ಆಕ್ರಮಣ ಮಾಡಿವುದೇ ಅತ್ಯುತ್ತಮ ಸ್ವಸಂರಕ್ಷಣೆಯಾಗಿದೆ! – ಸುರೇಶ ಚವ್ಹಾಣಕೆ, ಮುಖ್ಯ ಸಂಪಾದಕರು, ‘ಸುದರ್ಶನ ನ್ಯೂಸ್’

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಏಳನೇ ದಿನ (ಜೂನ್ 30)

ಬೋಧಪ್ರದ ಸತ್ರ : ಹಿಂದುತ್ವದ ರಕ್ಷಣೆ

ವಿದ್ಯಾಧಿರಾಜ್ ಸಭಾಂಗಣ – 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾಗಿವೆ. 5 ವರ್ಷಗಳಲ್ಲಿ ಗೋಹತ್ಯೆ ಆಗಲಿಲ್ಲವೋ ಅದಕ್ಕಿಂತ ಹೆಚ್ಚು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರದಿಮದ ಇಲ್ಲಿಯ ವರೆಗೆ ಆಗಿದೆ. ಹಿಂದೂಗಳ ಮೇಲಿನ ದಾಳಿಯ ಗತಿ ನಿಲ್ಲುತ್ತಿಲ್ಲ, ಹೆಚ್ಚಾಗುತ್ತಲೇ ಇರುವುದು. ಅದರಿಂದಾಗಿ ಹಿಂದೂಗಳು ತಮ್ಮ ಶಕ್ತಿ ತೋರಿಸಬೇಕಾಗಬಹುದು. ಹಿಂದೂಗಳ ಮೇಲಿನ ದಾಳಿಯನ್ನು ತಡೆಯಲು ಹಿಂದೂಗಳು ಕ್ರಿಯೆಗೆ ಪ್ರತಿಕ್ರಿಯಿಸಬೇಕು, ಇಲ್ಲದಿದ್ದರೆ ಅವರು ಭವಿಷ್ಯದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ‘ದಾಳಿಯೇ ರಕ್ಷಣೆಯ ಅತ್ಯುತ್ತಮ ಮಾರ್ಗವಾಗಿದೆ’ ಎಂದು ‘ಸುದರ್ಶನ ನ್ಯೂಸ್’ನ ಮುಖ್ಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಸಮಾರೋಪ ದಿನದಂದು ಹೇಳಿದರು. ಅವರು ‘ಹಿಂದೂ ಸಂಘಟನೆಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳ ಪರಿಹಾರಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ಸುರೇಶ ಚವ್ಹಾಣಕೆ ಮಾತು ಮುಂದುವರೆಸುತ್ತಾ, ”ಮತಾಂಧತೆಗೆ ಸ್ವಲ್ಪ ಆಘಾತ ಬಂದರೂ ಸಹಸ್ರಾರು ಬಂಧುಗಳು ಒಂದಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದೂಗಳ ಮೇಲೆ ಬಿಕ್ಕಟ್ಟು ಉಂಟಾದರೆ, ಆ ಪ್ರದೇಶದಲ್ಲಿ 100 ಹಿಂದೂಗಳು ಕೂಡ ಸೇರುವುದಿಲ್ಲ. ಇದಕ್ಕಾಗಿ ಎಲ್ಲರೂ ಅವರವರ ಕ್ಷೇತ್ರದಲ್ಲಿ ಬಾಹುಬಲಿ ಆಗಬೇಕು. ನಾವು ಹಿಂದೂ ದೇವಾಲಯಗಳನ್ನು ಸುಂದರಗೊಳಿಸುವತ್ತ ಗಮನ ಹರಿಸುತ್ತೇವೆ. ಅದಕ್ಕಿಂತ ಹೆಚ್ಚಾಗಿ, ಬಿಕ್ಕಟ್ಟಿನ ಸಮಯದಲ್ಲಿ ದೇವಸ್ಥಾನದ ಧ್ವನಿವರ್ಧಕದಿಂದ ಒಂದು ಧ್ವನಿ ನೀಡಿದರೆ ಸಾವಿರಾರು ಹಿಂದೂಗಳು ಒಂದಾಗುತ್ತಾರೆ ಎಂಬ ಪರಿಸ್ಥಿತಿಯನ್ನು ಸೃಷ್ಟಿಸುವುದು ಅವಶ್ಯಕವಾಗಿದೆ. ಪ್ರಸ್ತುತ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ಬದಲಾಗಿ, ಮುಸ್ಲಿಮರ ಜನಸಂಖ್ಯೆಯು ದೊಡ್ಡ ರೀತಿಯಲ್ಲಿ ಹೆಚ್ಚುತ್ತಿದೆ. ಅದಕ್ಕಾಗಿ ‘ಜನಸಂಖ್ಯೆ ನಿಯಂತ್ರಣ ಕಾಯ್ದೆ’ ತರಬೇಕು ಎಂದು ಆಗ್ರಹಿಸಲಾಗುತ್ತದೆ. ಬದಲಾಗಿ, ಈ ಕಾಯಿದೆಯ ಹೆಸರನ್ನು ‘ಮುಸ್ಲಿಂ ಜನಸಂಖ್ಯೆ ನಿಯಂತ್ರಣ ಕಾಯ್ದೆ’ ಎಂದು ಬದಲಾಯಿಸುವ ಸಮಯ ಬಂದಿದೆ. ಈ ಕಾನೂನನ್ನು ಅಂಗೀಕರಿಸಿ ಜಾರಿಗೊಳಿಸದಿದ್ದರೆ 2029ರ ಲೋಕಸಭಾ ಚುನಾವಣೆಯ ಫಲಿತಾಂಶ ಈ ವರ್ಷಕ್ಕಿಂತ ಕೆಟ್ಟದಾಗಿರುತ್ತದೆ. ಲವ್ ಜಿಹಾದ್, ಮತಾಂತರ, ಗೋಹತ್ಯೆ ವಿರುದ್ಧದ ಕಾನೂನನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಬೇಕೇ ಹೊರತು ರಾಜ್ಯಮಟ್ಟದಲ್ಲಿ ಅಲ್ಲ ಎಂದು ಎಲ್ಲ ಹಿಂದುತ್ವನಿಷ್ಠರು ಆಗ್ರಹಿಸಬೇಕು. ‘ಜಿಎಸ್‌ಟಿ’ಯಂತಹ ವಿಷಯಗಳನ್ನು ಜನರು ಒಪ್ಪಿಕೊಂಡಂತೆ, ಜನರು ಅಂತಹ ಕಾನೂನುಗಳನ್ನು ಒಪ್ಪಿಕೊಳ್ಳುತ್ತಾರೆ.” ಎಂದು ಹೇಳಿದರು.

