ಭಾರತದ ‘ಬ್ರೈನ್‌ ಡ್ರೈನ್‌’ನ ವಿಶ್ಲೇಷಣೆ !

(ಗಮನಿಸಿ : ‘ಬ್ರೈನ್‌ ಡ್ರೈನ್’ ಅಂದರೆ ವಿದೇಶಕ್ಕೆ ನುರಿತ ಮತ್ತು ವಿದ್ಯಾವಂತ ಯುವಕರ ವಲಸೆ)

೧. ೧೦ ವರ್ಷಗಳಲ್ಲಿ ೨೫ ಲಕ್ಷ ಭಾರತೀಯರ ವಿದೇಶಕ್ಕೆ ವಲಸೆ

೨೦೧೪ ರಿಂದ ೨೦೨೪ ರ ನಡುವೆ ೨೫ ಲಕ್ಷ ಭಾರತೀಯರು ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಭಾರತವನ್ನು ತೊರೆದಿದ್ದಾರೆ. ಇದರಿಂದ ಕೇವಲ ನಮ್ಮ ಆರ್ಥಿಕವ್ಯವಸ್ಥೆ ಮಾತ್ರವಲ್ಲ; ನಮ್ಮ ದೇಶಾಭಿಮಾನದ ಮೇಲೆಯೂ ನೇರ ಪರಿಣಾಮವಾಗಿದೆ. ಇದು ಕೇವಲ ಅಂಕಿಅಂಶವಲ್ಲ. ಬದಲಾಗಿ ನಮ್ಮ ದೇಶದ ಆತ್ಮದ ಮೇಲಿನ ಅತಿ ದೊಡ್ಡ ಕಳಂಕವಾಗಿದೆ. ಇದೇ ಭಾರತ, ಒಂದು ಕಾಲದಲ್ಲಿ ವಿಶ್ವಗುರು ಎಂದು ಕರೆಯಲ್ಪಡುವ ಗೌರವವನ್ನು ಹೊಂದಿತ್ತು; ಆದರೆ ಇಂದು ನಮ್ಮ ಪ್ರತಿಭೆಗಳು, ನಮ್ಮ ವೈದ್ಯರು, ನಮ್ಮ ಎಂಜಿನಿಯರಗಳು, ನಮ್ಮ ವಿಜ್ಞಾನಿಗಳು ಎಲ್ಲರೂ ವಿದೇಶಿಯರ ತೆಕ್ಕೆಗೆ ಹೋಗುತ್ತಿದ್ದಾರೆ. ಭಾರತವು ತನ್ನ ಸ್ವಂತ ಮಕ್ಕಳಿಗೆ ಸೂಕ್ತವಾದ ವೇದಿಕೆಯಾಗಲು ಸಾಧ್ಯವಾಗಲಿಲ್ಲವೇ ? ಭಾರತಮಾತೆಯ ಮಡಿಲು ಬರಿದಾಗುತ್ತಿರುವಾಗಲೂ ನಾವು ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ ಇದು ಹತಾಶೆಯೋ ಅಥವಾ ಸಾಧ್ಯತೆಯೋ ?

