ಸರಕಾರಿ ಡೇಟಾ ಸುರಕ್ಷಿತವಾಗಿ ಇರಿಸುವುದಕ್ಕಾಗಿ ಕಠಿಣ ಕ್ರಮ !
(ಎಐ ಆಪ್ಸ್ ಎಂದರೆ ಕೃತ್ರಿಮ ಬುದ್ದಿಮತ್ತೆಯನ್ನು ಉಪಯೋಗಿಸುವ ಅತ್ಯಧುನಿಕ ಪ್ರಣಾಲಿ)
ನವ ದೆಹಲಿ – ಭಾರತೀಯ ಹಣಕಾಸು ಸಚಿವಾಲಯವು ‘ಚಾಟ್ ಜೆಪಿಟಿ’, ‘ಡಿಪಸಿಕ್’ ಸಹಿತ ಎಲ್ಲಾ ‘ಎಐ ಆಪ್ಸ್’ ನ ಬಳಕೆ ನಿಷೇಧಿಸುವ ಸೂಚನೆ ಜಾರಿಗೊಳಿಸಿದೆ. ಜನವರಿ ೨೯ ರಿಂದ ಜಾರಿಗೊಳಿಸಿರುವ ಈ ಸುತ್ತೋಲೆಯ ಉದ್ದೇಶ ಸರಕಾರಿ ಸೂಕ್ಷ್ಮ ಡೇಟಾದ ಸುರಕ್ಷೆ ಸುನಿಶ್ಚಿತಗೊಳಿಸುವುದು ಮತ್ತು ಸಂಭಾವ್ಯ ಸೈಬರ್ ಅಪಾಯ ತಡೆಯುವುದಾಗಿದೆ.
ಹಣಕಾಸು ಸಚಿವಾಲಯದ ಸಹಸಚಿವ ಪ್ರದೀಪ ಕುಮಾರ ಸಿಂಹ ಇವರು ಈ ಆದೇಶದಲ್ಲಿ, ಸರಕಾರಿ ಕಂಪ್ಯೂಟರ್‍ಗಳ ಮೇಲೆ ‘ಎಐ’ ನ ಬಳಕೆ ಮಾಡಿದರೆ ಗೌಪ್ಯ ಸರಕಾರಿ ಮಾಹಿತಿ ಅಪಾಯಕ್ಕೆ ಸಿಲುಕುತ್ತದೆ. ಇದನ್ನು ಗಮನಿಸಿ ಹಣಕಾಸು ಸಚಿವಾಲಯವು ಎಲ್ಲಾ ಸಿಬ್ಬಂದಿಗಳ ಅಧಿಕೃತ ಉಪಕರಣಗಳ ಮೇಲೆ ಇಂತಹ ತಂತ್ರಜ್ಞಾನದ ಬಳಕೆ ತಪ್ಪಿಸಲು ಸಲಹೆ ನೀಡಿದೆ. ಸಚಿವಾಲಯದ ಸಚಿವರ ಸಮ್ಮತಿಯ ನಂತರ ಈ ಆದೇಶ ತೆರಿಗೆ, ಆರ್ಥಿಕ ವ್ಯವಹಾರ, ಸಾರ್ವಜನಿಕ ಉಪಕ್ರಮ ಮತ್ತು ಹಣಕಾಸು ಸೇವೆ ಸಹಿತ ಪ್ರಮುಖ ಸರಕಾರಿ ಇಲಾಖೆಗಳಿಗೆ ಕಳುಹಿಸಲಾಗಿದೆ.
೧.’ಡೇಟಾ ಲಿಕ್’ನ ಅಪಾಯ !
