ಪಲವಲ (ಹರಿಯಾಣ)ದಲ್ಲಿ ಹಿಂದೂ ಯುವಕರ ಮೇಲೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ !

ಪಲವಲ (ಹರಿಯಾಣ) – ಇಲ್ಲಿ ಅಂಜುಮ್ ಎಂಬ ಮುಸ್ಲಿಂ ಯುವಕ ವಿಕಿ ಭಾರದ್ವಾಜ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ವಿಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಜೂನ್ ೨೮ ರಂದು ಈ ಘಟನೆ ನಡೆದಿದೆ. ದಾಳಿಯಲ್ಲಿ ಅಂಜುಮ್ ಹಾಗೂ ಇತರೆ ೫ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ಅರ್ಥವಾಗಿಲ್ಲ. ವಿಕಿ ದೆಹಲಿಯಿಂದ ವಾಪಸಾಗುತ್ತಿದ್ದ ವೇಳೆ ಬಸ ನಿಲ್ದಾಣದ ಬಳಿ ನಾಲ್ಕು ಚಕ್ರದ ವಾಹನದಲ್ಲಿ ಬಂದ ಯುವಕರ ಗುಂಪೊಂದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಜೂನ್ ೩೦ ರಂದು ಪಲವಲನಲ್ಲಿ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಬಳಿಕ ಆಡಳಿತ ಮಂಡಳಿಗೆ ಮನವಿ ನೀಡಲಾಯಿತು.

ಸಂಪಾದಕೀಯ ನಿಲುವು

ಹರಿಯಾಣದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ಮೇಲೆ ಇಂತಹ ದಾಳಿಗಳಾಗುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಆರೋಪಿಗಳನ್ನು ತಕ್ಷಣವೇ ಬಂಧಿಸಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವ ಮೂಲಕ ಶಿಕ್ಷೆಗೆ ಗುರಿಪಡಿಸಲು ಸರಕಾರ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !