಾಧಿಸಲು ಮಿಶ್ರಿತ ಸಾಹಿತ್ಯ, ರಡಾರ್ ಕಿರಣಗಳ ಉತ್ಸರ್ಜನೆ ಮಾಡದ ಹಾಗೂ ಶತ್ರುವಿನ ರಡಾರ್‌ನ ಕಿರಣಗಳಿಗೆ ಕಾಣಿಸದಿರುವ’, ಇಂತಹ ತಂತ್ರಜ್ಞಾನವನ್ನು ಉಪಯೋಗಿಸ ಲಾಗಿದೆ. ಇಂತಹ ತಂತ್ರಜ್ಞಾನವನ್ನು ಉಪಯೋಗಿಸಿರುವುದರಿಂದ ಯುದ್ಧನೌಕೆ ಶತ್ರುವಿಗೆ ಸುಲಭವಾಗಿ ಸಿಗುವುದಿಲ್ಲ.
೩ ಆ. ಯುದ್ಧನೌಕೆಯ ರಚನೆಯ ವೈಶಿಷ್ಟ್ಯಗಳು : ಯುದ್ಧನೌಕೆಯ ರಚನೆಯಲ್ಲಿ ’ಹಡಗು ನಿರ್ಮಿಸುವ ಮುಚ್ಚುಮರೆಯಿರುವ ಸ್ಥಳ, ಶತ್ರುವಿಗೆ ಕಾಣಿಸದಿರುವಂತಹ ಶಸ್ತ್ರಾಸ್ತ್ರ ಪದ್ಧತಿ ಹಾಗೂ ಕಡಿಮೆ ಸಂಖ್ಯೆಯಲ್ಲಿರುವ ಅಂಟೇನಾ’, ಈ ವೈಶಿಷ್ಟ್ಯಗಳಿರುವುದರಿಂದ ಅದರ ಕ್ಷಮತೆ ಹೆಚ್ಚಾಗುತ್ತದೆ.
೩ ಇ. ಹಡಗಿನ ಇನ್ಫ್ರಾರೆಡ್ ಕಿರಣಗಳ ಸಹಿ (ಇಟಿಜಿಡಿಚಿಡಿಎಜ ಸಿಗ್ಟಿಚಿಣಉಡಿಎ) : ಯುದ್ಧನೌಕೆಯ ಇನ್ಫ್ರಾರೆಡ್ ಕಿರಣಗಳ ಸಹಿಯನ್ನು ಕಡಿಮೆ ಗೊಳಿಸಲು ’ವ್ಹೆಂಚುರಿ ಪ್ರಭಾವ ಹಾಗೂ ದ್ರವದಿಂದ ಎಕ್ಝಾಸ್ಟ್’ ತಾಪಮಾನವನ್ನು ಕಡಿಮೆ ಮಾಡಿ ಇಂಜಿನ್ ಮತ್ತು ಶಕ್ತಿ ನಿರ್ಮಾಣದ ಉತ್ಸರ್ಜನೆಯನ್ನು ಕಡಿಮೆಗೊಳಿಸಲಾಗಿದೆ. ಇದರಿಂದ
ಯುದ್ಧನೌಕೆಯ ’ಸ್ಟೆಲ್ಥ್’ ಕ್ಷಮತೆ ಹೆಚ್ಚಾಗುತ್ತದೆ.
೩ ಈ. ಧ್ವನಿ ನಿಯಂತ್ರಣ : ಹಡಗನ್ನು ನೀರಿನಲ್ಲಿ ಮುಂದಕ್ಕೊಯ್ಯುವ ಪಂಖಗಳ (ರೆಕ್ಕೆಗಳ) ಡಿಝೈನ್ ಬದಲಾಯಿಸಿ ಪಂಖಗಳು ತಿರುಗುವುದರಿಂದ ಟೊಳ್ಳು ನಿರ್ಮಾಣವಾಗಿ ಅದರಿಂದಾಗುವ ಧ್ವನಿಯನ್ನು ನಿಯಂತ್ರಿಸಲಾಗಿದೆ, ಅದೇ ರೀತಿ ಹಡಗಿನ ರಚನೆಯ ಡಿಝೈನ್ ಬದಲಾಯಿಸಿ, ಧ್ವನಿ ಮಾಡುವ ಯಂತ್ರದ ಮೇಲೆ ಹೊದಿಕೆ ಹಾಕಿ, ಹೊರಗೆ ಬರುವ ಧ್ವನಿಯನ್ನು ನಿಯಂತ್ರಿಸಲಾಗಿದೆ.
