‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದ ಹರಿಯಾಣಾ ಸರಕಾರ !

ಮುಂಬಯಿನಲ್ಲಿ ಮುಸಲ್ಮಾನ ಬಹುಸಂಖ್ಯಾತ ಭಿವಂಡಿಯಲ್ಲಿ ಚಲನಚಿತ್ರದಲ್ಲಿ ಮತಾಂಧ ಪಾತ್ರದ ಸಂವಾದದ ಸಮಯದಲ್ಲಿ ಅವರ ಧ್ವನಿಯನ್ನು ನಿಲ್ಲಿಸುವ ಪ್ರಯತ್ನ !

ದೇಶದಲ್ಲಿ ಮುಸಲ್ಮಾನ ಬಹುಸಮಖ್ಯಾತ ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ, ಪೊಲೀಸರು ತಕ್ಷಣ ಅಂತಹವರ ಮೇಲೆ ಕಾರ್ಯಾಚರಣೆ ಮಾಡಿ ಅವರನ್ನು ಸೆರೆಮನೆಗೆ ಕಳುಹಿಸಬೇಕು !

ಚಂಡೀಗಡ – ಹರಿಯಾಣಾ ಸರಕಾರವು ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ತೆರಿಗೆ ಮುಕ್ತ ಮಾಡಿದೆ. ಈ ಚಲನಚಿತ್ರವು ೧೯೮೯ರಲ್ಲಿ ಕಾಶ್ಮೀರದಲ್ಲಾದ ಹಿಂದೂಗಳ ಅಮಾನವಿಯವಾಗಿ ನರಮೇಧದ ನೈಜ ಚಿತ್ರಣವನ್ನು ಚಿತ್ರೀಕರಿಸಲಾಗಿದೆ. ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವು ದೇಶದಾದ್ಯಂತ ೫೫೦ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಮೊದಲನೇಯ ದಿನದಂದು ಈ ಚಲನಚಿತ್ರವು ಎರಡುವರೆಯಿಂದ ೩ ಕೋಟಿ ರೂಪಾಯಿಗಳ ಆದಾಯ ಪಡೆದುಕೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಚಲನಚಿತ್ರಕ್ಕೆ ಜನರು ಅಪಾರವಾದ ಅಭಿಪ್ರಾಯ ನೀಡಿದ್ದಾರೆ.

೧. ಭಿವಂಡೀಯಲ್ಲಿ ‘ಪಿವ್ಹೀಆರ’ ಚಿತ್ರ ಮಂದಿರದಲ್ಲಿ ಈ ಚಲನಚಿತ್ರವನ್ನು ಪ್ರದರ್ಶಿಸುವಾಗ ಅದರಲ್ಲಿನ ಕೆಲವು ಪ್ರಸಂಗದ ಸಮಯದಲ್ಲಿ ಧ್ವನಿಯನ್ನು ನಿಲ್ಲಿಸಲು ಪ್ರಯತ್ನಿಸಲಾಯಿತು. ಅದರಲ್ಲಿ ಮತಾಂಧರ ಪಾತ್ರವಿರುವ ನಟನೆಯ ಧ್ವನಿಯನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಲಾಯಿತು. ಆದ್ದರಿಂದ ವೀಕ್ಷಕರು ಅದನ್ನು ವಿರೋಧಿಸಿದರು. ಭಿವಂಡೀ ಇದು ಮಹಾರಾಷ್ಟ್ರದಲ್ಲಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾಗಿದೆ.

೨. ಮೇಘಾಲಯದ ರಾಜಧಾನಿ ಶಿಲಾಂಗನಲ್ಲಿ ಒಂದು ಚಿತ್ರಮಂದಿರದಲ್ಲಿ ಚಲನಚಿತ್ರವನ್ನು ಪ್ರದರ್ಶಗೊಳ್ಳಲಿಲ್ಲ. ‘ಈ ಚಲನಚಿತ್ರದ ರೀಲ ಸಿಗದೆ ಇದ್ದದರಿಂದ ಅದನ್ನು ಪ್ರದರ್ಶಿಸಲಿಲ್ಲ’, ಎಂದು ಚಿತ್ರಮಂದಿರದ ನಿರ್ವಾಹಕರು ವೀಕ್ಷಕರಿಗೆ ಹೇಳಿದರು.