‘ಚಾಟ್ ಜಿಪಿಟಿ’ ಮತ್ತು ‘ಡಿಪಸಿಕ್’ ಇವುಗಳಂತಹ ‘ಎಐ ಮಾಡೆಲ್ಸ್’ ಇದನ್ನು ಬಳಕೆದಾರರು ದಾಖಲಿಸಿರುವ ‘ಡೇಟಾ’ವನ್ನು ಹೊರಗಿನ ಸರ್ವರನಲ್ಲಿ ಪ್ರಕ್ರಿಯೆ ಮಾಡುತ್ತಾರೆ. ಸರಕಾರಿ ಸಿಬ್ಬಂದಿಯು ಈ ‘ಎಐ ಆಪ್ಸ್’ನಲ್ಲಿ ರಹಸ್ಯ ಮಾಹಿತಿ ದಾಖಲಿಸಿದ್ದರೆ ಆಡಳಿತ ಬೇರೆ ಕಡೆ ಸಂಗ್ರಹ ಮಾಡಬಹುದು, ಅದರಲ್ಲಿ ಪ್ರವೇಶ ಮಾಡಬಹುದು ಅಥವಾ ಅದರ ದುರುಪಯೋಗ ಮಾಡಬಹುದು. ಈ ಡೇಟಾ ‘ಲಿಕ್ ‘ಆದರೆ, ಆಗ ಅದು ರಾಷ್ಟ್ರೀಯ ಸುರಕ್ಷೆ ಮತ್ತು ಆರ್ಥಿಕ ನೀತಿಗೆ ಗಂಭೀರ ಅಪಾಯ ನಿರ್ಮಿಸಬಹುದು.
೨. ‘ಎಐ ಮಾಡೆಲ್ಸ್’ ನಲ್ಲಿ ಸರಕಾರಿ ಹಿಡಿತದ ಕೊರತೆ !
‘ಎಐ ಮಾಡೆಲ್ಸ್’ ಖಾಸಗಿ ಕಂಪನಿಯ ಸ್ವಾಮ್ಯತ್ವ ಇರುತ್ತದೆ. ಉದಾಹರಣೆ ‘ಚಾಟ್ ಜಿಪಿಟಿ’ ಇದು ‘ಓಪನ್ ಎಐ’ ಈ ಕಂಪನಿಯ ಸ್ವಾಮ್ಯತ್ವದಲ್ಲಿ ಇದೆ. ಈ ತಂತ್ರಜ್ಞಾನ ಮಾಹಿತಿ ಹೇಗೆ ಸಂಗ್ರಹಿಸುತ್ತದೆ ಅಥವಾ ಪ್ರಕ್ರಿಯೆ ಮಾಡುತ್ತದೆ, ಇದರ ಮೇಲೆ ಸರಕಾರದ ಯಾವುದೇ ಹಿಡಿತ ಇಲ್ಲ. ಅದರಿಂದ ಬಾಹ್ಯ ಹಸ್ತಕ್ಷೇಪ ಅಥವಾ ಸೈಬರದಾಳಿಗಳ ಅಪಾಯ ನಿರ್ಮಾಣವಾಗಬಹುದು.
೩. ಡೇಟಾ ಸಂರಕ್ಷಣೆ ನೀತಿಯ ಪಾಲನೆ !
ಭಾರತ ಸರಕಾರ ‘ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ (ಡಿಪಿಡಿಪಿ) ಕಾನೂನು, ೨೦೨೩’ ಇಂತಹ ಕಠೋರ ಡೇಟಾ ಸಂರಕ್ಷಣಾ ಕಾನೂನಿನಲ್ಲಿ ಕೆಲಸ ಮಾಡುತ್ತಿದೆ. ಸರಕಾರಿ ಸಿಬ್ಬಂದಿಗಳಿಗೆ ಸ್ಪಷ್ಟ ನಿಯಮ ಅಲ್ಲದೆ ‘ಎಐ ಟೂಲ್ಸ್’ ಉಪಯೋಗಿಸುವ ಅನುಮತಿ ನೀಡಿದರೆ, ಆಗ ಅವರು ಡೇಟಾ ಸುರಕ್ಷಾ ನೀತಿಯ ಉಲ್ಲಂಘನೆ ಮಾಡಬಹುದು ಅಥವಾ ಸರಕಾರಿ ವ್ಯವಸ್ಥೆ ಸೈಬರದಾಳಿಗೆ ಬಲಿಯಾಗಬಹುದು.