೪. ’ಐ.ಎನ್.ಎಸ್. ವಾಘಶೀರ (ಸ್ಕಾರ್ಪಿನ್ ಕ್ಲಾಸ್’ ಸಬ್‌ಮೆರಿನ್-ಜಲಾಂತರ್ಗಾಮಿ)
ಭಾರತೀಯ ನೌಕಾದಳದ ’ಪ್ರೊಜೆಕ್ಟ್-೭೫’ರ ಮೂಲಕ ಫ್ರಾನ್ಸ್‌ನ ’ನೆವಲ್ ಗ್ರೂಪ್’ನ ಸಹಾಯದಿಂದ ನಿರ್ಮಿಸಿದ ೨ ಸಾವಿರ ಟನ್ ತೂಕದ ೬ ನೇ ಸ್ಕಾರ್ಪಿನ್ ಕ್ಲಾಸ್ ಸಬ್‌ಮೆರಿನ್ ಇದಾಗಿದೆ.
ಜಲಾಂತರ್ಗಾಮಿ-ನಿರ್ಮಾಣ ಕ್ಷೇತ್ರದಲ್ಲಿ ಭಾರತೀಯ ನೆವಲ್ ಗ್ರೂಪ್ ಕೌಶಲ್ಯ ಪಡೆದಿದೆ. ೨೦೦೫ ರಲ್ಲಿ ಭಾರತದ ಮುಂಬಯಿಯ ಮಝಗಾವ ಡಾಕ್‌ಶಿಪ್‌ನಲ್ಲಿ ಆರಂಭವಾದ ೬ ’ಕಾಲ್ವರಿ ಕ್ಲಾಸ್’ ಸಬ್‌ಮೆರಿನ್ (ಜಲಾಂತರ್ಗಾಮಿ ನೌಕೆ) ನಿರ್ಮಿಸುವ ಯೋಜನೆಯನ್ನು ’ಐ.ಎನ್.ಎಸ್. ವಾಘಶೀರ’ದ ಲೋಕಾರ್ಪಣೆಯಿಂದ ನೆರವೇರಿಸಲಾಗುತ್ತಿದೆ. ಈಗ ಜಲಾಂತರ್ಗಾಮಿ ನೌಕೆಯ ಸಾಗರ, ಶಸ್ತ್ರಾಸ್ತ್ರಗಳು ಮತ್ತು ’ಸೆನ್ಸರ್ಸ್’ ಗಳ ಪರಿಶೀಲನೆ ಆರಂಭವಾಗುವುದು. ಜಲಾಂತರ್ಗಾಮಿ ನಿರ್ಮಾಣದ ಈ ಯೋಜನೆಯು ಭಾರತದ ಸ್ವಾವಲಂಬನೆಯ ಸಂಕೇತವಾಗಿದೆ. ಫ್ರಾನ್ಸ್‌ನ ’ನೆವಲ್ ಗ್ರೂಪ್’ನಿಂದ ಮಝಗಾವ ಡಾಕ್ ಶಿಪ್ ಬಿಲ್ಡರ್ಸ್‌ಗೆ ತಂತ್ರಜ್ಞಾನದ ಹಸ್ತಾಂತರವಾಗುವಾಗ ೫೦ ಭಾರತೀಯ ಖಾಸಗಿ ಕಂಪನಿಗಳು ಜಲಾಂತರ್ಗಾಮಿಯ ಅನೇಕ ಭಾಗಗಳನ್ನು ನಿರ್ಮಿಸಿ ತಮ್ಮ ಅತ್ಯಾಧುನಿಕ ತಾಂತ್ರಿಕ ವಾಣಿಜ್ಯ ನಿರ್ಮಾಣದ ಕ್ಷಮತೆಯನ್ನು ತೋರಿಸಿವೆ.
