ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳನ್ನು ನಿಲ್ಲಿಸಿದರೆ, ಮಾತ್ರ ಮತಾಂತರವನ್ನು ತಡೆಗಟ್ಟಬಹುದು ! – ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಏಳನೇ ದಿನ (೩೦ ಜೂನ್)

ಬೋಧಪ್ರದ ಸತ್ರ : ಹಿಂದುತ್ವದ ರಕ್ಷಣೆ

ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ

ವಿದ್ಯಾಧಿರಾಜ ಸಭಾಂಗಣ – ಕೇಂದ್ರ ಸರಕಾರದ ೨೦೦ ಯೋಜನೆಗಳು ಮತಾಂತರವನ್ನು ಪ್ರೋತ್ಸಾಹಿಸುತ್ತವೆ. ರಾಜ್ಯರಾಜ್ಯಗಳಲ್ಲಿನ ಯೋಜನೆಗಳನ್ನು ಸೇರಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರಿಗಾಗಿ ೫೦೦ ಯೋಜನೆಗಳಿವೆ. ಇದರ ವ್ಯತಿರಿಕ್ತ ಅಲ್ಪಸಂಖ್ಯಾತರಿಗಾಗಿ ಇತರ ಯೋಜನೆಗಳೂ ಇವೆ. ಹಿಂದೂಗಳ ತೆರಿಗೆಯಿಂದ ಅಲ್ಪಸಂಖ್ಯಾತರ ಯೋಜನೆ ನಡೆದಿದೆ. ಈ ಎಲ್ಲ ಯೋಜನೆಗಳು ಮತಾಂತರವನ್ನು ಪ್ರೇರೇಪಿಸುತ್ತವೆ. ‘ಅಲ್ಪಸಂಖ್ಯಾತರಿಗೆ ಯೋಜನೆ’ ಎಂದರೆ ಶ್ರೀಮಂತ ಹಿಂದೂಗಳ ಹಣದಿಂದ ಬಡ ಹಿಂದೂಗಳ ಮತಾಂತರಿಸುವುದ ಎಂದಾಗಿದೆ. ಅಲ್ಪಸಂಖ್ಯಾತರಿಗಾಗಿ ಇರುವಂತಹ ಎಲ್ಲ ಯೋಜನೆಗಳನ್ನು ನಿಲ್ಲಿಸಿದರೆ ಮಾತ್ರ ಮತಾಂತರವನ್ನು ತಡೆಗಟ್ಟಲು ಸಾಧ್ಯ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರು ಹೇಳಿಕೆ ನೀಡಿದರು. ಅವರು ‘ರಾಮರಾಜ್ಯ ಮತ್ತು ಭಾರತೀಯ ಸಂವಿಧಾನ’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.

ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರ ಭಾಷಣದಲ್ಲಿನ ಬೋಧಪ್ರದ ವಿಚಾರ

ನಾವು ಕಾಂಗ್ರೆಸ್ಅನ್ನು ದೂಷಿಸುತ್ತೇವೆ; ಆದರೆ ಅದರ ದೇಶವಿರೋಧಿ ಕಾನೂನುಗಳು ಇಂದಿಗೂ ಅಸ್ತಿತ್ವದಲ್ಲಿವೆ !