ಸುರೇಶ ಚವ್ಹಾಣಕೆ

೨. ‘ಬ್ರೈನ್‌ ಡ್ರೈನ್‌’ನಿಂದಾಗಿ ದೇಶಕ್ಕಾದ ನಷ್ಟ

ಅ. ೧ ಲಕ್ಷ ೨೦ ಸಾವಿರ ಕೋಟಿ ನಷ್ಟ : ಈ ಅಂಕಿಅಂಶವು ಭಾರತದ ಒಟ್ಟು ವಾರ್ಷಿಕ ಬಜೆಟ್‌ನ ಶೇ. ೨೫ ರಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದ ೬ ತಿಂಗಳ ‘ಸರಕು ಮತ್ತು ಸೇವಾ ತೆರಿಗೆ’ ಸಂಗ್ರಹಕ್ಕೆ ಸಮನಾಗಿದೆ ಮತ್ತು ಪಾಕಿಸ್ತಾನದ ಸಂಪೂರ್ಣ ವಾರ್ಷಿಕ ಬಜೆಟ್‌ಗಿಂತ ಹೆಚ್ಚಾಗಿದೆ. ಊಹಿಸಿ, ಈ ಮೊತ್ತವನ್ನು ನಮ್ಮ ಶಾಲೆಗಳು, ಆಸ್ಪತ್ರೆಗಳು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಬಹುದಿತ್ತು.
ಆ. ಆರೋಗ್ಯ ಕ್ಷೇತ್ರಕ್ಕಾದ ನಷ್ಟ : ಕಳೆದ ೧೦ ವರ್ಷಗಳಲ್ಲಿ ಭಾರತದ ೫ ಲಕ್ಷ ವೈದ್ಯರು ಕಡಿಮೆಯಾಗಿದ್ದಾರೆ. ಈ ವೈದ್ಯರು ಪ್ರತಿ ವರ್ಷ ಲಕ್ಷಾಂತರ ಭಾರತೀಯರ ಜೀವಗಳನ್ನು ಉಳಿಸಬಹುದಾಗಿತ್ತು.; ಆದರೆ ಇಂದು ಅವರು ವಿದೇಶಿ ನೆಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಭಾರತೀಯರ ಜೀವನಕ್ಕೆ ಮಾಡಿದ ಅವಮಾನವಲ್ಲವೇ ?
ಇ. ನಾವೀನ್ಯ ಮತ್ತು ವಿಜ್ಞಾನಕ್ಕಾದ ನಷ್ಟ : ಮಾಹಿತಿ ತಂತ್ರಜ್ಞಾನ (ಐಟಿ) ವಲಯದಲ್ಲಿ ೨.೫ ಲಕ್ಷ ಕೋಟಿ ರೂಪಾಯಿಗಳ ಸಂಭಾವ್ಯ ಆದಾಯ ನಷ್ಟವಾಗುತ್ತದೆ. ಪ್ರತಿ ನಾಲ್ವರಲ್ಲಿ ಒಬ್ಬ ಭಾರತೀಯ ಇಂಜಿನಿಯರ್‌ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತವು ಈಗ ಮಾನವಶಕ್ತಿಯನ್ನು ಕಳುಹಿಸುವ ದೇಶವಾಗಿ ಉಳಿಯುತ್ತದೆಯೇ ?

೩. ಭಾವನಾತ್ಮಕ ಮಗ್ಗಲು: ಭಾರತಮಾತೆಯ ಕರೆ

ಯುವಕನೊಬ್ಬ ತನ್ನ ತಾಯಿಯನ್ನು ತೊರೆದು ವಿದೇಶಕ್ಕೆ ಹೋದಾಗ, ಭಾರತಮಾತೆಯ ಪರಿಸ್ಥಿತಿ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ ?, ಇದು ಕೇವಲ ಒಬ್ಬ ವ್ಯಕ್ತಿಯ ವಲಸೆಯಲ್ಲ, ಇದು ಭಾರತಮಾತೆಯ ಕನಸುಗಳ ಪಲ್ಲಟವಾಗಿದೆ. ಪ್ರತಿ ಸಲವೂ ಭಾರತೀಯನೊಬ್ಬ ವಿದೇಶಕ್ಕೆ ಹೋದಾಗಲೆಲ್ಲ ನಮ್ಮ ಮಣ್ಣಿನಲ್ಲಿ ಬೆಳೆದ ಹೂವನ್ನು ಬೇರೆಯವರ ತೋಟದಲ್ಲಿ ಉಣಿಸಲು ಹಾಕಿದಂತಾಗುತ್ತದೆ. ಇದು ನಮ್ಮ ಮಕ್ಕಳ ಭವಿμಯ್Àವನ್ನು ಬೇರೆಯವರ ಕೈಗೆ ಕೊಟ್ಟಂತೆ. ಮಾತೃಭೂಮಿಯ ಈ ರೀತಿಯ ಲೂಟಿಯನ್ನು ನಿಮ್ಮಿಂದ ನೋಡಲು ಆಗುವುದೇ ?

