ಹರಿಯಾಣಾದಲ್ಲಿಯ ಸೋನಿಪತ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕದ ಮೂವರು ಉಗ್ರರ ಬಂಧನ

ಖಲಿಸ್ತಾನಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡದಿದ್ದರೆ ಅದರ ಪರಿಣಾಮವನ್ನು ಇಡಿ ಭಾರತವು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಯಾವಾಗ ಕ್ರಮ ಕೈಗೊಳ್ಳುವುದು ?

ಸೊನಿಪತ – ಪೋಲಿಸರು ಖಲಿಸ್ತಾನಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವವರನ್ನು ಬಂಧಿಸಿರುತ್ತಾರೆ. ಸಾಗರ್, ಸುನಿಲ್ ಮತ್ತು ಜತಿನ್ ಎಂದು ಅವರ ಹೆಸರುಗಳಾಗಿವೆ. ಈ ಮೂವರು ನಗರದಲ್ಲಿ ಕೊಲೆ ಮಾಡಿ ಸಮಾಜದಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸುವವರಿದ್ದರು. ಈ ಮುವರು ಕೆನಡಾ ಮತ್ತು ಅಸ್ಟ್ರೇಲಿಯಾದಲ್ಲಿರುವ ‘ಖಲಿಸ್ತಾನ್ ಟೈಗರ್ ಫೋರ್ಸ್’ ಮತ್ತು ‘ಇಂಟರ್ನ್ಯಾಷನಲ್ ಸಿಖ್ ಯುಥ ಫೆಡರೇಷನ್’ ಗಾಗಿ ಕೆಲಸ ಮಾಡುತ್ತಿದ್ದರು. ಈ ಮೂವರು ಸುಪಾರಿ ಕೊಲೆಗಡುಕರಾಗಿದ್ದರು. ಈ ಮೂವರು ಉಗ್ರರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಮಪರ್ಕದಲ್ಲಿದ್ದರು. ಇದಕ್ಕೂ ಮುನ್ನ ಈ ಮೂವರು ಉಧಂಪುರ ಗ್ರಾಮದ ಮಾಜಿ ಸರಪಂಚ್ ಅವತಾರಸಿಗ್ ಅವರನ್ನು ಹತ್ಯೆ ಮಾಡಿದ್ದರು. ಈ ಮೂವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.