ಅಮೇರಿಕಾವು ಅಕ್ರಮವಾಗಿ ವಾಸಿಸುವ ೧೦೪ ಭಾರತೀಯರಿಗೆ ಹಿಂತಿರುಗಿ ಕಳಿಸುವಾಗ ಕೈಯಲ್ಲಿ ಮತ್ತು ಕಾಲಿಗೆ ಬೇಡಿಗಳು ಹಾಕಿದ ಘಟನೆ
ನವದೆಹಲಿ – ಅಮೇರಿಕಾದಲ್ಲಿ ಅಕ್ರಮವಾಗಿ ವಾಸಿಸುವ ೧೦೪ ಭಾರತೀಯರನ್ನು ಅಮೆರಿಕ ಅವರ ಸೈನ್ಯದ ‘ಸಿ-೧೭ ಗ್ಲೋಬಮಾಸ್ಟರ್’ ವಿಮಾನದಿಂದ ಭಾರತಕ್ಕೆ ಕಳುಹಿಸಿದ್ದಾರೆ. ವಿಮಾನ ಫೆಬ್ರುವರಿ ೫ ರಂದು ರಾತ್ರಿ ಪಂಜಾಬದ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಅಮೇರಿಕಾ ಹಿಂತಿರುಗಿ ಕಳುಹಿಸಿರುವ ಭಾರತೀಯರ ಕೈಯಲ್ಲಿ ಮತ್ತು ಕಾಲಲ್ಲಿ ಬೇಡಿಗಳು ಹಾಕಿರುವುದು ಕಂಡು ಬಂದಿದೆ. ೪೦ ಗಂಟೆಯ ಈ ಪ್ರವಾಸದಲ್ಲಿ ಅವರಿಗೆ ಬೇಡಿ ಹಾಕಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ವಿರೋಧ ಪಕ್ಷದವರು ಆಡಳಿತಾರೂಢ ಭಾಜಪವನ್ನು ತೀವ್ರವಾಗಿ ಟೀಕಿಸಿದರು. ಹಾಗೂ ಫೆಬ್ರುವರಿ ೬ ರಂದು ಸಂಸತ್ತಿನಲ್ಲಿ ರಂಪರಾಧಾಂತ ಮಾಡಿದರು. ಸಂಸತ್ತಿನ ಹೊರಗೆ ಪ್ರತಿಭಟನೆ ಕೂಡ ನಡೆಸಿದರು. ಇದರಿಂದ ಸಂಸತ್ತಿನ ಕಾರ್ಯಕಲಾಪ ಕೆಲವು ಸಮಯದ ವರೆಗೆ ಸ್ಥಗಿತ ಗೊಳಿಸಬೇಕಾಯಿತು. ಈ ಪ್ರಕರಣದ ಬಗ್ಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದರು. ಅದರಲ್ಲಿ ಅವರು, ಸ್ಥಳಾಂತರರಿಗೆ ಈ ರೀತಿ ವಿಮಾನದಿಂದ ಹಿಂತಿರುಗಿ ಕಳುಹಿಸುವ ಪದ್ಧತಿ ಹೊಸದೇನು ಅಲ್ಲ. ಈ ಹಿಂದೆ ಕೂಡ ಈ ರೀತಿ ಮಾಡಲಾಗಿದೆ. ಇದು ನಿಯಮದ ಪ್ರಕಾರ ಮಾಡಲಾಗುತ್ತದೆ, ಎಂದು ಹೇಳುತ್ತಾ ಅವರು ೨೦೦೯ ರಿಂದ ಸ್ಥಳಾಂತರರನ್ನು ಹಿಂತಿರುಗಿ ಕಳುಹಿಸಿರುವ ಅಂಕಿ ಸಂಖ್ಯೆ ಓದಿ ತೋರಿಸಿದರು.
ಭಾರತದಲ್ಲಿ ಹಿಂತಿರುಗಿ ಕಳುಹಿಸಿರುವ ಭಾರತೀಯರಲ್ಲಿ ೩೦ ಪಂಜಾಬದ, ಹರಿಯಾಣಾ ಮತ್ತು ಗುಜರಾತ ರಾಜ್ಯದ ತಲಾ ೩೩ ಹಾಗೂ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯದ ತಲಾ ೩ ಮತ್ತು ಚಂದಿಗಡದ ೨ ಭಾರತೀಯ ನಾಗರೀಕರ ಸಮಾವೇಶವಿದೆ, ಎಂದು ಮೂಲಗಳಿಂದ ತಿಳಿದು ಬಂದಿದೆ; ಆದರೆ ಈ ಸಂಖ್ಯೆಯ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ. ಇದರಲ್ಲಿ ೧೯ ಮಹಿಳೆಯರು ಮತ್ತು ೧೩ ಅಪ್ರಾಪ್ತ ಹುಡುಗರ ಸಮಾವೇಶ ಕೂಡ ಇದೆ. ಈ ಎಲ್ಲರನ್ನು ಪಂಜಾಬ ಪೊಲೀಸರ ಸಹಿತ ಬೇರೆ ಬೇರೆ ಸರಕಾರಿ ಸಂಸ್ಥೆಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಯಾರ ವಿರುದ್ಧ ದೂರು ದಾಖಲ ಇರುವುದೇ ? ಇದನ್ನು ಪರಿಶೀಲಿಸಲಾಗುತ್ತಿದೆ.