ಶ್ರೀಕೃಷ್ಣ, ಶ್ರೀರಾಮ, ಶ್ರೀ ಹನುಮಾನ ಮುಂತಾದ ಹಿಂದೂಗಳ ದೇವತೆಗಳು ಯಾವ ಭೂಮಿಯಲ್ಲಿ ಜನಿಸಿದರೋ, ಆ ಪವಿತ್ರ ಭೂಮಿಯು ಬಾಂಬ್ಸ್ಫೋಟ್, ಮೂಲಭೂತವಾದ, ಲವ್ ಜಿಹಾದ್, ಗೋಹತ್ಯೆ ಈ ಸಮಸ್ಯೆಗಳಿಂದ ಏಕೆ ನಲುಗುತ್ತಿದೆ ? ಈ ಮಾನವನಿರ್ಮಿತ ಸಮಸ್ಯೆಗಳಿಗೆ ಪರಿಹಾರಗಳೂ ಇವೆ. ದೇಶದಲ್ಲಿ ಅನೇಕ ಹಿಂದುತ್ವನಿಷ್ಠರು ಕೊಲ್ಲಲ್ಪಟ್ಟರು; ಆದರೆ ಯಾರಿಗೂ ಕಠೋರ ಶಿಕ್ಷೆಯಾಗಲಿಲ್ಲ. ದೇಶದಲ್ಲಿ ಲವ್ ಜಿಹಾದ್, ಮತಾಂತರ ನಡೆದಿದೆ. ಇದಕ್ಕೆಲ್ಲ ಅಪರಾಧಿಗಳಿಗೆ ಕಾನೂನಿನ ಭಯ ಉಳಿದಿಲ್ಲರುವುದೇ ಮುಖ್ಯ ಕಾರಣವಾಗಿದೆ. ಕಾನೂನಿನ ಭಯ ಮೂಡಿಸುವುದು ಸರಕಾರ ಮತ್ತು ಆಡಳಿತದ ಕರ್ತವ್ಯವಾಗಿದೆ. ಮತಾಂತರದ ವಿರುದ್ಧ ನಾನು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇನೆ; ಆದರೆ ನನ್ನ ಅರ್ಜಿಯನ್ನು ರದ್ದು ಪಡಿಸಲು ೧೦ ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆಯ ದಿನಾಂಕಗಳು ಮುಂದೂಡಲ್ಪಡುತ್ತಿವೆ. ಇದನ್ನು ತಡೆಗಟ್ಟಲು ಬೇಕಾದ ಕಾನೂನು ಸಂಸತ್ತಿನಲ್ಲಿ ಒಂದೇ ದಿನದಲ್ಲಿ ಆಗಬಹುದಾಗಿದೆ. ಈ ಸಮಸ್ಯೆಗಳನ್ನು ಬಿಡಿಸುವುದು ರಾಜ್ಯಕರ್ತರ ಮತ್ತು ಆಡಳಿತದ ಆದ್ಯ ಕರ್ತವ್ಯವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಕಾನೂನು ರಚಿಸುವುದು ಆವಶ್ಯಕವಾಗಿದೆ. ತುರ್ತು ಪರಿಸ್ಥಿತಿಯು ತಪ್ಪಾಗಿತ್ತು, ಆದರೆ ಆ ಕಾಲದಲ್ಲಿ ಸಂವಿಧಾನದಲ್ಲಿ ಮಾಡಲಾದ ಬದಲಾವಣೆಗಳೂ ಕಾನೂನುಬಾಹಿರವಾಗಿದ್ದವು. ಮೊಗಲರು ಮತ್ತು ಆಂಗ್ಲರು ಅಧಿಕಾರಕ್ಕಾಗಿ ಅಲ್ಲ ಆದರೆ ಧರ್ಮದ ಪ್ರಚಾರ ಮಾಡಲು ಭಾರತಕ್ಕೆ ಬಂದಿದ್ದರು. ಅವರ ಕಾನೂನುಗಳು ಇಂದಿಗೂ ಭಾರತದಲ್ಲಿ ಜಾರಿಯಲ್ಲಿವೆ. ನಾವು ಕಾಂಗ್ರೆಸ್ಅನ್ನು ದೂಷಿಸುತ್ತೇವೆ; ಆದರೆ ಕಾಂಗ್ರೆಸ್ ರಚಿಸಿದ ದೇಶದ್ರೋಹಿ ಕಾನೂನುಗಳು ಇಂದಿಗೂ ಭಾರತದಲ್ಲಿವೆ.