ನ್ಯಾಯಾಂಗ ವ್ಯವಸ್ಥೆಯನ್ನು ಬದಲಾಯಿಸಲು ಆಂದೋಲನವನ್ನು ಪ್ರಾರಂಭಿಸುತ್ತದೆ ! – ವಕೀಲ ಘನಶ್ಯಾಮ್ ಉಪಾಧ್ಯಾಯ, ಅಧ್ಯಕ್ಷರು, ಲಾಯರ್ಸ್ ಫಾರ್ ಜಸ್ಟ ಸೊಸೈಟಿ, ಮುಂಬಯಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 6ನೇ ದಿನ (ಜೂನ್ 29)

ಬೋಧಪ್ರದ ಸತ್ರ – ನ್ಯಾಯ ಮತ್ತು ಸಂವಿಧಾನ

ವಕೀಲ ಘನಶ್ಯಾಮ್ ಉಪಾಧ್ಯಾಯ

ರಾಮನಾಥಿ – ಡಾ. ದಾಭೋಲ್ಕರ್ ಹತ್ಯೆ ಪ್ರಕರಣವು ಕೊಲೆಯ ಪ್ರಕರಣವಾಗಿದೆ; ಆದರೆ ಎಲ್ಲಾ ತನಿಖಾ ಸಂಸ್ಥೆಗಳು ಅವರಿಗೆ ವಿಭಿನ್ನ ತಿರುವು ನೀಡಿವೆ. ಸನಾತನ ಸಂಸ್ಥೆಯ ಸಾಧಕರನ್ನು ಈ ಪ್ರಕರಣದಲ್ಲಿ ಸಿಲುಕಿಸುವುದು ಈ ಏಕೈಕ ಉದ್ದೇಶದಿಂದ ಈ ಮೊಕದ್ದಮೆ ನಡೆಸಲಾಯಿತು. ಈ ವ್ಯವಸ್ಥೆಗಳು ಈ ಪ್ರಕರಣವನ್ನು ಅದೇ ದಿಕ್ಕಿನಲ್ಲಿ ಮುನ್ನಡೆಸಲು ಪ್ರಯತ್ನಿಸಿದವು. ಯಾವುದೋ ಒತ್ತಡದಲ್ಲಿ ಪ್ರಕರಣದ ತನಿಖೆ ನಡೆಸಲಾಯಿತು. ಅಂತಹ ಸಮಯದಲ್ಲಿ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿರುವುದಿಲ್ಲ. ಈ ಬಗ್ಗೆ ಹೈಕೋರ್ಟ್‌ ತೀವ್ರ ನಿಗಾ ಇರಿಸಿತ್ತು. ಹಾಗಾಗಿಯೇ ಎಲ್ಲರ ಮೇಲೆ ಒತ್ತಡ ಇತ್ತು. ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಯಿತು; ಆದರೆ ಅದರಲ್ಲಿ ವಿರೋಧಾಭಾಸವಿತ್ತು. ಈ ವಿಷಯವನ್ನು ಹಲವು ವರ್ಷಗಳ ಕಾಲ ನ್ಯಾಯಾಲಯದ ಮೆಟ್ಟಿಲೇರಿ ಸನಾತನದ ಸಾಧಕರು ಇದರ ಸಂಕಟವನ್ನು ಸಹಿಸಬೇಕಾಯಿತು ಮತ್ತು ಸನಾತನ ಸಂಸ್ಥೆಗೆ ಅಪಾರ ಹಾನಿಯುಂಟಾಯಿತು. ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಂಗ ವ್ಯವಸ್ಥೆ ಬದಲಿಸಲು ಆಂದೋಲನ ಆರಂಭಿಸಲಾಗುವುದು ಎಂದು ಹಿಂದುತ್ವನಿಷ್ಠ ವಕೀಲ ಘನಶ್ಯಾಮ್ ಉಪಾಧ್ಯಾಯಇವರು ಹೇಳಿದರು. ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು, ಇಂದು ನ್ಯಾಯಾಲಯದಲ್ಲಿ ‘ಹಿಂದೂಗಳ ವಿರುದ್ಧ ಹಿಂದೂಯೇತರರು’ ಎಂಬ ಕದನ ನಡೆಯುತ್ತಿದೆ. ಇಂದಿನ ನಕ್ಸಲೀಯರು ಮತ್ತು ಕಮ್ಯುನಿಸ್ಟ್ ಮನೋಭಾವದ ನ್ಯಾಯಾಧೀಶರು ಐಷಾರಾಮಿ ಬದುಕಲು ಬಯಸುತ್ತಾರೆ. ಅವರಿಗೆ ಧರ್ಮ, ಸಂಸ್ಕೃತಿ ಅಥವಾ ಮಿತಿಗಳಿಗೆ ಬದ್ಧರಾಗಿಲ್ಲ. ಈ ನ್ಯಾಯಾಧೀಶರಿಗೆ ಧರ್ಮದ ಜ್ಞಾನವಿಲ್ಲ. ಒಬ್ಬ ನ್ಯಾಯಾಧೀಶನಿಗೆ ನ್ಯಾಯಶಾಸ್ತ್ರ, ಮಿತಿ, ಧರ್ಮಶಾಸ್ತ್ರ, ಧರ್ಮ-ಅಧರ್ಮದ ಜ್ಞಾನವಿದ್ದರೆ, ಸರಿಯಾಗಿ ತೀರ್ಪು ನೀಡಬಹುದು. ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿಗಳ ‘ಇಕೊಸಿಸ್ಟಮ್’ ತುಂಬಾ ಪರಿಣಾಮಕಾರಿಯಾಗಿದೆ. ಅದನ್ನು ಎದುರಿಸಲು ನಮ್ಮ ಒತ್ತಡದ ಗುಂಪು ಸಿದ್ಧಪಡಿಸುವ ಮುಖ್ಯವಾಗಿದೆ.