ನ್ಯಾಯವಾದಿ ಅಲೋಕ್ ಕುಮಾರ್ ಅವರಿಂದ ‘ಸುರಾಜ್ಯ ಅಭಿಯಾನ’ದ ‘ವೆಬ್ ಪೇಜ್’ ಲೋಕಾರ್ಪಣೆ!

ಈ ಸಂದರ್ಭದಲ್ಲಿ ‘ಸುರಾಜ್ಯ ಅಭಿಯಾನ’ದ ಸಂಯೋಜಕರಾದ ಡಾ. ಅಂಜೇಶ್ ಕಣಂಗಲೇಕರ್ ಉಪಸ್ಥಿತರಿದ್ದರು. ಇದೇ ವೇಳೆ ಡಾ. ಅಲೋಕ್ ಕುಮಾರ್ ಅವರಿಗೆ ‘ಸುರಾಜ್ಯ ಅಭಿಯಾನ’ವು ಮಾಡುತ್ತಿರುವ ಸಮಾಜ ಹಿತೈಷಿ ಕಾರ್ಯಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಲಾಯಿತು.

ವಿಶ್ವ ಹಿಂದೂ ಪರಿಷತ್ತಿನ ಕಾರ್ಯವು ಸ್ಥೂಲದಲ್ಲಿದ್ದರೆ, ಸನಾತನದ ಕಾರ್ಯವು ಸೂಕ್ಷ್ಮದಲ್ಲಿದೆ! – ನ್ಯಾಯವಾದಿ ಅಲೋಕ ಕುಮಾರ, ಅಂತಾರಾಷ್ಟ್ರೀಯ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್

ಬರುವ ಶತಮಾನವು ಹಿಂದೂಗಳದ್ದಾಗಿರಲಿದೆ. ಈ ಮೊದಲು ರಷ್ಯಾದ್ದಾಗಿತ್ತು, ಈಗ ಅಮೇರಿಕಾದ್ದಾಗಿದೆ; ಆದರೆ ಅದು ಮುಗಿಯುತ್ತಾ ಬಂದಿದೆ. ಯಾವುದೇ ಶತಮಾನದ ಪರಿವರ್ತನೆಯು ೩೦ ರಿಂದ ೪೦ ನೇ ದಶಕದಲ್ಲಿ ಆಗುತ್ತದೆ. ಅದರಂತೆ ಈಗ ಬರುವ ಶತಮಾನವು ಹಿಂದೂಗಳದ್ದು, ಭಾರತದ್ದಾಗಿರಲಿದೆ. ಅಂತಹ ಚಿತ್ರಣವೂ ಕಂಡುಬರುತ್ತಿದೆ.

ಫೋಂಡಾ (ಗೋವಾ) ಉಪಚುನಾವಣೆಯನ್ನು ರದ್ದುಗೊಳಿಸಿದ ಉಚ್ಚ ನ್ಯಾಯಾಲಯ!

ಫೋಂಡಾ ಉಪಚುನಾವಣೆಯ ಸಿಂಧುತ್ವವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಪ್ರಸ್ತುತ ವಿಧಾನಸಭೆಯ ೫ ವರ್ಷಗಳ ಅವಧಿ ಮುಕ್ತಾಯಗೊಳ್ಳಲು ೧ ವರ್ಷಕ್ಕಿಂತ ಕಡಿಮೆ ಸಮಯ ಉಳಿದಿರುವುದರಿಂದ, ಫೋಂಡಾ ಉಪಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಶೈಕ್ಷಣಿಕ, ವೈದ್ಯಕೀಯ ಮತ್ತು ಕಾರ್ಯನೀತಿ ರೂಪಿಸುವಂತಹ ವಿಷಯಗಳಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು, ಕಾಲದ ಅವಶ್ಯಕತೆಯಾಗಿದೆ! – ಶಾನ್ ಕ್ಲಾರ್ಕ್, ಫೋಂಡಾ, ಗೋವಾ

ಆಧುನಿಕ ವೈದ್ಯಕೀಯ ವಿಜ್ಞಾನವು ರೋಗವನ್ನು ತಡೆಗಟ್ಟುವ, ರೋಗನಿರ್ಣಯ ಮಾಡುವ ಮತ್ತು ಚಿಕಿತ್ಸೆ ನೀಡುವಾಗ ಅದರ ಹಿಂದಿರುವ ಆಧ್ಯಾತ್ಮಿಕ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಅತ್ಯಂತ ಸೂಕ್ಷ್ಮ; ಆದರೆ ಮೂಲಭೂತ ಅಂಶವನ್ನು ನಿರ್ಲಕ್ಷಿಸುವುದರಿಂದ ವೈದ್ಯಕೀಯ ಚಿಕಿತ್ಸೆಗಳು ಪರಿಪೂರ್ಣವಾಗದೆ ಅಪೂರ್ಣವಾಗಿಯೇ ಉಳಿಯುತ್ತವೆ.

ಗೋವಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದ ಪಾದಯಾತ್ರೆಯ ವಾರಿ !

