ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ ಅನಿವಾರ್ಯ ! – ಮೀನಾಕ್ಷಿ ಶರಣ, ಸಂಸ್ಥಾಪಕಿ, ಅಯೋಧ್ಯಾ ಫೌಂಡೇಶನ್, ಮುಂಬಯಿ, ಮಹಾರಾಷ್ಟ್ರ

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಏಳನೇ ದಿನ (೩೦ ಜೂನ್)

ಬೋಧಪ್ರದ ಸತ್ರ – ಹಿಂದುತ್ವದ ರಕ್ಷಣೆ

ಮೀನಾಕ್ಷಿ ಶರಣ

ವಿದ್ಯಾಧಿರಾಜ ಸಭಾಂಗಣ – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ದೂರದೃಷ್ಟಿಯಿಂದ ವಿಚಾರ ಮಾಡುತ್ತಾರೆ. ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ಸಂಪೂರ್ಣ ಜಗತ್ತನ್ನು ಕಲ್ಯಾಣಕಾರಿ ಹಿಂದೂ ರಾಷ್ಟ್ರದವರೆಗೆ ಕೊಂಡೊಯ್ಯುವುದು ಅವರ ಧ್ಯೇಯವಾಗಿದೆ. ಇದಕ್ಕಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ವಿರುವುದು ಅನಿವಾರ್ಯವಾಗಿದೆ, ಎಂಬ ಹೇಳಿಕೆಯನ್ನು ಮುಂಬಯಿಯ ಅಯೋಧ್ಯಾ ಫೌಂಡೇಶನ್‌ನ ಸಂಸ್ಥಾಪಕಿ ಮೀನಾಕ್ಷಿ ಶರಣ ಇವರು ನೀಡಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ೩೦ ಜೂನ್ ಅಂದರೆ ಕೊನೆಯ ದಿನದ ಸತ್ರದಲ್ಲಿ ‘ವರ್ಷ ೧೯೪೭ ರಂತಹ ಪರಿಸ್ಥಿತಿ ನಿರ್ಮಾಣವಾದರೆ ಮಹಿಳೆಯರ ಮತ್ತು ಹಿಂದೂಗಳ ಕರ್ತವ್ಯ !’ ಈ ಕುರಿತು ಮಾತನಾಡುತ್ತಿದ್ದರು. ಅವರು ಮಾತನ್ನು ಮುಂದುವರೆಸುತ್ತಾ, “ಭಾರತದಲ್ಲಿ ‘ಲವ್ ಜಿಹಾದ್’, ‘ಗೋಹತ್ಯೆ’ ನಡೆಯುತ್ತಿದ್ದರೂ ಆ ಬಗ್ಗೆ ಹಿಂದೂಗಳು ಸ್ಪಂದಿಸುವುದಿಲ್ಲ. ಭಾರತದಲ್ಲಿ ಪ್ರತಿವರ್ಷ ೩ ಕೋಟಿ ಗೋವುಗಳ ಹತ್ಯೆಯಾಗುತ್ತದೆ; ಆದರೆ ಹಿಂದೂಗಳು ಈ ಕುರಿತು ಸಾಮೂಹಿಕವಾಗಿ ಧ್ವನಿ ಎತ್ತುವುದಿಲ್ಲ. ಬಹುಸಂಖ್ಯಾತ ಯುವವರ್ಗದವರಿಗೆ ಇದರೊಂದಿಗೆ ಯಾವುದೇ ಕೊಡ-ಕೊಳ್ಳುವಿಕೆ ಇಲ್ಲ. ಇದರ ಕಾರಣ ಅವರಿಗೆ ಧರ್ಮಬೋಧ ಮತ್ತು ಶತ್ರುಬೋಧ ಇಲ್ಲ. ಹಿಂದು ಸಮಾಜವೂ ಧರ್ಮರಹಿತವಾಗಿದೆ. ಹಿಂದೂಗಳು ತಮ್ಮ ಪ್ರಾಚೀನ ಇತಿಹಾಸದ ಬಗ್ಗೆ ಹೆಮ್ಮೆಪಡುವುದಿಲ್ಲ. ತಮ್ಮ ಸಂತರ ಅವಮಾನವಾದರೂ ಹಿಂದೂಗಳು ಬಾಯಿಮುಚ್ಚಿಕೊಂಡಿದ್ದಾರೆ. ಹಿಂದೂಗಳು ಕೇವಲ ಹಣ ಮತ್ತು ಕಾಮ ಇವುಗಳಲ್ಲಿ ಸಿಲುಕಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ಹಿಂದೂಗಳ ಜನಸಂಖ್ಯೆ ವೇಗದಿಂದ ಕಡಿಮೆಯಾಗುತ್ತಿದೆ. ವಿಭಜನೆಯ ನಂತರ ಪಾಕಿಸ್ತಾನದಲ್ಲಿ ೫೦ ಲಕ್ಷ ಹಿಂದೂಗಳನ್ನು ಕೊಲ್ಲಲಾಯಿತು. ಅಲ್ಲಿನ ಹಿಂದೂಗಳು ೧ ಸಾವಿರದ ೪೦೦ ಕೋಟಿ ರೂಪಾಯಿಗಳ ಆಸ್ತಿ-ಪಾಸ್ತಿಯನ್ನು ಬಿಡಬೇಕಾಯಿತು. ಇನ್ನೊಂದೆಡೆ ಮಾತ್ರ ಪಾಕಿಸ್ತಾನದ ನಿರ್ಮಿತಿಯ ನಂತರ ಭಾರತದಲ್ಲಿ ಇನ್ನೂ ೧೩-೧೪ ಪಾಕಿಸ್ತಾನಗಳಾಗುವ ಮಾರ್ಗದಲ್ಲಿವೆ. ಭಾರತ ಮತ್ತೊಮ್ಮೆ ವಿಭಜನೆಯ ಅಂಚಿನಲ್ಲಿದೆ. ತಮ್ಮ ಸಂಸ್ಕೃತಿಯ ಬಗೆಗಿನ ಹಿಂದೂಗಳಲ್ಲಿನ ಶ್ರದ್ಧೆ ಹೆಚ್ಚಾಗಬೇಕೆಂದು, ನಾವು ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಿಸುವ ಯೋಜನೆಯನ್ನು ಆರಂಭಿಸಿದ್ದೇವೆ. ದುರ್ಲಕ್ಷಿತ ದೇವಸ್ಥಾನಗಳಲ್ಲಿ ದೇವತೆಗಳ ಪೂಜೆಯನ್ನು ಮಾಡಿ ನಾವು ದೀಪವನ್ನು ಬೆಳಗಿಸುತ್ತೇವೆ. ಹಿಮಾಚಲ ಪ್ರದೇಶ ರಾಜ್ಯದಿಂದ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ”, ಎಂದು ಹೇಳಿದರು.