ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕೈಯಿಂದ ಶ್ರೀರಾಮಮಂದಿರದ ಗರ್ಭಗುಡಿಯ ಭೂಮಿಪೂಜೆ

ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರ ಹಸ್ತದಿಂದ ಶ್ರೀರಾಮಮಂದಿರದ ಗರ್ಭಗೃಹದ ಭೂಮಿಪೂಜೆ

ಅಯೋಧ್ಯಾ (ಉತ್ತರಪ್ರದೇಶ) – ಇಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ಭವ್ಯವಾದ ಶ್ರೀರಾಮಮಂದಿರದ ಗರ್ಭಗೃಹದ ಭೂಮಿಪೂಜೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರ ಹಸ್ತದಿಂದ ಜೂನ ೧ರ ಬೆಳಿಗ್ಗೆ ನಡೆಸಲಾಯಿತು. ಈ ಸಮಯದಲ್ಲಿ ಸ್ವಾಮಿ ಪರಮಾನಂದರೊಂದಿಗೆ ಶ್ರೀರಾಮಮಂದಿರ ಆಂದೋಲನಕ್ಕೆ ಸಂಬಂಧಿಸಿದ ೧೦೦ಕ್ಕೂ ಹೆಚ್ಚಿನ ಸಂತರು ಉಪಸ್ಥಿತರಿದ್ದರು. ಈ ಭೂಮಿಪೂಜೆಯೊಂದಿಗೆ ದೇವಸ್ಥಾನದ ಕಟ್ಟಡ ಕಾಮಗಾರಿಯ ಎರಡನೇ ಹಂತವು ಆರಂಭವಾಗಿದೆ. ಮೊದಲನೇ ಹಂತದಲ್ಲಿ ದೇವಸ್ಥಾನದ ಕಟ್ಟೆಯ ಕಾಮಗಾರಿಯನ್ನು ನಡೆಸಲಾಗಿದೆ. ಈ ಗರ್ಭಗುಡಿಯ ಕಾಮಗಾರಿಯು ಡಿಸೆಂಬರ್‌ ೨೦೨೩ರ ವರೆಗೆ ಪೂರ್ಣವಾಗಲಿದೆ, ಎಂದು ಹೇಳಲಾಗುತ್ತಿದೆ. ಹಾಗೆಯೇ ೨೦೨೪ರ ಮಕರಸಂಕ್ರಾಂತಿಯಂದು ಈ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮರ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯುವುದು ಎಂದು ಅಂದಾಜಿಸಲಾಗಿದೆ.

ಭಗವಾನ ವಾಲ್ಮೀಕಿ, ಮಾತಾ ಶಬರಿ ಹಾಗೂ ಜಟಾಯು ಇವರ ದೇವಸ್ಥಾನಗಳನ್ನೂ ಕಟ್ಟಲಾಗುವುದು

ಶ್ರೀರಾಮಮಂದಿರದೊಂದಿಗೆ ಈ ಪರಿಸರದಲ್ಲಿ ಭಗವಾನ ವಾಲ್ಮಿಕಿ, ಶಬರಿ ಮಾತೆ, ಜಟಾಯು, ಸೀತಾ ಮಾತೆ, ವಿಘ್ನೇಶ್ವರ (ಗಣೇಶ) ಹಾಗೂ ಶೇಷಾವತಾರ (ಲಕ್ಷ್ಮಣ) ಇವರ ದೇವಸ್ಥಾನಗಳನ್ನು ಕಟ್ಟುವ ಯೋಜನೆಯೂ ಇದೆ. ಈ ಕಟ್ಟಡ ಕಾಮಗಾರಿಯು ಒಟ್ಟೂ ೭೦ ಎಕರೆ ಪರಿಸರದಲ್ಲಿ ಹಾಗೂ ಉದ್ಯಾನದ ಹೊರಗಿರುವ ದೇವಸ್ಥಾನದ ಪರಿಸರದಲ್ಲಿ ಮಾಡಲಾಗುವುದು.