ಸುರೇಶ ಚವ್ಹಾಣಕೆಯವರ ಭಾಷಣದ ಕೆಲವು ವಿಚಾರಗಳು

1. ಗೋವಾದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ ಆರಂಭವಾಗಿ 12 ವರ್ಷಗಳಾಗಿವೆ. ಈ ಅಧಿವೇಶನಗಳಿಂದ ಸಾವಿರಾರು ಹಿಂದುತ್ವನಿಷ್ಠ ಕಾರ್ಯಕರ್ತರು ಪೂರ್ಣಕಾಲಿಕವಾಗಿ ಹೊರಬಂದರು. ಈ ಅಧಿವೇಶನದಿಂದ ಪ್ರೇರಗೊಂಡು ಲಕ್ಷಾಂತರ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿದರು, ಲಕ್ಷಾಂತರ ಹಿಂದೂ ಹುಡುಗಿಯರಲ್ಲಿ ಜಾಗೃತಿ ಮೂಡಿಸಿದರು. ಆದುದರಿಂದಲೇ ಅವರನ್ನು ‘ಲವ್ ಜಿಹಾದ್’ನಿಂದ ರಕ್ಷಿಸಲಾಯಿತು. ಲಕ್ಷಗಟ್ಟಲೆ ಗೋವುಗಳನ್ನು ಗೋಹತ್ಯೆಯಿಂದ ರಕ್ಷಿಸಲಾಗಿದೆ. ‘ಲ್ಯಾಂಡ್ ಜಿಹಾದ್’ನಿಂದ ಸಾವಿರಾರು ಎಕರೆ ಭೂಮಿಯನ್ನು ಉಳಿಸಲಾಗಿದೆ.

2. ನನ್ನ ವಿರುದ್ಧ ‘ಹೇಟ್ ಸ್ಪೀಚ್’ ಪ್ರಕರಣದಲ್ಲಿ 1 ಸಾವಿರದ 828 ಅಪರಾಧಗಳು ದಾಖಲಾಗಿವೆ.

3. ಹಿಂದೂಗಳ ಮತದಿಂದ ಬಿಜೆಪಿಯ 240 ಸಂಸದರು ಆಯ್ಕೆಯಾಗಿದ್ದಾರೆ. ಅದಕ್ಕಾಗಿಯೇ ಅವರು ಹಿಂದೂಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು.

ಕ್ಷಣಚಿತ್ರ :
ಈ ಸಮಯದಲ್ಲಿ ಶ್ರೀ. ಸುರೇಶ ಚವ್ಹಾಣಕೆ ಅವರು, ಹಿಂದುತ್ವನಿಷ್ಠ ಶಾಸಕರಾದ ಶ್ರೀ. ರಾಜಾ ಸಿಂಗ್ ತನ್ನ ಮಗನನ್ನು ಈ ಹಿಂದೂ ಮಹೋತ್ಸವಕ್ಕೆ ಕರೆತಂದರೋ, ಅದೇ ರೀತಿ ಇಲ್ಲಿನ ಹಿಂದುತ್ವನಿಷ್ಠರು ಕೂಡ ತಮ್ಮ ಮಕ್ಕಳನ್ನು ಮುಂದಿನ ವರ್ಷ ಈ ಮಹೋತ್ಸವಕ್ಕೆ ಕರೆತರಬೇಕು ಎಂದು ಹೇಳಿದರು.