ಹಿಂದಿನ ಕಾಲದಲ್ಲಿ ಜನರು ಕುಡಿಯುವ ನೀರನ್ನು ಸಂಗ್ರಹಿಸಲು ಲೋಹದ ಪಾತ್ರೆಗಳನ್ನು ಬಳಸುತ್ತಿದ್ದರು. ಅವುಗಳಲ್ಲಿ ಮುಖ್ಯವಾಗಿ ತಾಮ್ರದ ಪಾತ್ರೆಗಳಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು; ಏಕೆಂದರೆ ತಾಮ್ರದಲ್ಲಿ ‘ಆಂಟಿಮೈಕ್ರೊಬಿಯಲ್’ (ಸೂಕ್ಷ್ಮ ಜೀವಿನಾಶಕ), ‘ಆಂಟಿ ಆಕ್ಸಿಡಂಟ್’, ‘ಆಂಟಿ-ಕಾರ್ಸಿನೋಜೆನಿಕ್’ (ಅರ್ಬುದ ರೋಗ ನಿರೋಧಕ) ಇವುಗಳಂತಹ ಅನೇಕ ಆವಶ್ಯಕ ಖನಿಜಗಳಿರುತ್ತವೆ. ಅವುಗಳು ಆರೋಗ್ಯಕ್ಕಾಗಿ ಅತ್ಯಂತ ಲಾಭದಾಯಕವಾಗಿರುತ್ತವೆ. ಆದುದರಿಂದಲೇ ಆಯುರ್ವೇದ ಮತ್ತು ವಿಜ್ಞಾನವೂ ತಾಮ್ರದ ಪಾತ್ರೆಗಳಲ್ಲಿನ ನೀರು ಮನುಷ್ಯನ ಆರೋಗ್ಯಕ್ಕಾಗಿ ಲಾಭದಾಯಕವೆಂದು ನಂಬುತ್ತದೆ.
೧. ಜೀರ್ಣಾಂಗವ್ಯೂಹ
ತಾಮ್ರವು ಹೊಟ್ಟೆ, ಯಕೃತ್ ಮತ್ತು ಮೂತ್ರಪಿಂಡ ಇಂತಹ ಅವಯವಗಳ ‘ಡಿಟಾಕ್ಸಿಫಿಕೇಶನ್’ (ವಿಷವನ್ನು ತೆಗೆಯುವ ಪ್ರಕ್ರಿಯೆ) ಮಾಡುತ್ತದೆ. ಇವುಗಳಲ್ಲಿ ಕೆಲವು ಗುಣಧರ್ಮವು ಹೊಟ್ಟೆಗೆ ಹಾನಿ ಮಾಡುವ ‘ಬ್ಯಾಕ್ಟೀರಿಯಾ’ (ಜೀವಾಣು)ಗಳನ್ನು ನಾಶಪಡಿಸುತ್ತವೆ. ಆದುದರಿಂದ ಹೊಟ್ಟೆಯಲ್ಲಿ ಅಲ್ಸರ್ ಮತ್ತು ಇನ್ಫೆಕ್ಶನ್ (ಸೋಂಕುಗಳಾಗುವ) ಸಮಸ್ಯೆಗಳಾಗುವುದಿಲ್ಲ.
೨. ಗಾಯಗಳನ್ನು ಕೂಡಲೇ ಮಾಸಲು ಸಹಾಯ
ತಾಮ್ರದಲ್ಲಿ ‘ಆಂಟಿಬ್ಯಾಕ್ಟೇರಿಯಲ್’ (ಜೀವಾಣುನಿರೋಧಕ), ‘ಆಂಟಿವೈರಲ್’ (ವಿಷಾಣುನಿರೋಧಕ) ಮತ್ತು ‘ಆಂಟಿ ಇಂಫ್ಲೆಮೆಟರಿ’ (ವಿರೋಧಿದಾಹಕ) ಗುಣಧರ್ಮಗಳಿರುವುದರಿಂದ ಆ ಗಾಯವು ಬೇಗ ಮಾಸಲು ಸಹಾಯ ಮಾಡುತ್ತದೆ ಮತ್ತು ತಾಮ್ರವು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಹೊಸ ಜೀವಕೋಶಗಳ ರಚನೆಗೆ ಸಹಾಯ ಮಾಡುತ್ತದೆ.
೩. ದೀರ್ಘಕಾಲ ಯುವಕರಾಗಿ ಕಾಣಿಸುವುದು
ತಾಮ್ರದಲ್ಲಿರುವ ಆಂಟಿಆಕ್ಸಿಡಂಟ್ ಇದು ಮುಖದ ಮೇಲಿನ ಸಣ್ಣ ಗೆರೆಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅದು ಮುಕ್ತ ‘ರಾಡಿಕಲ್ಸ್’ದಿಂದ (ಲೋಹಸಂಬದ್ಧ) ಸಂರಕ್ಷಣೆ ಮಾಡಿ ಚರ್ಮದ ಮೇಲೆ ಒಂದು ಸಂರಕ್ಷಣಾತ್ಮಕ ಪದರನ್ನು ಸಿದ್ಧಗೊಳಿಸುತ್ತದೆ. ಆದುದರಿಂದ ನೀವು ದೀರ್ಘಕಾಲ ಯುವಕರಾಗಿ ಕಾಣಿಸುತ್ತೀರಿ.
