ಆಗರಾದಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಹಿಂದೂ- ಮುಸ್ಲಿಮ ಘರ್ಷಣೆ !

ರಾಜ್ಯದ ಕಾನಪುರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಜೂನ ೫ ರಂದು ಆಗರಾದಲ್ಲಿ ಪರಿಸ್ಥಿತಿಯು ಹದಗೆಟ್ಟಿತು. ಆಗರಾದ ತಾಜಗಂಜಿನ ಬಸೀ ಖುರ್ದನಲ್ಲಿ ದ್ವಿಚಕ್ರ ವಾಹನದ ಸಣ್ಣ ಆಫಘಾತದ ನಂತರ ಹಿಂದೂ ಮತ್ತು ಮುಸ್ಲಿಮರ ನಡುವೆ ಹೊಡೆದಾಟ ಹಾಗೂ ಕಲ್ಲು ತೂರಾಟ ನಡೆಯಿತು.

ಸಂತರ ಎಚ್ಚರಿಕೆಯ ನಂತರ ತಾಜಮಹಲಿನಲ್ಲಿರುವ ಕಲಾಕೊಠಡಿಯಲ್ಲಿನ ಶೌಚಾಲಯದ ಬಳಿ ಹಚ್ಚಲಾಗಿದ್ದ ಶ್ರೀಕೃಷ್ಣನ ಚಿತ್ರವನ್ನು ತೆಗೆಯಲಾಯಿತು !

ಇಲ್ಲಿನ ತಾಜಮಹಲಿನ ‘ರಾಯಲ ಗೇಟ್‌’ನಲ್ಲಿರುವ ಒಂದು ಕಲಾಕೊಠಡಿಯ ಶೌಚಾಲಯದ ಬಳಿ ಹಚ್ಚಲಾದ ಭಗವಾನ ಶ್ರೀಕೃಷ್ಣನ ಚಿತ್ರವನ್ನು ತೆಗೆಸಲಾಗಿದೆ. ಸಂತ ಮತ್ಸೇಂದ್ರ ಗೋಸ್ವಾಮಿಯವರು ಮನವಿ ಮಾಡಿದ ನಂತರ ಈ ಚಿತ್ರವನ್ನು ತೆಗೆಸಲಾಗಿದೆ.

ಉಪವಾಸದಿಂದ ಹದಗೆಟ್ಟಿದ ಅವಿಮುಕ್ತೇಶ್ವರಾನಂದರ ಆರೋಗ್ಯ

ಜೂನ ೪ರಂದು ಜ್ಞಾನವ್ಯಾಪಿಯಲ್ಲಿ ದೊರೆತ ಶಿವಲಿಂಗವನ್ನು ಪೂಜಿಸಲು ಹೊರಟಿದ್ದ ದ್ವಾರಕಾ ಮತ್ತು ಜ್ಯೋತಿಶ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ವಿಶೇಷ ಪ್ರತಿನಿಧಿ ಸ್ವಾಮಿ ಅವಿಮುಕ್ತೆಶ್ವರಾನಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಗುರುಗ್ರಾಮದಲ್ಲಿ ಪ್ರೀತಿಯ ಬಲೆಯಲ್ಲಿ ಆಶಾ ಎಂಬವಳನ್ನು ಎಳೆದುಕೊಂಡು ಅವಳ ಮೇಲೆ ಗುಂಡು ಹಾರಿಸಿದ ಇಮ್ರಾನ !

ಇಲ್ಲಿ ಇಮ್ರಾನ ಹೆಸರಿನ ಒಬ್ಬ ಮುಸ್ಲಿಂ ಯುವಕನು ಆಶಾ ಹೆಸರಿನ ಹಿಂದೂ ಪ್ರೇಯಸಿಯ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ದಾಳಿಯಲ್ಲಿ ಆಶಾ ಗಾಯಗೊಂಡಿದ್ದಾಳೆ. ಇಮ್ರಾನ ಈಗಾಗಲೇ ಮದುವೆಯಾಗಿರುವುದಾಗಿ ಆಶಾಗೆ ಗೊತ್ತಾಗಿದೆ ಎಂಬುದೇ ದಾಳಿಗೆ ಕಾರಣ ಎನ್ನಲಾಗಿದೆ.

