ಪಲವಲ (ಹರಿಯಾಣ)ದಲ್ಲಿ ಹಿಂದೂ ಯುವಕರ ಮೇಲೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ !

ಇಲ್ಲಿ ಅಂಜುಮ್ ಎಂಬ ಮುಸ್ಲಿಂ ಯುವಕ ವಿಕಿ ಭಾರದ್ವಾಜ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ವಿಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಜೂನ್ ೨೮ ರಂದು ಈ ಘಟನೆ ನಡೆದಿದೆ. ದಾಳಿಯಲ್ಲಿ ಅಂಜುಮ್ ಹಾಗೂ ಇತರೆ ೫ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಹರಿಯಾಣದ ಚ್ಯವನ ಋಷಿಯ ಧಾರ್ಮಿಕ ಸ್ಥಳದಿಂದ ಭಗವಾನ್ ವಿಷ್ಣುವಿನ ಅಷ್ಟ ಧಾತುವಿನ ಮೂರ್ತಿ ಕಳವು !

ರಾಜ್ಯದ ನಾರನೌಲದ ಧೋಸಿ ಧಾಮ ಎಂಬ ಐತಿಹಾಸಿಕ ಧಾರ್ಮಿಕ ಸ್ಥಳದಿಂದ ಭಗವಾನ ಶ್ರೀ ವಿಷ್ಣುವಿನ ಸುಮಾರು ೩೦ ಕೇಜಿ ತೂಕದ ಅಷ್ಟ ಧಾತುವಿನ ಮೂರ್ತಿ ಕಳುವಾಗಿದೆ. ಇದರ ಜೊತೆಗೆ ಹಿತ್ತಾಳೆಯ ಲಡ್ಡು ಗೋಪಾಲ ಮತ್ತು ವಿಷ್ಣುವಿನ ಇನ್ನೊಂದು ಮೂರ್ತಿ ಕಳುವಾಗಿದೆ.

ಕರ್ನಾಲ (ಹರಿಯಾಣಾ)ದಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳ ಗೊಡೆಗಳ ಮೇಲೆ ‘ಖಲಿಸ್ತಾನ ಜಿಂದಾಬಾದ’ ದ ಘೋಷಣೆಯ ಬರಹ !

‘ಖಲಿಸ್ತಾನ ಜಿಂದಾಬಾದ’ ಎಂದು ಹೇಳುವವರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿಯ ಸಿಖ್ಖರ ಸಂಕಷ್ಟದ ಬಗ್ಗೆ ಮಾತ್ರ ಮೌನವಾಗಿದ್ದಾರೆ !

ಕರ್ನಾಲ (ಹರಿಯಾಣ)ದಲ್ಲಿ ೪ ಖಲಿಸ್ತಾನಿ ಭಯೋತ್ಪಾದಕರನ್ನು ದೊಡ್ಡ ಶಸ್ತ್ರಸಂಗ್ರಹದೊಂದಿಗೆ ಬಂಧಿಸಲಾಯಿತು !

ರಾಜಧಾನಿ ದೆಹಲಿಯಲ್ಲಿ ಬಾಂಬ್‌ಸ್ಫೋಟಗಳನ್ನು ನಡೆಸುವ ದೊಡ್ಡ ಷಡ್ಯಂತ್ರವನ್ನು ಧ್ವಂಸಗೊಳಿಸಲಾಯಿತು. ಇಲ್ಲಿ ಕರ್ನಾಲ ಮತ್ತು ಪಂಜಾಬ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಗುರಪ್ರೀತ, ಅಮನದೀಪ, ಪರಮಿಂದರ ಮತ್ತು ಭೂಪಿಂದರ ಎಂಬ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಮ ಆದ್ಮಿ ಪಕ್ಷದ ಮಹಿಳಾ ನಾಯಕಿಗೆ ೭ ವರ್ಷಗಳ ಜೈಲು ಶಿಕ್ಷೆ

ಇಲ್ಲಿನ ನಗರ ವಸತಿ ಅಭಿವೃದ್ಧಿ ಪ್ರಾಧಿಕಾರದ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆಮ ಆದ್ಮಿ ಪಕ್ಷದ ನಾಯಕಿ ಮತ್ತು ಸ್ಥಳೀಯ ನಗರಾಧ್ಯಕ್ಷೆ ನಿಶಾ ಸಿಂಗ ಸೇರಿದಂತೆ ಒಟ್ಟು ೧೦ ಮಹಿಳೆಯರಿಗೆ ನ್ಯಾಯಾಲಯವು ೭ ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ೧೦೦೦೦ ರೂಪಾಯಿ ದಂಡ ವಿಧಿಸಲಾಗಿದೆ.