೩. ಬ್ಯಾಕ್ಟೀರಿಯಾಗಳನ್ನು ಅತ್ಯಂತ ಪರಿಣಾಮಕಾರಿ ನಾಶಗೊಳಿಸುವ ಕ್ಷಮತೆ
ತಾಮ್ರದಲ್ಲಿ ‘ಆಲಿಗೊಡೈನಾಮಿಕ್’, ಅಂದರೆ ಬ್ಯಾಕ್ಟೀರಿಯಾದ ಮೇಲೆ ಲೋಹಗಳ ನಿರ್ಜಂತುಕರಣ ಮಾಡುವ ಸಾಮರ್ಥ್ಯವಿರುತ್ತದೆ. ನಿಸರ್ಗದಲ್ಲಿಯೇ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ನಾಶ ಮಾಡುವ ಕ್ಷಮತೆ ಇದೆ, ಹಾಗೆಯೇ ತಾಮ್ರದಲ್ಲಿ ವಿಶೇಷವಾಗಿ ನಮ್ಮ ವಾತಾವರಣದಲ್ಲಿ ಕಂಡುಬರುವ ಮತ್ತು ಮನುಷ್ಯನ ಶರೀರದಲ್ಲಿನ ಗಂಭೀರ ಕಾಯಿಲೆಗಳನ್ನು ಉಂಟುಮಾಡುವ E. coli ಮತ್ತು S. aureus ಈ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುವ ಸಾಮರ್ಥ್ಯವಿದೆ. ಜೀವಕೋಶಗಳ ನಿರ್ಮಿತಿಯಿಂದ ಹಿಡಿದು ನಿಃಶಕ್ತಿಯನ್ನು ದೂರಗೊಳಿಸಲು ತಾಮ್ರವು ಪರಿಣಾಮಕಾರಿ ಉಪಾಯವಾಗಿದೆ.
೪. ಕೀಲುನೋವಿನ ವೇದನೆ ಕಡಿಮೆ ಮಾಡುವುದು
ತಾಮ್ರದಲ್ಲಿರುವ ದಾಹಕವಿರೋಧಿ ಗುಣಧರ್ಮವು ನೋವು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಕೀಲುನೋವಿನ ತೊಂದರೆ ಇರುವವರು ತಾಮ್ರದ ಪಾತ್ರೆಯಲ್ಲಿನ ನೀರನ್ನು ಅವಶ್ಯವಾಗಿ ಕುಡಿಯಬೇಕು. ಈ ನೀರು ಬಲವಾದ ಮೂಳೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಕಾಪಾಡುವ ಕೆಲಸ ಮಾಡುತ್ತದೆ.
೬. ಬೊಜ್ಜು (ಸ್ಥೂಲತೆ) ಕಡಿಮೆ ಮಾಡುವುದು
ಕಡಿಮೆ ಅವಧಿಯಲ್ಲಿ ತೂಕವನ್ನು ಕಡಿಮೆ ಮಾಡುವ ವಿಚಾರ ಮಾಡುವವರು ತಾಮ್ರದ ಪಾತ್ರೆಯಲ್ಲಿಟ್ಟಿರುವ ನೀರನ್ನು ಪ್ರತಿದಿನ ಕುಡಿಯಬೇಕು. ತಾಮ್ರದಲ್ಲಿನ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಶರೀರದಲ್ಲಿನ ಬೇಡವಾದ ಕೊಬ್ಬು ತೆಗೆದು ಹಾಕಲು ಸಹಾಯ ಮಾಡುತ್ತದೆ.
೭. ಸ್ಮರಣಶಕ್ತಿ ಉತ್ತಮವಾಗುವುದು
ತಾಮ್ರದ ನೀರು ಮೆದುಳನ್ನು ಉತ್ತೇಜಿಸಲು ಮತ್ತು ಸಕ್ರಿಯವಾಗಿಡಲು ತುಂಬಾ ಉಪಯುಕ್ತವಾಗಿದೆ. ಅದರಿಂದ ಸ್ಮರಣಶಕ್ತಿ ಒಳ್ಳೆಯದಾಗಿ ಮತ್ತು ತೀಕ್ಷ್ಣವಾಗುತ್ತದೆ. ಕೇವಲ ಆಯುರ್ವೇದವೇ ಅಲ್ಲ, ವಿಜ್ಞಾನವೂ ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ನೀರು ಕುಡಿಯುವುದು ಲಾಭದಾಯಕವೆಂದು ಹೇಳಿದೆ; ಆದರೆ ತಾಮ್ರದ ಪಾತ್ರೆಯಲ್ಲಿ ಕನಿಷ್ಟ ೮ ಗಂಟೆ ಇಟ್ಟಾಗ ಮಾತ್ರ ಈ ನೀರಿನ ಪೂರ್ಣ ಲಾಭವಾಗುತ್ತದೆ. ಕೆಲವರು ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಬೆಳಗ್ಗೆ ಕುಡಿಯುತ್ತಾರೆ.
– ಮುಕುಂದ ಬಾವಿಸ್ಕರ (ಆಧಾರ : ‘ಇಂಡಿಯಾ ದರ್ಪಣ’ ಸುದ್ದಿಜಾಲತಾಣ)