Since 2009, Indians Have Been Sent Back as per Rules! – External Affairs Minister Dr. S. Jaishankar informs the Parliament.
An incident where the US deported 104 Indians shackling their hands and feet for illegal stay in the USA. https://t.co/JTmDJfl5jG pic.twitter.com/SWOd9p7POJ
— Sanatan Prabhat (@SanatanPrabhat) February 6, 2025
ಎಸ್. ಜೈ ಶಂಕರ್ ಇವರು ಮಾತು ಮುಂದುವರೆಸಿ,
೧. ಹಿಂತಿರುಗಿ ಕಳುಹಿಸುವ ಪ್ರಕ್ರಿಯೆಯ ರೂಪರೇಷೆ ಮತ್ತು ಕ್ರಮ ಇದು ಅಮೆರಿಕಾದ ‘ಇಮಿಗ್ರಷನ್ ಅಂಡ್ ಕಸ್ಟಮ್ ಇನ್ ಫೋರ್ಸ್ ಮೆಂಟ್’ ಈ ಇಲಾಖೆಯಿಂದ ನಡೆಯುತ್ತದೆ. ಇಲಾಖೆಯಿಂದ ವಿಮಾನದಿಂದ ಹಿಂತಿರುಗಿ ಕಳುಹಿಸುವುದಕ್ಕಾಗಿ ‘ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್’ ಈ ಪ್ರಕ್ರಿಯೆ ೨೦೧೨ ರಿಂದ ಉಪಯೋಗಿಸುತ್ತಾರೆ.
೨. ಸ್ಥಳಾಂತರರನ್ನು ವಿಮಾನದಿಂದ ಹಿಂತಿರುಗಿ ಕಳುಹಿಸುವಾಗ ಬಂಧನದಲ್ಲಿ ಇಡಲಾಗುತ್ತದೆ; ಆದರೆ ಹೀಗೆ ಇದ್ದರು, ‘ಹಿಮಿಗ್ರೇಶನ್ ಅಂಡ್ ಕಸ್ಟಮ್ ಇನ್ ಫೋರ್ಸ್ಮೆಂಟ್’ ನಿಂದ ನಮಗೆ ನೀಡಿರುವ ಮಾಹಿತಿಯ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ಮೇಲೆ ಯಾವುದೇ ಬಂಧನ ಹಾಕುವುದಿಲ್ಲ. ಹಾಗೂ ಹಿಂತಿರುಗಿ ಕಳುಹಿಸುವಾಗ ಜನರ ಸೌಲಭ್ಯಕ್ಕಾಗಿ ಆಹಾರ ಮತ್ತು ಇತರ ಅಗತ್ಯಗಳ ಬಗ್ಗೆ ಕಾಳಜಿ ವಹಿಸುತ್ತಾರೆ.
೩. ಆಪತ್ಕಾಲಿನ ಪರಿಸ್ಥಿತಿಯಲ್ಲಿ ವೈದ್ಯಕೀಯ ಸೌಲಭ್ಯದ ಸಮಾವೇಶ ಕೂಡ ಇರುತ್ತದೆ. ಅಗತ್ಯ ಇದ್ದರೆ ಅಥವಾ ಶೌಚಾಲಯಕ್ಕೆ ಹೋಗುವುದಕ್ಕಾಗಿ ಸ್ಥಳಾಂತರರನ್ನು ಬಂಧನದಿಂದ ಮುಕ್ತ ಗೊಳಿಸುತ್ತಾರೆ. ಈ ನಿಯಮ ನಾಗರಿಕ ವಿಮಾನ ಹಾಗೂ ಸೈನ್ಯದ ವಿಮಾನಕ್ಕಾಗಿ ಕೂಡ ಅನ್ವಯಿಸುತ್ತದೆ.
೪. ಅಮೇರಿಕಾವು ಫೆಬ್ರುವರಿ ೫ ರಂದು ಕಳುಹಿಸಿರುವ ವಿಮಾನದಲ್ಲಿ ಕೂಡ ಯಾವುದೇ ಬದಲಾವಣೆ ಮಾಡಿಲ್ಲ. ಹಿಂತಿರುಗಿ ಕಳುಹಿಸುವಾಗ ಭಾರತೀಯ ನಾಗರೀಕರ ಜೊತೆಗೆ ದುರ್ವರ್ತನೆ ಆಗಬಾರದೆಂದು; ಅದಕ್ಕಾಗಿ ನಾವು ಅಮೆರಿಕ ಸರಕಾರದ ಸಂಪರ್ಕದಲ್ಲಿ ಇದ್ದೇವೆ.