ಗುರುಗ್ರಾಮ್ (ಹರಿಯಾಣ)ದಲ್ಲಿ ೨೨ ಕಿಮೀ ಬೆನ್ನಟ್ಟಿದ ನಂತರ ಗೋಕಳ್ಳರ ಬಂಧನ

ಗೋರಕ್ಷಕರು ಮತ್ತು ಪೊಲೀಸರು ೨೨ ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ ಟ್ರಕ್‌ನಿಂದ ಅಕ್ರಮವಾಗಿ ಜಾವುವಾರುಗಳನ್ನು ಸಾಗಿಸುತ್ತಿದ್ದ ೬ ಗೋಕಳ್ಳರನ್ನು ಬಂಧಿಸಿದ್ದಾರೆ. ಬೆನ್ನಟ್ಟಿದ ಸಂದರ್ಭದಲ್ಲಿ ಗೋಕಳ್ಳರು ಚಲಿಸುತ್ತಿದ್ದ ಲಾರಿಯಿಂದ ೭ ಹಸುಗಳನ್ನು ಎಸೆದರು.

‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದ ಹರಿಯಾಣಾ ಸರಕಾರ !

ಹರಿಯಾಣಾ ಸರಕಾರವು ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ತೆರಿಗೆ ಮುಕ್ತ ಮಾಡಿದೆ. ಈ ಚಲನಚಿತ್ರವು ೧೯೮೯ರಲ್ಲಿ ಕಾಶ್ಮೀರದಲ್ಲಾದ ಹಿಂದೂಗಳ ಅಮಾನವಿಯವಾಗಿ ನರಮೇಧದ ನೈಜ ಚಿತ್ರಣವನ್ನು ಚಿತ್ರೀಕರಿಸಲಾಗಿದೆ.

ಹರಿಯಾಣಾದಲ್ಲಿಯ ಸೋನಿಪತ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕದ ಮೂವರು ಉಗ್ರರ ಬಂಧನ

ಪೋಲಿಸರು ಖಲಿಸ್ತಾನಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವವರನ್ನು ಬಂಧಿಸಿರುತ್ತಾರೆ. ಸಾಗರ್, ಸುನಿಲ್ ಮತ್ತು ಜತಿನ್ ಎಂದು ಅವರ ಹೆಸರುಗಳಾಗಿವೆ. ಈ ಮೂವರು ನಗರದಲ್ಲಿ ಕೊಲೆ ಮಾಡಿ ಸಮಾಜದಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸುವವರಿದ್ದರು.

ಅಂಬಾಲಾ (ಹರಿಯಾಣ) ಇಲ್ಲಿಯ ಕಾಡಿನಲ್ಲಿ ೨೩೨ ಬಾಂಬ್ ಪತ್ತೆ !

ಶಹಜಾದ್‌ಪುರದ ಕಾಡಿನಲ್ಲಿ ೨೩೨ ಬಾಂಬ್ ಸಿಕ್ಕಿವೆ. ಗ್ರಾಮಸ್ಥರಿಗೆ ಈ ಬಾಂಬ್ ಭೂಮಿಯಲ್ಲಿ ಹೂತಿಟ್ಟಿರುವುದು ಕಂಡುಬಂದಿದೆ. ಈ ಬಾಂಬ್ ತುಂಬಾ ಹಳೆಯದಾಗಿದ್ದು ಅದು ತುಕ್ಕು ಹಿಡಿದಿದೆ. ಪೊಲೀಸರಿಗೆ ಇದರ ಮಾಹಿತಿ ದೊರೆತ ನಂತರ ಅವರು ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆಸಿದರು ಹಾಗೂ ಆ ಸಂಪೂರ್ಣ ಪರಿಸರವನ್ನು ನಿರ್ಜನಗೊಳಿಸಿದರು.

ನೂಹ (ಹರಿಯಾಣ) ಇಲ್ಲಿಯ ಗೋಕಳ್ಳ ಸಾಗಾಟಗಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ದಾಳಿ

ಫಿರರೋಜಪೂರ್ ಜಿರಕಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಪರಿಸರದಲ್ಲಿ ಗೋ ಕಳ್ಳಸಾಗಾಣಿಕೆ ದಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ ನಡೆಸಲಾಯಿತು.