ಗೋವಾ ರಾಜ್ಯದಲ್ಲಿ ಇಂತಹ ಶ್ಲಾಘನೀಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಾಲದ ಬೇಡಿಕೆಯಾಗಿದೆ.

ಪರ್ವರಿ (ಗೋವಾ): ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 100 ಚದರ ಮೀಟರ್ ಪ್ರದೇಶದಲ್ಲಿ ‘ಕ್ರಾಸ್’ನ ಅನಧಿಕೃತ ನಿರ್ಮಾಣ!

ಆಡಳಿತದ ಇಂತಹ ಉದಾಸೀನ ಧೋರಣೆಯೇ ಧರ್ಮನಿರಪೇಕ್ಷತೆಯೇ? ಈ ಜಾಗದಲ್ಲಿ ಒಂದು ವೇಳೆ ಅನಧಿಕೃತವಾಗಿ ದೇವಸ್ಥಾನವನ್ನು ಕಟ್ಟುತ್ತಿದ್ದರೆ, ಆಡಳಿತವು ಸ್ವಯಂಪ್ರೇರಿತವಾಗಿ ಅದನ್ನು ದಾಖಲಿಸಿಕೊಂಡು, ಸಕಾಲದಲ್ಲಿ ಅದರ ಮೇಲೆ ಬುಲ್ಡೋಜರ್ ಚಲಾಯಿಸುತ್ತಿತ್ತು ಎಂದು ಯಾವುದೇ ಹಿಂದುತ್ವನಿಷ್ಠರಿಗೆ ಅನಿಸಿದರೆ ಅದು ತಪ್ಪಾಗಲಾರದು.

“ಮನೆ ಮನೆಯಲ್ಲಿ ರಾಮರಾಜ್ಯ ನಿರ್ಮಾಣವಾದರೆ, ದೇಶದಲ್ಲಿ ರಾಮರಾಜ್ಯ ಆಗಲಿದೆ !” – ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ

ಈ ವೇಳೆ ಸ್ವಾಮೀಜಿಯವರ ಗುರುಗಳಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಪಾದುಕೆಗಳ ಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಡಾ. ಪಾಂಡುರಂಗ ಮರಾಠೆ ಮತ್ತು ಸೌ. ಮಂಗಳಾ ಮರಾಠೆ ನೆರವೇರಿಸಿದರು. ನಂತರ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಗೆ ಪಂಚಾರತಿ ಮಾಡಲಾಯಿತು.

‘ಗೋವಾ ಪುಸ್ತಕ ಮಹೋತ್ಸವ’ದಲ್ಲಿ ಸನಾತನ ಸಂಸ್ಥೆಯ ಗ್ರಂಥಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ! – Goa Book Festival

ಫೆಬ್ರವರಿ 4–8 ರಂದು ಭಾವುಸಾಹೇಬ್ ಬಾಂದೋಡ್ಕರ್ ಮೈದಾನದಲ್ಲಿ ನಡೆಯುತ್ತಿರುವ ಗೋವಾ ಪುಸ್ತಕ ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಗ್ರಂಥಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸನಾತನ ಧರ್ಮಯುಗದ ಸ್ಥಾಪನೆಗಾಗಿ ಸನಾತನ ಸಂಸ್ಥೆಯು ಬಹಳ ದೊಡ್ಡ ಪುರುಷಾರ್ಥವನ್ನು ಮಾಡುತ್ತಿದೆ! Ram Dev Baba Sanatan Sanstha

ಗೋಮಾಂತಕವು ಪರಶುರಾಮರ ಭೂಮಿ. ಗೋವದಲ್ಲಿ ಸನಾತನ ಸಂಸ್ಥೆ ಸನಾತನ ಧರ್ಮದ ಸರ್ವಜನ ಹಿತದ ಮೌಲ್ಯಗಳನ್ನು ಹರಡುತ್ತಿದೆ; ಅದರ ಪ್ರಯತ್ನವನ್ನು ಯೋಗ ಋಷಿ ರಾಮದೇವ್ ಬಾಬಾ ಶ್ಲಾಘಿಸಿದ್ದಾರೆ.

ಪರ್ವರಿಯ ‘ಹೋಲಿ’ ಸಂಸ್ಥೆಯ ಕಮಲಾಕಾಂತ್ ಚತುರ್ವೇದಿಯವರಿಗೆ ‘ವಿಂಧ್ಯ ಗೌರವ’ ಪ್ರಶಸ್ತಿ ಗೌರವ

ಶ್ರೀ. ಚತುರ್ವೇದಿ ಅವರು ಧರ್ಮ ಪ್ರಚಾರಕ್ಕಾಗಿ ವಿವಿಧ ಕಾರ್ಯಕ್ರಮಗಳಲ್ಲಿ ೨ ಸಾವಿರ ಬೆಳ್ಳಿ ನಾಣ್ಯಗಳು, ೫೦೦ ಶ್ರೀರಾಮಚರಿತಮಾನಸ ಗ್ರಂಥಗಳು ಮತ್ತು ಸುಮಾರು ೧ ಸಾವಿರ ಭಗವದ್ಗೀತೆ ಪುಸ್ತಕಗಳನ್ನು ಹಂಚಿದ್ದಾರೆ.