ಉಪವಾಸದಿಂದ ಹದಗೆಟ್ಟಿದ ಅವಿಮುಕ್ತೇಶ್ವರಾನಂದರ ಆರೋಗ್ಯ

ಜ್ಞಾನವ್ಯಾಪಿಯಲ್ಲಿ ಪೂಜೆಗೆ ಅವಕಾಶ ನಿರಾಕರಣೆಯ ಪ್ರಕರಣ

ವಾರಣಾಸಿ (ಉತ್ತರಪ್ರದೇಶ) – ಜೂನ ೪ರಂದು ಜ್ಞಾನವ್ಯಾಪಿಯಲ್ಲಿ ದೊರೆತ ಶಿವಲಿಂಗವನ್ನು ಪೂಜಿಸಲು ಹೊರಟಿದ್ದ ದ್ವಾರಕಾ ಮತ್ತು ಜ್ಯೋತಿಶ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ವಿಶೇಷ ಪ್ರತಿನಿಧಿ ಸ್ವಾಮಿ ಅವಿಮುಕ್ತೆಶ್ವರಾನಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ ೫ರಂದು ಆಹಾರ ಮತ್ತು ನೀರನ್ನು ತ್ಯಜಿಸಿದ್ದರಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದು ಹೇಳಲಾಗಿದೆ. ಸ್ವಾಮಿ ಅವಿಮುಕ್ತೆಶ್ವರಾನಂದ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರ ದೇಹದ ಸಕ್ಕರೆ ಪ್ರಮಾಣ ೪೪ ಕ್ಕೆ ಇಳಿದಿದೆ ಎಂದು ಅವರ ಅನುಯಾಯಿಗಳು ತಿಳಿಸಿದ್ದಾರೆ. ಅವರು ಮೌನವನ್ನೂ ವಹಿಸಿದ್ದಾರೆ.

ಸ್ವಾಮಿ ಅವಿಮುಕ್ತೆಶ್ವರಾನಂದರ ಶಿಷ್ಯೆ ಸಾಧ್ವಿ ಪೂರ್ಣಾಂಬಾ ಮಾತನಾಡಿ ‘ಸ್ವಯಂ ಪೂಜೆಗೆ ಹೋಗುವುದು ಸ್ವಾಮಿಯ ಉದ್ದೇಶವಲ್ಲ, ಯಾರಾದರೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಮುಂದಾಗಬೇಕು ಎಂಬುದು ಅವರ ಇಚ್ಛೆಯಾಗಿದೆ. ಶಿವಲಿಂಗದ ಪೂಜೆ ಮಾಡಬೇಕು ಮತ್ತು ಅದರ ಮಾಹಿತಿ ಸ್ವಾಮಿಯವರಿಗೆ ಕೊಡಬೇಕು. ಎಲ್ಲಿಯವರೆಗೆ ಪೂಜೆ ನಡೆಯುವದಿಲ್ಲವೋ ಅಲ್ಲಿಯವರೆಗೆ ಅವರು ಉಪವಾಸವನ್ನು ನಿಲ್ಲಿಸುವದಿಲ್ಲ’ ಎಂದು ತಿಳಿಸಿದರು.