ಅಂಬಾಲಾ (ಹರಿಯಾಣ) ಇಲ್ಲಿಯ ಕಾಡಿನಲ್ಲಿ ೨೩೨ ಬಾಂಬ್ ಪತ್ತೆ !

ಅಂಬಾಲಾ (ಹರಿಯಾಣ) – ಇಲ್ಲಿಯ ಶಹಜಾದ್‌ಪುರದ ಕಾಡಿನಲ್ಲಿ ೨೩೨ ಬಾಂಬ್ ಸಿಕ್ಕಿವೆ. ಗ್ರಾಮಸ್ಥರಿಗೆ ಈ ಬಾಂಬ್ ಭೂಮಿಯಲ್ಲಿ ಹೂತಿಟ್ಟಿರುವುದು ಕಂಡುಬಂದಿದೆ. ಈ ಬಾಂಬ್ ತುಂಬಾ ಹಳೆಯದಾಗಿದ್ದು ಅದು ತುಕ್ಕು ಹಿಡಿದಿದೆ. ಪೊಲೀಸರಿಗೆ ಇದರ ಮಾಹಿತಿ ದೊರೆತ ನಂತರ ಅವರು ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆಸಿದರು ಹಾಗೂ ಆ ಸಂಪೂರ್ಣ ಪರಿಸರವನ್ನು ನಿರ್ಜನಗೊಳಿಸಿದರು. ಈ ಬಾಂಬ್ ಭಾರತೀಯ ಸೈನ್ಯದ ಅಧಿಕಾರಿಗಳಿಗೆ ಒಪ್ಪಿಸಲಾಗುವುದು. ಇಷ್ಟು ದೊಡ್ಡ ಪ್ರಮಾಣದ ಈ ಬಾಂಬುಗಳು ಎಲ್ಲಿಂದ ಬಂದಿದೆ ? ಮತ್ತು ಎಷ್ಟು ದಿನಗಳಿಂದ ಅವುಗಳನ್ನು ಭೂಮಿಯಲ್ಲಿ ಹೂಳಲಾಗಿತ್ತು ? ಇದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.