ಕರ್ನಾಲ (ಹರಿಯಾಣಾ)ದಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳ ಗೊಡೆಗಳ ಮೇಲೆ ‘ಖಲಿಸ್ತಾನ ಜಿಂದಾಬಾದ’ ದ ಘೋಷಣೆಯ ಬರಹ !

ಖಲಿಸ್ತಾನಿಗಳ ಚಟುವಟಿಕೆಗಳನ್ನು ಹತ್ತಿಕ್ಕಲು ಕೇಂದ್ರ ಸರಕಾರವು ಕಠಿಣ ಕ್ರಮ ತೆಗೆದುಕೊಳ್ಳುವದು ಆವಶ್ಯಕ !

‘ಖಲಿಸ್ತಾನ ಜಿಂದಾಬಾದ’ ಎಂದು ಹೇಳುವವರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿಯ ಸಿಖ್ಖರ ಸಂಕಷ್ಟದ ಬಗ್ಗೆ ಮಾತ್ರ ಮೌನವಾಗಿದ್ದಾರೆ !

ಕರ್ನಾಲ (ಹರಿಯಾಣಾ) – ಇಲ್ಲಿಯ ಡಿಎವಿ ಶಾಲೆ ಮತ್ತು ದಯಾಳ ಸಿಂಹ ಮಹಾವಿದ್ಯಾಲಯದ ಗೋಡೆಗಳ ಮೇಲೆ ‘ಖಲಿಸ್ತಾನ ಜಿಂದಾಬಾದ’ ಘೋಷಣೆ ಬರೆದಿರುವುದು ಕಂಡುಬಂದಿದೆ. ಪೊಲೀಸರು ಈ ಘೋಷಣೆಗಳನ್ನು ಅಳಿಸಿದ್ದಾರೆ. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆ ಪಂಜಾಬನ ಸಂಗರೂರನಲ್ಲಿರುವ ಕಾಳಿ ಮಾತಾ ಮಂದಿರದ ಗೋಡೆಗಳ ಮೇಲೆ ಮತ್ತು ಜಲಂಧರನ ದೇವಿ ತಾಲಾಬ ಮಂದಿರದ ಗೋಡೆಗಳ ಮೇಲೆ ಇದೇ ರೀತಿಯ ಘೋಷಣೆಗಳನ್ನು ಬರೆಯಲಾಗಿತ್ತು.