೪ ಅ. ಸಾಗರ ತಳದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ಮಾಡುವ ಕ್ಷಮತೆ : ಶತ್ರುವಿನ ಜಲಾಂತರ್ಗಾಮಿಯ ವಿರುದ್ಧ ಆಕ್ರಮಣ, ದೂರದ ವರೆಗೆ ಹೋಗಿ ಸಾಗರದಲ್ಲಿ ಆಕ್ರಮಣ ಮಾಡುವುದು, ಶತ್ರುವಿನ ಪ್ರದೇಶದಲ್ಲಿ ಹೋಗಿ ರಹಸ್ಯವಾಗಿ ಗೂಢಚಾರಿಕೆ ಮಾಡುವುದು ಇತ್ಯಾದಿ. ಶತ್ರುವಿನ ’ರಡಾರ್ ಸಿಸ್ಟಮ್’ನಲ್ಲಿ ಕಾಣಿಸದಿರುವ ಹಾಗೂ ಅತೀ ವೇಗದಿಂದ ಸಾಗರದ ಒಳಗೆ ಪ್ರವಾಸ ಮಾಡುವ ಈ ಹಡಗನ್ನು ಸ್ವಯಂಚಾಲಿತ ತಂತ್ರಜ್ಞಾನದ ಉಪಯೋಗ ದಿಂದ ಅತ್ಯಲ್ಪ ನಾವಿಕರು ನಡೆಸಬಹುದು. ಆದ್ದರಿಂದ ಅದನ್ನು ಉಪಯೋಗಿಸುವ ಖರ್ಚು ತುಂಬಾ ಕಡಿಮೆಯಿದೆ. ಶಸ್ತ್ರಾಸ್ತ್ರ ಕ್ಷಮತೆಯಲ್ಲಿ ಈ ಜಲಾಂತರ್ಗಾಮಿಯು ತನ್ನ ೬ ’ಲಾಂಚಿಂಗ್ ಟ್ಯೂಬ್ಸ್’ಗಳಿಂದ ಸಾಗರ ಶತ್ರುಗಳ ಮೇಲೆ ೧೮ ’ಟಾರ್‌ಪಿಡೋಸ್’ ಅಥವಾ ಗಾಳಿಯಲ್ಲಿ ಶತ್ರುಗಳ ಮೇಲೆ ನೇರವಾಗಿ ಕ್ಷಿಪಣಿಗಳನ್ನು ಹಾಕಬಲ್ಲದು.
೫. ಭಾರತೀಯ ’ನೆವಲ್ ಗ್ರೂಪ್’
೨೦೦೮ ರಲ್ಲಿ ಫ್ರಾನ್ಸ್‌ನ ’ನೆವಲ್ ಗ್ರೂಪ್’ನ ಸಹಾಯದಿಂದ ಭಾರತೀಯ ’ನೆವಲ್ ಗ್ರೂಪ್’ನ ಸ್ಥಾಪನೆ ಮಾಡಲಾಯಿತು. ಸ್ವಾವಲಂಬನೆಯನ್ನು ಮೂಡಿಸಿ ಭಾರತದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಔದ್ಯೋಗಿಕ ಹಾಗೂ ನಾವಿಕರನ್ನು ತಯಾರು ಮಾಡುವುದು, ಇದು ಭಾರತೀಯ ನೆವಲ್ ಗ್ರೂಪ್‌ನ ಪ್ರಮುಖ ಕಾರ್ಯವಾಗಿದೆ. ಅದನ್ನು ಸಾಧಿಸುವಾಗ ಅವರು ಅನೇಕ ಭಾರತೀಯ ಅಭಿಯಂತರನ್ನು (ಇಂಜಿನೀಯರ್ಸ್) ಮತ್ತು ತಂತ್ರಜ್ಞರನ್ನು ಸಿದ್ಧಪಡಿಸಿದ್ದಾರೆ. ತನ್ನಲ್ಲಿ ಸಂರಕ್ಷಣ ಕ್ಷಮತೆಯನ್ನು ವೃದ್ಧಿಗೊಳಿಸಿ, ರಫ್ತು ಮಾಡುವ ಕ್ಷಮತೆಯನ್ನೂ ನಿರ್ಮಾಣ ಮಾಡಲಾಗಿದೆ.
