ಬೇಸಿಗೆಯಲ್ಲಿ ಬೆವರು ಮತ್ತು ಮಳೆಗಾಲದಲ್ಲಿ ನೀರು ಇವುಗಳಿಂದಾಗುವ ಚರ್ಮರೋಗಗಳು, ಅವುಗಳ ಹಿಂದಿನ ಕಾರಣಗಳು ಮತ್ತು ಉಪಾಯ

ಶ್ರೀ ಗಿರಿಧರ ವಝೆ

ಚರ್ಮಕ್ಕೆ ಒಂದು ರೀತಿಯ ಮುಗ್ಗಲು ಬರುವುದರಿಂದ ಆಗುವ ಚರ್ಮರೋಗಗಳು

‘ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ಅನೇಕ ಜನರಿಗೆ ಅಥವಾ ಸ್ಥೂಲಕಾಯ ಮತ್ತು ಉಷ್ಣ ಪ್ರಕೃತಿ ಇರುವ ವ್ಯಕ್ತಿಗಳಿಗೆ ಇತರ ಸಮಯದಲ್ಲಿಯೂ ‘ತುರಿಕೆ, ಚರ್ಮ ಕೆಂಪಾಗುವುದು, ಚರ್ಮ ಸುಲಿಯುವುದು’ ಇತ್ಯಾದಿ ಶಾರೀರಿಕ ತೊಂದರೆಗಳಾಗುತ್ತವೆ. ಮಳೆಗಾಲದಲ್ಲಿ ಎರಡು ಬೆರಳುಗಳ ಮಧ್ಯದಲ್ಲಿನ ಚರ್ಮವು ಹೆಚ್ಚು ಸಮಯ ನೀರಿನ ಸಂಪರ್ಕಕ್ಕೆ ಬಂದರೆ, ಆಗಲೂ ಮೇಲೆ ಹೇಳಿದ ಚರ್ಮ ರೋಗಗಳು ಆಗುತ್ತವೆ. ಇಂತಹ ಸಮಯದಲ್ಲಿ ಅನೇಕ ದುಬಾರಿ ಮುಲಾಮುಗಳನ್ನುಉಪಯೋಗಿಸುತ್ತಾರೆ. ಅದರೂ ಮುಗ್ಗಲು ಬರುವ ಮೂಲ ಕಾರಣಕ್ಕೆ ಚಿಕಿತ್ಸೆ ಮಾಡದಿರುವುದರಿಂದ ಕೆಲವು ದಿನಗಳ ಅಂತರದಲ್ಲಿಈ ತೊಂದರೆಗಳು ಮೇಲಿಂದ ಮೇಲೆ ಬರುತ್ತವೆ.

ಚರ್ಮಕ್ಕೆ ಮುಗ್ಗಲು ಬರುವುದರ ಕಾರಣಗಳು

ಚರ್ಮ ಘರ್ಷಣೆಯಾಗುವ ಭಾಗದ (ಉದಾ. ಕಂಕುಳಲ್ಲಿ) ಚರ್ಮದ ಮೇಲೆ ಬೆವರು ಮತ್ತು ನೀರು ಬಹಳಷ್ಟು ಸಮಯ ಉಳಿದರೆ ಅಲ್ಲಿ ಒಂದು ರೀತಿಯ ಮುಗ್ಗಲು (ಫಂಗಲ್ ಇನ್ಫೆಕ್ಷಂನ್) ಬರುತ್ತದೆ.

ಕೆಲವು ಮನೆಮದ್ದುಗಳು

ಅ. ಬೆಳಗ್ಗೆ ಸ್ನಾನದ ನಂತರ ಘರ್ಷಣೆಯಾಗುವ ಚರ್ಮದ ಭಾಗಗಳನ್ನು ಒಣಗಿದ ನೂಲಿನ (ಹತ್ತಿಯ) ಬಟ್ಟೆಯಿಂದ (ಪಂಚೆಯಿಂದ) ಸರಿಯಾಗಿ ಒರೆಸಿಕೊಳ್ಳಬೇಕು.

ಆ. ಅಂಗೈಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಚರ್ಮದ ಘರ್ಷಣೆಯಾಗುವ ಭಾಗಗಳಿಗೆ ಹಚ್ಚಬೇಕು.