೪. ‘ಬ್ರೈನ್‌ ಡ್ರೈನ್‌’ಗೆ ಕಾರಣಗಳು ಮತ್ತು ಜವಾಬ್ದಾರಿ

ಅ. ಸರಕಾರದ ವೈಫಲ್ಯ : ಸಾಕಷ್ಟು ಉದ್ಯೋಗಾವಕಾಶ ಕಲ್ಪಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲಿನ ಹೂಡಿಕೆಯು ಕಳೆದ ೧೦ ವರ್ಷಗಳಲ್ಲಿ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ)ದ ಕೇವಲ ಶೇ. ೦.೬೫ ಮಾತ್ರವಿದೆ.
ಆ. ಉತ್ತಮ ಜೀವನ ಜೀವಿಸುವ ಶೋಧ : ವಿದೇಶದಲ್ಲಿ ಹೆಚ್ಚಿನ ವೇತನ, ಸಾಮಾಜಿಕ ಭದ್ರತೆ ಮತ್ತು ವಿದೇಶದಲ್ಲಿ ಆರೋಗ್ಯ ರಕ್ಷಣೆ ಯುವಜನರನ್ನು ಆಕರ್ಷಿಸುತ್ತದೆ.
ಇ. ಶಿಕ್ಷಣದಲ್ಲಿ ಸೀಮಿತ ಅವಕಾಶಗಳು : ಜಾಗತಿಕ ಸ್ಪರ್ಧೆಯಲ್ಲಿ ಭಾರತದ ವಿಶ್ವವಿದ್ಯಾಲಯಗಳು ಹಿಂದುಳಿದಿವೆ.
ಈ. ಹೆಚ್ಚಿನ ಸಂಬಳದ ನಿರೀಕ್ಷೆ : ವಿದೇಶದಲ್ಲಿ ಅದೇ ಕೆಲಸಕ್ಕಾಗಿ ಭಾರತಕ್ಕಿಂತ ೫-೭ ಪಟ್ಟು ಹೆಚ್ಚು ಹಣ ಸಿಗುತ್ತದೆ.

೫. ‘ಬ್ರೈನ್‌ ಡ್ರೈನ್‌’ನ ಪರಿಣಾಮಗಳು

ಅ. ಭಾರತದ ೨೦ ಲಕ್ಷ ಕೋಟಿ ರೂಪಾಯಿ ನಷ್ಟ : ಈ ಮೊತ್ತವು ಭಾರತದ ೬ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಕ್ಕೆ ಸಮನಾಗಿದೆ. ಊಹಿಸಿಕೊಳ್ಳಿ, ಇದರಿಂದ ೧೦ ಸಾವಿರ ಹೊಸ ಆಸ್ಪತ್ರೆಗಳನ್ನು ನಿರ್ಮಿಸಬಹುದಿತ್ತು, ೫೦ ಸಾವಿರ ಶಾಲೆಗಳನ್ನು ಮೇಲ್ದರ್ಜೆಗೇರಿಸಬಹುದು ಮತ್ತು ದೇಶದ ಪ್ರತಿಯೊಂದು ಹಳ್ಳಿ ಯನ್ನು ‘ಡಿಜಿಟಲ್‌ ಇಂಡಿಯಾ’ ಭಾಗವನ್ನಾಗಿ ಮಾಡಬಹುದಿತ್ತು.
ಆ. ವೈದ್ಯರು ಮತ್ತು ವಿಜ್ಞಾನಿಗಳ ಕೊರತೆ : ೫ ಲಕ್ಷ ವೈದ್ಯರ ಕೊರತೆ ದೇಶದ ಆರೋಗ್ಯ ಕ್ಷೇತ್ರವನ್ನು ದುರ್ಬಲಗೊಳಿಸಿದೆ. ಚಿಕಿತ್ಸೆಗೆ ಕಾಯುತ್ತಿರುವ ಬಡವನ ಸಾವಿಗೆ ಇದೇ ಕಾರಣವಲ್ಲವೇ ?
ಇ. ನಾವೀನ್ಯತೆಯಲ್ಲಿ ಕುಸಿತ : ಭಾರತವು ಈಗ ಮಾಹಿತಿ ತಂತ್ರಜ್ಞಾನ ಸೇವೆಗಳ ಕೇಂದ್ರವಾಗಿದೆ; ಆದರೆ ತಂತ್ರಜ್ಞಾನವು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯವಾಗಲಿಲ್ಲ.
ಈ. ರಾಷ್ಟ್ರೀಯ ಸ್ವಾಭಿಮಾನದಲ್ಲಿ ಕುಸಿತ : ಯುವ ಪ್ರತಿಭೆಗಳು ಭಾರತವನ್ನು ತೊರೆದಾಗ, ಅದು ನಮ್ಮ ಆತಸ್ಥೈರ್ಯಕ್ಕೂ ದೊಡ್ಡ ಆಘಾತವಾಗುತ್ತದೆ.

