ಪಾಕಿಸ್ತಾನದಂತೆ ಮಣಿಪುರವನ್ನೂ ಭಾರತದಿಂದ ವಿಭಜಿಸುವ ಮಿಷನರಿಗಳ ಸಂಚು ! – ಪ್ರಿಯಾನಂದ ಶರ್ಮಾ, ಸದಸ್ಯ, ಮಣಿಪುರ ಧರ್ಮರಕ್ಷಕ ಸಮಿತಿ, ಮಣಿಪುರ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸದ ಏಳನೇ ದಿನ (30 ಜೂನ್) : ಬೋಧಪ್ರದ ಸತ್ರ

ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ವಿವಿಧ ಸಂಘಟನೆಗಳು ಮತ್ತು ಯುವಕರ ಹೋರಾಟ

ಪ್ರಿಯಾನಂದ ಶರ್ಮಾ

ಮಣಿಪುರದ ಸ್ಥಿತಿ ಸದ್ಯ ‘ಟೈಂಬಾಂಬ್’ನಂತೆ ಆಗಿದೆ. ಈ ಸ್ಥಿತಿಯು ಯಾವಾಗಾದರೂ ಸ್ಫೋಟಿಸಬಹುದು. ಮಣಿಪುರದ ಹಿಂಸಾಚಾರದ ಹಿಂದೆ ಪಾಶ್ಚಿಮಾತ್ಯ ದೇಶಗಳ ಕೈವಾಡವಿದೆ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳನ್ನು ಸೇರಿಸಿ, ಹಾಗೂ ಮಣಿಪುರವನ್ನು ವಿಭಜಿಸಿ, ಹೊಸ ಸ್ವತಂತ್ರ ಕುಕಿ ದೇಶವನ್ನು ರಚಿಸುವ ಪಾಶ್ಚಾತ್ಯ ದೇಶಗಳು ಮತ್ತು ಅವರೊಂದಿಗೆ ಸೇರಿದ ಮಿಷನರಿಗಳ ಸಂಚು ಇದೆ. ಮಣಿಪುರದಲ್ಲಿ 1961 ಜನಗಣತಿಯ ಪ್ರಕಾರ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಕುಕಿ ಜನಾಂಗದ ಹೆಸರು ಇರಲಿಲ್ಲ; ಆದರೆ ಇಂದು ಅವರು ಸ್ವತಂತ್ರ ದೇಶದ ಬೇಡಿಕೆಯನ್ನು ಮಾಡುತ್ತಿದ್ದಾರೆ. ಬಾಂಗ್ಲಾದೇಶಿ ಹಾಗು ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರು, ಕುಕಿ ಜನಾಂಗವು ಮಣಿಪುರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಪ್ರವೇಶ ಮಾಡಿದ್ದಾರೆ. ಅವರಿಗೆ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಸುಲಭವಾಗಿ ದೊರಕುತ್ತಿವೆ. ಗಡಿಗಳಲ್ಲಿ ಸುರಕ್ಷತೆ ಕೊರತೆಯ ಕಾರಣದಿಂದ ಈಶಾನ್ಯ ಭಾರತದಲ್ಲಿ ಅಕ್ರಮ ಪ್ರವೇಶ ಹೆಚ್ಚುತ್ತಿದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಗಮನ ಕೊಡದಿದ್ದರೆ, ಈಶಾನ್ಯ ಭಾರತದಲ್ಲಿ ಈ ಸನ್ನಿವೇಶ ವ್ಯಾಪಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಮಣಿಪುರದಲ್ಲಿ ದಿನೇ ದಿನೇ ಅಹಿಂದೂಗಳ ಜನಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಮಣಿಪುರವನ್ನು ರಕ್ಷಿಸಲು ಭಾರತವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವೆಂದು ಮಣಿಪುರ ಧರ್ಮರಕ್ಷಕ ಸಮಿತಿಯ ಸದಸ್ಯರಾದ ಶ್ರೀ. ಪ್ರಿಯಾನಂದ ಶರ್ಮಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.