ಗುರುಗ್ರಾಮದಲ್ಲಿ ಪ್ರೀತಿಯ ಬಲೆಯಲ್ಲಿ ಆಶಾ ಎಂಬವಳನ್ನು ಎಳೆದುಕೊಂಡು ಅವಳ ಮೇಲೆ ಗುಂಡು ಹಾರಿಸಿದ ಇಮ್ರಾನ !

ಇಮ್ರಾನ ವಿವಾಹಿತನೆಂದು ಆಶಾಳಿಗೆ ತಿಳಿದಾಗ ದಾಳಿ ಮಾಡಿದನು !

ಬದಾಯೂಂ (ಉತ್ತರಪ್ರದೇಶ) : ಇಲ್ಲಿ ಇಮ್ರಾನ ಹೆಸರಿನ ಒಬ್ಬ ಮುಸ್ಲಿಂ ಯುವಕನು ಆಶಾ ಹೆಸರಿನ ಹಿಂದೂ ಪ್ರೇಯಸಿಯ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ದಾಳಿಯಲ್ಲಿ ಆಶಾ ಗಾಯಗೊಂಡಿದ್ದಾಳೆ. ಇಮ್ರಾನ ಈಗಾಗಲೇ ಮದುವೆಯಾಗಿರುವುದಾಗಿ ಆಶಾಗೆ ಗೊತ್ತಾಗಿದೆ ಎಂಬುದೇ ದಾಳಿಗೆ ಕಾರಣ ಎನ್ನಲಾಗಿದೆ. ದಾಳಿಯಲ್ಲಿ ಇಮ್ರಾನ ಸ್ನೇಹಿತ ಜೀಶಾನ ಕೂಡಾ ಭಾಗಿಯಾಗಿದ್ದ. ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ಪೀಡಿತೆ ಅಮೇಠಿ ಜಿಲ್ಲೆಯವಳು. ಅವಳು ತನ್ನ ಕುಟುಂಬದೊಂದಿಗೆ ಹರಿಯಾಣಾದ ಗುರುಗ್ರಾಮದಲ್ಲಿ ವಾಸಿಸುತ್ತಾಳೆ. ಮನೆ-ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಜೇವನ ನಡೆಸುತ್ತಾಳೆ. ಇಮ್ರಾನ ಗುರುಗ್ರಾಮದಲ್ಲಿ ಕೇಶ ವಿನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರೂ ಒಮ್ಮೆ ಭೇಟಿಯಾದರು. ನಂತರ ಇಮ್ರಾನ ಆಶಾಳನ್ನು ಪ್ರೇಮ ಬಲೆಯಲ್ಲಿ ಎಳೆದ. ಅಂತಿಮವಾಗಿ ಅವಳು ತನ್ನನ್ನು ಮದುವೆಯಾಗುವಂತೆ ಇಮ್ರಾನಗೆ ಒತ್ತಾಯಿಸಲು ಪ್ರಾರಂಭಿಸಿದಳು. ಆದಾಗ್ಯೂ ಇಮ್ರಾನ ತಪ್ಪಿಸಿಕೊಳ್ಳುವುದನ್ನು ಮುಂದುವರೆಸಿದನು. ನಂತರ ಅವನಿಗೆ ಮದುವೆಯಾಗಿರುವುದು ಆಶಾಳಿಗೆ ಗೊತ್ತಾಯಿತು. ಒಂದು ದಿನ ಇಮ್ರಾನ ಅವಳಿಗೆ ಬದಾಯೂಂಗೆ ಕರೆತಂದನು. ಅಲ್ಲಿ ಸ್ನೇಹಿತ ಜೀಶಾನನ ಸಹಾಯದಿಂದ ಆಕೆಯನ್ನು ಥಳಿಸಿದ್ದಾನೆ. ಘಟನೆ ಸ್ಥಳದಿಂದ ಓಡಿಹೋಗುವಾಗ ಅವನು ಅವಳ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಆಕೆ ಗಾಯಗೊಂಡಳು ಆದರೂ ಆ ಸ್ಥಿತಿಯಲ್ಲೂ ಆಕೆ ಓಡುತ್ತಲೇ ಇದ್ದಳು. ಸ್ವಲ್ಪ ದೂರದಲ್ಲಿರುವ ದೇವಸ್ಥಾನವನ್ನು ತಲುಪಿದ ಆಕೆ ಪ್ರಜ್ಞೆ ತಪ್ಪಿ ಬಿದ್ದಳು. ಸ್ಥಳಿಯರ ನೆರವಿನಿಂದ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಪೊಲೀಸರು ಇಬ್ಬರನ್ನೂ ಬಂಧಿಸಿ ಆಶಾಳನ್ನು ಅವಳ ಮನೆಗೆ ಕರೆದೊಯ್ದಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯರೇ ‘ಲವ ಜಿಹಾದ’ ಬಗ್ಗೆ ಎಚ್ಚರ! ಮುಸಲ್ಮಾನರ ಇಂತಹ ಷಡ್ಯಂತ್ರಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವದಕ್ಕಾಗಿ ಧರ್ಮಶಿಕ್ಷಣವನ್ನು ಪಡೆದು ಸಾಧನೆ ಮಾಡಿ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ, ಜೊತೆಗೆ ಆತ್ಮ ರಕ್ಷಣೆಗಾಗಿ ತರಬೇತಿಯನ್ನು ಪಡೆದುಕೊಳ್ಳಿ !