ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಗೊಳಿಸುವ ೩ ಕ್ರೈಸ್ತರ ಬಂಧನ

ಲಕ್ಷ್ಮಣಪುರಿ (ಉತ್ತರಪ್ರದೇಶ)– ಕ್ರೈಸ್ತ ಮಿಷನರಿಗಳಿಂದ ಹಿಂದೂಗಳ ಮತಾಂತರದ ಪ್ರಕರಣದಲ್ಲಿ ಉತ್ತರಪ್ರದೇಶದ ಸಹಾರನಪುರ ಮತ್ತು ಆಜಂಗಢ ಜಿಲ್ಲೆಗಳಲ್ಲಿ ಒಟ್ಟು ೩ ಜನರನ್ನು ಬಂಧಿಸಲಾಗಿದೆ.

೧. ಆಜಂಗಢದ ಕಂಧರಾಪುರದಲ್ಲಿ ಮೊಹರಿಲ ಎಂಬ ವ್ಯಕ್ತಿ ಮೈಮೇಲೆ ಬಂದ ದುಷ್ಟಶಕ್ತಿಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಜನರನ್ನು ಕೂಡಿಸುತ್ತಿದ್ದ. ಆ ಮೂಲಕ ಬಡ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ. ಇದುವರೆಗೆ ೧೧೦ ಕ್ಕೂ ಹೆಚ್ಚು ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ಈ ವಿಷಯದಲ್ಲಿ ಹಿಂದೂ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

(ಸೌಜನ್ಯ : UK INDIA NEWS)

೨. ಅಜಯ ಮತ್ತು ಅನಿಲ ಅವರನ್ನು ಸಹಾರನಪುರದ ಬೆಹಟ ಗ್ರಾಮದಲ್ಲಿ ಬಂಧಿಸಲಾಗಿದೆ. ಇಬ್ಬರೂ ಮತಾಂತರಗೊಂಡಿದ್ದಾರೆ ಮತ್ತು ಅವರು ಇತರ ಹಿಂದೂಗಳಿಗೆ ಮತಾಂತರಗೊಳ್ಳುವಂತೆ ಆಮೀಷ ಒಡ್ಡುತ್ತಿದ್ದರು. ಪೊಲೀಸರು ಇನ್ನೂ ಕೆಲವರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

* ಕೇಂದ್ರ ಸರಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ ಅದರಲ್ಲಿ ಕಠಿಣ ಶಿಕ್ಷೆ ವಿಧಿಸಿದರೆ ಕ್ರೈಸ್ತರ ಮತಾಂತರದ ಷಡ್ಯಂತ್ರಕ್ಕೆ ಧಕ್ಕೆ ಒದಗುವುದು.