೬. ವಿದೇಶಕ್ಕೆ ವಲಸೆ ಹೋಗುವುದನ್ನು ತಡೆಯುವ ಕ್ರಮಗಳು

ಅ. ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು : ಹೆಚ್ಚಿನ ಉದ್ಯಮಗಳನ್ನು ರಚಿಸುವುದು ಮತ್ತು ಸ್ಟಾರ್ಟ್ಪ್‌ ಗಳನ್ನು ಉತ್ತೇಜಿಸುವುದು
ಆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು : ಜಿಡಿಪಿಯ ಕನಿಷ್ಠ ಶೇ. ೨ ರಷ್ಟು ಭಾಗವನ್ನು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಬೇಕು.
ಇ. ಸ್ಪರ್ಧಾತ್ಮಕ ವೇತನಗಳು ಮತ್ತು ಲಾಭಗಳನ್ನು ಒದಗಿಸುವುದು : ಭಾರತೀಯ ಸಂಸ್ಥೆಗಳು ಮತ್ತು ಸರಕಾರಿ ಸಂಸ್ಥೆಗಳು ವೇತನ ಮತ್ತು ಸೌಲಭ್ಯಗಳನ್ನು ನೀಡಬೇಕಾಗುವುದು.
ಈ. ‘ಬ್ರೈನ್‌ ಗೇನ್’ (ಭಾರತೀಯ ಯುವಕರನ್ನು ದೇಶದಲ್ಲಿ ಉಳಿಸಿಕೊಳ್ಳಬೇಕು) ಯೋಜನೆ ಜಾರಿಗೊಳಿಸುವುದು : ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಭಾರತಕ್ಕೆ ಮರಳಿ ಕರೆತರಲು ಆಕರ್ಷಕ ಕಾರ್ಯತಂತ್ರಗಳನ್ನು ರೂಪಿಸಬೇಕಾಗಲಿದೆ
ಉ. ವಿಶ್ವ ದರ್ಜೆಯ ಶಿಕ್ಷಣವನ್ನು ಒದಗಿಸುವುದು: ಭಾರತೀಯ ವಿಶ್ವವಿದ್ಯಾಲಯಗಳು ನಾವೀನ್ಯತೆಯಿಂದ ಕೂಡಿರುವ ಉಪಕ್ರಮ (ಯೋಜನೆ) ಮತ್ತು ಸಂಶೋಧನೆಯ ಕೇಂದ್ರಗಳಾಗಬೇಕು.

೭. ಭಾರತೀಯರು ಎಚ್ಚೆತ್ತುಕೊಳ್ಳಬೇಕಾದ ಆವಶ್ಯಕತೆ !

ಇದು ಕೇವಲ ಆರ್ಥಿಕ ನಷ್ಟದ ಹೋರಾಟವಲ್ಲ, ಆದರೆ ಇದು ನಮ್ಮ ರಾಷ್ಟ್ರಾಭಿಮಾನದ ಹೋರಾಟವಾಗಿದೆ. ಪ್ರತಿಯೊಬ್ಬ ಭಾರತೀಯನೂ ಯೋಚಿಸಬೇಕು. ತಾನು ತನ್ನ ಪ್ರತಿಭೆ, ಕನಸುಗಳು ಮತ್ತು ಆತ್ಮವನ್ನು ವಿದೇಶದಲ್ಲಿ ಕಳೆದುಹೋಗಲು ಬಿಡಬೇಕೇ ? ಸರಕಾರ ಈ ವಿಚಾರಕ್ಕೆ ಆದ್ಯತೆ ನೀಡಬೇಕು. ಇದು ಕೇವಲ ಅಂಕಿಅಂಶಗಳ ಪ್ರಶ್ನೆಯಲ್ಲ, ಭಾರತದ ಭವಿಷ್ಯದ ಪ್ರಶ್ನೆ. ಹಾಗಿದ್ದರೆ ನಾವೆಲ್ಲರೂ ಒಂದಾಗಿ ಹೆಜ್ಜೆ ಹಾಕೋಣ ಮತ್ತು ಭಾರತದ ಪ್ರತಿಭೆ ಭಾರತದ ಮಣ್ಣಿನಲ್ಲಿ ಬೆಳೆಯುವಂತೆ ಮತ್ತು ದೇಶಕ್ಕೆ ಕೀರ್ತಿ ಬರುವಂತೆ ಮಾಡೋಣ. ಭಾರತಮಾತೆಯ ಕರೆ ಕೇಳಿಸಿಕೊಳ್ಳಿರಿ, ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ.

– ಡಾ. ಸುರೇಶ ಚವ್ಹಾಣಕೆ, ಸಂಪಾದಕರು, ‘ಸುದರ್ಶನ’ ವಾಹಿನಿ