ವಾಷಿಂಗ್ಟನ – ಡೊನಾಲ್ಡ ಟ್ರಂಪ ಅಮೇರಿಕದಲ್ಲಿ ಅಧಿಕಾರಕ್ಕೆ ಬಂದ ನಂತರ, ಇರಾನ್ ವಿರುದ್ಧದ ಕ್ರಮಗಳನ್ನು ತೀವ್ರಗೊಳಿಸಿದ್ದಾರೆ. ಇರಾನ್ ಮೇಲೆ ಒತ್ತಡ ಹೆಚ್ಚಿಸುವ ತನ್ನ ನೀತಿಯ ಭಾಗವಾಗಿ, ಟ್ರಂಪ್ ಆಡಳಿತವು ಭಾರತದೊಂದಿಗಿನ ಇರಾನ್‌ನ ಮೈತ್ರಿಯ ಮೇಲೆಯೂ ದಾಳಿ ಮಾಡಲು ಪ್ರಾರಂಭಿಸಿದೆ. ಅಮೇರಿಕಾವು ಇರಾನಿನ ಚಾಬಹಾರ್ ಬಂದರಿನಲ್ಲಿ ಭಾರತಕ್ಕೆ ನೀಡಲಾದ ವಿನಾಯಿತಿಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಮತ್ತು ಭಾರತೀಯ ಸಂಸ್ಥೆ ‘ಮಾರ್ಷಲ್ ಶಿಪ್ ಮ್ಯಾನೇಜ್ಮೆಂಟ್ ಕಂಪನಿ’ಯನ್ನು ಸಹ ನಿಷೇಧಿಸಿದೆ. ಭಾರತೀಯ ಸಂಸ್ಥೆಯು ಇರಾನಿಗೆ ಚೀನಾದೊಂದಿಗಿನ ತೈಲ ವ್ಯಾಪಾರದಲ್ಲಿ ಸಹಾಯ ಮಾಡಿದೆಯೆಂದು ಅಮೇರಿಕಾ ಆರೋಪಿಸಿದೆ. ಇಸ್ರೇಲ್ ಜೊತೆಗಿನ ಯುದ್ಧದ ನಂತರ ಇರಾನ್ ಪರಮಾಣು ಬಾಂಬ್ ನಿರ್ಮಿಸುವಲ್ಲಿ ನಿರತವಾಗಿದೆ ಎಂದು ಅಮೇರಿಕಾ ಭಯಗೊಂಡಿದೆ. (‘ಶತ್ರುವಿನ ಮಿತ್ರ ಶತ್ರುವೇ ಆಗಿರುತ್ತಾರೆ’, ಎಂಬ ತತ್ವದ ಪ್ರಕಾರ, ಪಾಕಿಸ್ತಾನವನ್ನು ಬೆಂಬಲಿಸುವ ಅಮೇರಿಕದಿಂದ ಭಾರತವು ಬೇರೆಯದನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ ! – ಸಂಪಾದಕರು)
1. ಈ ಹಿಂದೆ ಫೆಬ್ರವರಿ 4 ರಂದು, ಅಮೇರಿಕೆಯ ಟ್ರಂಪ್ ಆಡಳಿತವು ಇರಾನ್ ಮೇಲೆ ಹೆಚ್ಚಿನ ಆರ್ಥಿಕ ಒತ್ತಡವನ್ನು ಹೇರುವಂತೆ ಆದೇಶಿಸಿತ್ತು. ಈ ಒತ್ತಡದ ಮೂಲಕ ಇರಾನ್‌ನ ಪ್ರಭಾವವನ್ನು ಕಡಿಮೆ ಮಾಡಬಹುದು’, ಎಂದು ಅಮೇರಿಕ ಭಾವಿಸುತ್ತದೆ.
2. ಅಮೇರಿಕಾ ತನ್ನ ಅಧಿಕೃತ ಮನವಿಯಲ್ಲಿ, ಇರಾನ್ ಪ್ರತಿ ವರ್ಷ ತೈಲ ಮಾರಾಟ ಮಾಡುವ ಮೂಲಕ ಶತಕೋಟಿ ಡಾಲರ್ಸ್‌ಗಳನ್ನು ಗಳಿಸುತ್ತಿದೆ ಮತ್ತು ಈ ಮೂಲಕ ಪ್ರದೇಶದಾದ್ಯಂತ ಅಸ್ಥಿರತೆಯನ್ನು ಹರಡುವ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ. ಇರಾನ ಹಮಾಸ್, ಹಿಜಬುಲ್ಲಾ ಮತ್ತು ಹುತಿ ಈ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಿದೆ.
3. ಇರಾನ ಸರಕಾರವು ತೈಲದಿಂದ ಹಣವನ್ನು ಗಳಿಸಿ ಅಣು ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಅಲ್ಲದೇ ಕ್ಷಿಪಣಿಗಳು ಮತ್ತು `ಕಿಲರ ಡ್ರೋನ’ಗಳನ್ನು ತಯಾರಿಸುತ್ತಿದೆಯೆಂದು ಅಮೇರಿಕಾ ಹೇಳಿದೆ.