ಇ. ಮುಗ್ಗಲು ಬರುವ ಪ್ರಮಾಣವು ಹೆಚ್ಚಿದ್ದರೆ, ಮೇಲಿನ ಕೃತಿಯನ್ನು ರಾತ್ರಿ ಮಲಗುವ ಮೊದಲೂ ಮಾಡಬೇಕು.

ಈ. ಮುಗ್ಗಲು ಬರುವ ಪ್ರಮಾಣವು ಹೆಚ್ಚಿದ್ದರೆ, ಕೊಬ್ಬರಿ ಎಣ್ಣೆಯ ಹೊರತು ದೇಶಿ ಆಕಳಿನ ತುಪ್ಪವನ್ನು ಬಳಸಬಹುದು. ದೇಶಿ ಆಕಳಿನ ತುಪ್ಪವು ಎಲ್ಲಕ್ಕಿಂತ ಹೆಚ್ಚು ಗುಣಕಾರಿಯಾಗಿದೆ.

ಯಾವಾಗಲೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಅ. ಮೇಲೆ ಹೇಳಿದ ಚರ್ಮರೋಗಗಳು ಬರುವ ವ್ಯಕ್ತಿಗಳು ಮೇಲಿಂದ ಮೇಲೆ ಚರ್ಮವನ್ನು ಒಣ ಬಟ್ಟೆಯಿಂದ ಒರೆಸಿ ಒಣಗಿಸಿಯೇ ಇಡಬೇಕು. ಅದಕ್ಕಾಗಿ ಯಾವಾಗಲೂ ಒಣಗಿದ (ಕನಿಷ್ಠ ಪಕ್ಷ ಬೇಸಿಗೆಯಲ್ಲಾದರು) ಪಾಯಜಾಮ, ಧೋತರ, ಇತ್ಯಾದಿ ನೂಲಿನ ಬಟ್ಟೆಗಳನ್ನು ಬಳಸಬೇಕು. ಇದರಿಂದ ಗಾಳಿಯು ಚರ್ಮದವರೆಗೆ ಸಹಜವಾಗಿ ಹೊಗುತ್ತದೆ ಮತ್ತು ನೂಲಿನ ಬಟ್ಟೆಗಳು ಬೆವರನ್ನು ತಕ್ಷಣ ಹೀರಿಕೊಳ್ಳುತ್ತವೆ.

ಆ. ತೇವವಿರುವ ಮತ್ತು ಹಸಿ ಬಟ್ಟೆಗಳನ್ನು ಉಪಯೋಗಿಸಲೇಬಾರದು.

ಇ. ಮಳೆಗಾಲದಲ್ಲಿ ಹೊಲದಲ್ಲಿ ಅಥವಾ ಇತರೆಡೆ ಹೆಚ್ಚು ಸಮಯ ನೀರಿನ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಬೆಳಗ್ಗೆ ಎದ್ದನಂತರ ಚರ್ಮರೋಗವಾಗುವ ಭಾಗಗಳಿಗೆ (ಬೆರಳುಗಳ ಮಧ್ಯದಲ್ಲಿನ ಚರ್ಮಕ್ಕೆ) ನೀರಿನ ಸಂಪರ್ಕ ಬರುವ ಮೊದಲು ಸಾಧ್ಯವಾದರೆ ಕಾಲುದೀಪದ ಅಡಿಯಲ್ಲಿ ಸಂಗ್ರಹವಾಗಿರುವ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಚ್ಚಬೇಕು.

‘ರಾಮನಾಥಿ ಆಶ್ರಮದಲ್ಲಿನ ಕೆಲವು ಸಾಧಕರು ಮೇಲೆ ಹೇಳಿದ ಉಪಾಯವನ್ನು ಮಾಡಲು ಪ್ರಾರಂಭಿಸಿದ ನಂತರ ಅವರ ಚರ್ಮ ರೋಗದ ತೊಂದರೆಗಳು ದೂರವಾದವು.’

– ಶ್ರೀ. ಗಿರಿಧರ ಭಾರ್ಗವ ವಝೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೫.೨೦೨೨)