|
ಚಂಡಿಗಡ (ಹರಿಯಾಣ) – ರಾಜ್ಯದ ನಾರನೌಲದ ಧೋಸಿ ಧಾಮ ಎಂಬ ಐತಿಹಾಸಿಕ ಧಾರ್ಮಿಕ ಸ್ಥಳದಿಂದ ಭಗವಾನ ಶ್ರೀ ವಿಷ್ಣುವಿನ ಸುಮಾರು ೩೦ ಕೇಜಿ ತೂಕದ ಅಷ್ಟ ಧಾತುವಿನ ಮೂರ್ತಿ ಕಳುವಾಗಿದೆ. ಇದರ ಜೊತೆಗೆ ಹಿತ್ತಾಳೆಯ ಲಡ್ಡು ಗೋಪಾಲ ಮತ್ತು ವಿಷ್ಣುವಿನ ಇನ್ನೊಂದು ಮೂರ್ತಿ ಕಳುವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಅಜಯ, ಮೋಹನ, ರಾಮಸಿಂಹ ಸೇರಿದಂತೆ ೫ ಹಿಂದೂಗಳ ಮೇಲೆ ದೂರು ದಾಖಲಿಸಿದ್ದಾರೆ. ಪೂಜೆಯ ಕಾರಣ ನೀಡುತ್ತಾ ಅವರು ಇಲ್ಲೇ ನಿಂತಿದ್ದರು ಮತ್ತು ಮೂರ್ತಿ ಕಳವು ಮಾಡಿಕೊಂಡು ಹೋದರು, ಎಂದು ಅವರ ಮೇಲೆ ಆರೋಪವಿದೆ. ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.
ನಾರನೌಲ ನಗರದ ಪಶ್ಚಿಮಕ್ಕೆ ಸುಮಾರು ೮ ಕಿಲೋಮೀಟರ್ ಅಂತರದಲ್ಲಿ ಧೋಸಿಯ ಬೆಟ್ಟದ ಮೇಲೆ ಚ್ಯವನ ಋಷಿಯ ಪ್ರಸಿದ್ಧ ಧಾರ್ಮಿಕ ಸ್ಥಳ ಇದೆ. ಚ್ಯವನ ಋಷಿಗಳ ಪ್ರತಿಮೆ ನೋಡುವುದಕ್ಕಾಗಿ ಜನರು ದೂರದಿಂದ ಇಲ್ಲಿಗೆ ಬರುತ್ತಾರೆ.
नारनौल से भगवान विष्णु की अष्टधातु की बेशकीमती मूर्ति ले उड़े चोर, 3 लड्डू गोपाल भी गायब#Dausidham | #Mahendragarhhttps://t.co/mg855hniGe
— TV9 Bharatvarsh (@TV9Bharatvarsh) June 27, 2022
ದೇವಸ್ಥಾನದಲ್ಲಿ ಉಳಿದಿದ್ದ ಜನರ ಮೇಲೆ ಕಳ್ಳತನದ ಅನುಮಾನ !
ಈ ಸಂದರ್ಭದಲ್ಲಿ ಧೋಸಿ ಧಾಮದ ಪ್ರಮುಖ ನರಸಿಂಹ ದಾಸ ಅವರರು, “ಜೂನ್ ೨೪ ರಂದು ಬಡಗಾವ ದೇವಸ್ಥಾನದಲ್ಲಿ ಅಜಯ, ಮೋಹನ, ರಾಮಸಿಂಹ ಹಾಗೂ ಬೇರೆ ಇಬ್ಬರು ಉಪಸ್ಥಿತರಿದ್ದರು. ಇವರೇ ಮೂರ್ತಿ ಕಳವು ಮಾಡಿರುವುದು ಎಂದು ನನಗೆ ಪೂರ್ಣ ಅನುಮಾನ ಇದೆ !” ಇದರ ಜೊತೆಗೆ ‘ಆರೋಪಿಗಳನ್ನು ಬಂಧಿಸಿ ಭಗವಾನ ಶ್ರೀವಿಷ್ಣುವಿನ ಅಷ್ಟ ಧಾತುವಿನ ಮೌಲ್ಯವಾನ ಮೂರ್ತಿ ವಶಪಡಿಸಿಕೊಂಡು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು, ಮಹಂತರ ಜೊತೆಗೆ ಪರಿಸರದಲ್ಲಿನ ಭಕ್ತರು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದುಗಳೇ ದೇವಸ್ಥಾನದಲ್ಲಿ ದೇವತೆಗಳ ಮೂರ್ತಿಗಳು ಕಳ್ಳತನ ಮಾಡುತ್ತಿದ್ದರೆ, ಇದರಿಂದ ಅವರಲ್ಲಿ ಧರ್ಮದ ಬಗ್ಗೆ ಅಭಿಮಾನ ಇಲ್ಲದಿರುವುದು ಕಾಣುತ್ತದೆ. ಅನ್ಯಧರ್ಮದವರು ಎಂದಾದರೂ ಅವರ ಶ್ರದ್ಧಾಸ್ಥಾನಗಳನ್ನು ಈ ರೀತಿಯ ಕೃತ್ಯ ಮಾಡುವರೇ ? ಹಿಂದೂಗಳಿಗಾಗಿ ಇದು ಲಜ್ಜಾಸ್ಪದವಾಗಿದೆ ! |