೬. ಭಾರತದ ನಾವಿಕ ರಣನೀತಿಯ ಅವಕಾಶ
ಒಂದೇ ದಿನ ೩ ಯುದ್ಧನೌಕೆಗಳನ್ನು ಲೋಕಾರ್ಪಣೆ ಮಾಡುವ ದೇಶಗಳಲ್ಲಿ ಭಾರತವು ಜಗತ್ತಿನ ಏಕೈಕ ರಾಷ್ಟ್ರವಾಗಿದೆ. ಸಾವಿರಾರು ಕಿಲೋಮೀಟರ್ ಉದ್ದದ ಸಾಗರ ತೀರ ಇದು ಭಾರತದ ಬಹುದೊಡ್ಡ ನೈಸರ್ಗಿಕ ಸಂಪತ್ತಾಗಿದೆ. ಹಿಂದೂ ಮಹಾಸಾಗರ, ಬಂಗಾಲದ ಉಪಸಾಗರ ಹಾಗೂ ಅರಬೀ ಸಮುದ್ರ ಈ ಮೂರೂ ಸಾಗರಗಳ ಕೃಪೆ ಭಾರತದ ಮೇಲೆ ದೊಡ್ಡ ಪ್ರಮಾಣದಲ್ಲಿದೆ. ಇಂತಹ ಸುಂದರವಾದ ಸಾಗರ ಪ್ರದೇಶದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಭಾರತದ ಈ ೩ ಯುದ್ಧ ನೌಕೆಗಳು ತಮ್ಮ ಯೋಗದಾನ ನೀಡಲಿವೆ. ಸ್ವಾವಲಂಬನೆ ಸಹಿತ ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ನೌಕಾಸೈನಿಕ ಕ್ಷಮತೆಯಲ್ಲಿ ಭಾರತ ಮಾಡಿದ ಈ ವೃದ್ಧಿ ಕಣ್ಣುಕೋರೈಸುವಂತಿದೆ. ಭಾರತದ ನಾವಿಕ ರಣನೀತಿಯ ಅವಕಾಶ ಹೀಗೆಯೆ ಮುಂದುವರಿಯಬೇಕು. ಆದ್ದರಿಂದ ಈ ಮೂರೂ ಸಾಗರಗಳಲ್ಲಿ ಭಾರತದ ಪ್ರಭುತ್ವವನ್ನು ಸ್ಥಾಪಿಸಲು ಸಾಧ್ಯವಾಗಲಿಕ್ಕಿದೆ. ಈ ಅವಕಾಶದ ಹಿಂದೆ ನಿಶ್ಚಿತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯೇ ಕಾರಣವಾಗಿದೆ. ಅದರ ಶ್ರೇಯಸ್ಸನ್ನು ಅವರಿಗೆ ಕೊಡಲೇ ಬೇಕಾಗುತ್ತದೆ. ಇನ್ನು ಮುಂದೆ ಕಡಲ್ಗಳ್ಳರು ಸಮುದ್ರಕಳ್ಳತನ ಮಾಡುವಾಗ ಅವರು ನಿಶ್ಚಿತವಾಗಿ ಪುನರ್ವಿಚಾರ ಮಾಡಬೇಕಾಗುತ್ತದೆ. (೧೬.೧.೨೦೨೫) – ವಿಂಗ್ ಕಮಾಂಡರ್ ವಿನಾಯಕ ಪುರುಷೋತ್ತಮ ಡಾವರೆ (ನಿವೃತ್ತ), ಪುಣೆ.