ಅಯೋಧ್ಯೆಯಲ್ಲಿನ ದಾಕ್ಷಿಣಾತ್ಯ ಶೈಲಿಯ ಮೊದಲನೇ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಗೆ ಯೋಗಿ ಆದಿತ್ಯನಾಥರ ಉಪಸ್ಥಿತಿ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಲ್ಲಿ ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ರಾಮಲಲಾ ಸದನ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಯಲ್ಲಿ ಉಪಸ್ಥಿತರಿದ್ದರು.

ಅಯೋಧ್ಯೆಯ ಶ್ರೀರಾಮಮಂದಿರ ಪರಿಸರದಲ್ಲಿ ಮದ್ಯ ಮಾರಾಟ ನಿಷೇಧ!

ಉತ್ತರಪ್ರದೇಶ ಸರಕಾರದ ಸ್ತುತ್ಯ ನಿರ್ಧಾರ! ಕೆವಲ ಶ್ರೀರಾಮ ಮಂದಿರವಲ್ಲದೇ ಪ್ರತಿ ದೇವಾಲಯದ ಸುತ್ತಮುತ್ತಲೂ ಮದ್ಯ ಮಾರಾಟವನ್ನು ನಿಷೇಧಿಸಬೇಕು. ಇಡೀ ದೇಶದಲ್ಲಿ ಇಂತಹ ನಿಯಮವನ್ನು ಜಾರಿಗೊಳಿಸಬೇಕು!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕೈಯಿಂದ ಶ್ರೀರಾಮಮಂದಿರದ ಗರ್ಭಗುಡಿಯ ಭೂಮಿಪೂಜೆ

ಶ್ರೀರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ಭವ್ಯವಾದ ಶ್ರೀರಾಮಮಂದಿರದ ಗರ್ಭಗೃಹದ ಭೂಮಿಪೂಜೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರ ಹಸ್ತದಿಂದ ಜೂನ ೧ರ ಬೆಳಿಗ್ಗೆ ನಡೆಸಲಾಯಿತು.

ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಗೊಳಿಸುವ ೩ ಕ್ರೈಸ್ತರ ಬಂಧನ

ಕೇಂದ್ರ ಸರಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ ಅದರಲ್ಲಿ ಕಠಿಣ ಶಿಕ್ಷೆ ವಿಧಿಸಿದರೆ ಕ್ರೈಸ್ತರ ಮತಾಂತರದ ಷಡ್ಯಂತ್ರಕ್ಕೆ ಧಕ್ಕೆ ಒದಗುವುದು.

ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ರಚನೆಗಾಗಿ ಸಮಿತಿಯ ಸ್ಥಾಪನೆ

ಉತ್ತರಾಖಂಡ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಪುಷ್ಕರಸಿಂಗ ಧಾಮಿ ಭರವಸೆ ನೀಡಿದ್ದರು.

ಜ್ಞಾನವಾಪಿ ಮಸೀದಿಯ ಚಿತ್ರೀಕರಣವನ್ನು ಸಾರ್ವಜನಿಕಗೊಳಿಸಲು ನಿರ್ಬಂಧ ಹೇರಬೇಕು ! – ಮುಸಲ್ಮಾನ ಪಕ್ಷದಿಂದ ನ್ಯಾಯಾಲಯದಲ್ಲಿ ಮನವಿ

ಚಿತ್ರೀಕರಣವು ಸಾರ್ವಜನಿಕವಾದರೆ ಸಂಪೂರ್ಣ ಜಗತ್ತಿಗೆ ಜ್ಞಾನವಾಪಿಯು ಮಸೀದಿಯಾಗಿರದೇ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನವಾಗಿತ್ತು ಎಂಬುದು ತಿಳಿಯುತ್ತದೆ. ಆದುದರಿಂದಲೇ ಮುಸಲ್ಮಾನ ಪಕ್ಷವು ಇದನ್ನು ವಿರೋಧಿಸುತ್ತಿದೆ, ಎಂಬುದನ್ನು ಗಮನದಲ್ಲಿಡಿ !