ಮಾನೆಸರದ ಪಂಚಾಯತಿಯಿಂದ ಮುಸಲ್ಮಾನ ವ್ಯಾಪಾರಿಗಳ ಮೇಲೆ ಆರ್ಥಿಕ ಬಹಿಷ್ಕಾರ ಘೋಷಣೆ !

ಗುರುಗ್ರಾಮ (ಹರಿಯಾಣಾ) – ಗುರುಗ್ರಾಮದ ಸಮೀಪ ಇರುವ ಮಾನೆಸರ ಗ್ರಾಮದಲ್ಲಿ ಸೇರಿದ ಪಂಚಾಯತಿಯು ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಹಿಂದೂಗಳು ಮುಸಲ್ಮಾನ ವ್ಯಾಪಾರಿ ಮತ್ತು ಮಾರಾಟಗಾರರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಲು ಕರೆ ನೀಡಿದೆ. ಜುಲೈ 3 ರಂದು ಆಯೋಜಿಸಲಾಗಿದ್ದ ಈ ಪಂಚಾಯತಿಯು ಸರಕಾರಕ್ಕೆ ಸಮಯವನ್ನು ನಿಗದಿಪಡಿಸಿ ಎಚ್ಚರಿಕೆ ನೀಡಿದ್ದಾರೆ. ಅವರು ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿ ಈ ರೀತಿಯ ಆರ್ಥಿಕ ಬಹಿಷ್ಕಾರವನ್ನು ಜಾರಿಗೊಳಿಸಲು ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಬೇಕು. ಒಂದು ವೇಳೆ ಸರಕಾರ ಕ್ರಮ ಕೈಕೊಳ್ಳದಿದ್ದರೆ, ದೊಡ್ಡ ಪಂಚಾಯತಿಯನ್ನು ಜರುಗಿಸಿ ಮುಂದೆ ಏನು ಕ್ರಮ ಕೈಕೊಳ್ಳಬೇಕು ಎನ್ನುವುದು ಹಿಂದೂಗಳೇ ನಿರ್ಧರಿಸುತ್ತಾರೆ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

1. ಸದರಿ ಪಂಚಾಯತಿಯಲ್ಲಿ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಸದಸ್ಯರೊಂದಿಗೆ 200 ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಮಾನೆಸರ ಸೇರಿ ಧಾರೂಹೆಡಾ, ಹಾಗೆಯೇ ಗುರುಗ್ರಾಮದ ಹತ್ತಿರ ಇರುವ ಎಲ್ಲ ಗ್ರಾಮದ ಜನರು ಭಾಗವಹಿಸಿದರು.

2. ಪಂಚಾಯತಿಯ ಸದಸ್ಯರು ಸರಕಾರಕ್ಕೆ ಬೇಡಿಕೆಯನ್ನು ಒಪ್ಪಿಸಿದರು.

3. ವಿಶ್ವ ಹಿಂದೂ ಪರಿಷತ್ತಿನ ಸ್ಥಳೀಯ ಹಿಂದುತ್ವನಿಷ್ಠರ ಪ್ರಕಾರ, ಧಾರ್ಮಿಕ ಮೂಲಭೂತವಾದಿಗಳು ಮತ್ತು ಜಿಹಾದಿ ಶಕ್ತಿಗಳ ವಿರೋಧದಲ್ಲಿ ಧ್ವನಿಯೆತ್ತಲು ಕ್ಷೇತ್ರದ ಎಲ್ಲ ಹಿಂದೂಗಳು ಪಂಚಾಯತಿಯನ್ನು ಆಯೋಜಿಸಿದ್ದರು.

4. ಇತರೆ ವಕ್ತಾರರು ಮಾನೆಸರ ಗ್ರಾಮದ ಮುಸಲ್ಮಾನರು ಹಿಂದೂಗಳ ದೇವತೆಗಳ ಹೆಸರಿನಲ್ಲಿ ಅಂಗಡಿಗಳನ್ನು ತೆರೆಯುತ್ತಾರೆ. ಇದು ಹಿಂದೂಗಳ ವಿರೋಧದ ಷಡ್ಯಂತ್ರವಾಗಿದ್ದು ಮುಸಲ್ಮಾನರ ಅಂಗಡಿಯ ಮೇಲೆ ಬಹಿಷ್ಕಾರ ಹಾಕಬೇಕು ಎಂದು ಕರೆ ನೀಡಿದರು.

ಮುಸಲ್ಮಾನ ನುಸುಳುಕೋರರ ಮೇಲೆ ತಾತ್ಕಾಲಿಕ ಕ್ರಮಕ್ಕೆ ಹಿಂದೂಗಳ ಬೇಡಿಕೆ !

`ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿ ಬಾಂಗ್ಲಾದೇಶದ ಮತ್ತು ರೋಹಿಂಗ್ಯಾ ನುಸುಳುಕೋರರು ಅನಧಿಕೃತವಾಗಿ ಅಂಗಡಿಗಳನ್ನು ತೆರೆದಿದ್ದಾರೆ. ಅವರು ಹಿಂದೂಗಳ ಮತಾಂತರಗೊಳಿಸಲು ಸಕ್ರಿಯವಾಗಿದ್ದಾರೆ. ಅವರ ತಪಾಸಣೆ ಮಾಡಿ ಅವರ ವಿರುದ್ಧ ತಕ್ಷಣ ಕ್ರಮ ಜರುಗಿಸುವ ಆವಶ್ಯಕತೆಯಿದೆ’, ಎಂದು ಹಿಂದೂಗಳು ಸರಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.