ವೈಶ್ವಿಕ ಹಿಂದೂ ರಾಷ್ಟ್ರ ಉತ್ಸವ ಏಳನೇ ದಿನ (ಜೂನ್ 30)
ಬೋಧಪ್ರದ ಸತ್ರ : ಹಿಂದುತ್ವದ ರಕ್ಷಣೆ
ರಾಮನಾಥಿ (ಗೋವಾ) – ಬ್ರಿಟಿಷರು ಹಿಂದೂಗಳಿಗೆ ನಿಶ್ಶಸ್ತ್ರಗೊಳಿಸಿದರು. ಹಿಂದೂಗಳಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾಯಿತು. ‘ಶಸ್ತ್ರಾಸ್ತ್ರ ಬಳಸುವ ಹಕ್ಕು ಸರ್ಕಾರಕ್ಕೆ ಮಾತ್ರ ಸೇರಿದ್ದು, ಜನರಿಗಲ್ಲ’ ಎಂಬ ಕಲ್ಪನೆಯನ್ನು ಹಿಂದೂಗಳ ಮೇಲೆ ಹೇರಲಾಗಿತ್ತು. ಪರಿಣಾಮವಾಗಿ, ಹಿಂದೂ ಸಮಾಜವು ಸಂಪೂರ್ಣವಾಗಿ ನಿಶ್ಯಸ್ತ್ರವಾಯಿತು; ಆದರೆ ಈ ನಿಯಮ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಅದಕ್ಕಾಗಿಯೇ 1947 ರಲ್ಲಿ ಕಾಶ್ಮೀರದ ರಾಜೌರಿಯಲ್ಲಿ ಪಾಕಿಸ್ತಾನಿ ಆಕ್ರಮಣಕಾರರು 20 ರಿಂದ 30 ಸಾವಿರ ಹಿಂದೂಗಳನ್ನು ಕೊಂದರು. ಕೇರಳದ ಮೋಪ್ಲಾದಲ್ಲಿ ಹಿಂದೂಗಳ ಹತ್ಯಾಕಾಂಡ ನಡೆದಿದೆ. ಇಂತಹ ಅನೇಕ ಹಿಂದೂಗಳ ಹತ್ಯಾಕಾಂಡಗಳನ್ನು ಮುಸ್ಲಿಮರು ನಡೆಸಿದ್ದರು. ಭಗವಾನ ಶ್ರೀಕೃಷ್ಣನ ಬೋಧನೆಯನ್ನು ನಾವು ಮರೆತಿದ್ದೇವೆ. ಭಗವಾನ ಶ್ರೀಕೃಷ್ಣನು ಹೇಳಿದಂತೆ ಆಚರಣೆಗೆ ತಂದರೆ ನಾವು ಹಿಂದೂ ಸಮಾಜದ ರಕ್ಷಣೆ ಮಾಡಬಹುದು. ಎಂದು ತೆಲಂಗಾಣದ ಅಖಿಲ ಭಾರತ ಟೋಲಿ ಸದಸ್ಯ, ಹಾಗೆಯೇ ಪ್ರಜ್ಞಾ ಪ್ರವಾಹದ ಶ್ರೀ. ಗಿರಿಧರ್ ಮಾಮಿಡಿ ಮಾತನಾಡುವಾಗ ಹೇಳಿದರು. ‘ಭಾರತಕ್ಕೆ ಕ್ಷಾತ್ರ ತೇಜದ ಆವಶ್ಯಕತೆ ಇದೆ’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಶ್ರೀ. ಗಿರಿಧರ್ ಮಾಮಿಡಿ ಮಾತು ಮುಂದುವರೆಸಿ, ಪ್ರತಿ ವರ್ಷ ಭಾಗ್ಯನಗರದಲ್ಲಿ (ಹೈದರಾಬಾದ್) ಗಣೇಶ ವಿಸರ್ಜನೆ ವೇಳೆ ಮುಸ್ಲಿಮರು ಗಲಭೆ ಮಾಡುತ್ತಿದ್ದರು. ಒಂದು ವರ್ಷ ಹಿಂದೂಗಳು ದೃಢವಾಗಿ ದಾಳಿ ಮಾಡಿದರು. ಅಂದಿನಿಂದ ಅಲ್ಲಿ ಗಲಭೆ ನಿಂತಿತು. ಹಿಂದುಗಳು ಪ್ರತಿಹೋರಾಟ ಆರಂಭಿಸಿದರೆ ಮಾತ್ರ ಹಿಂದೂ ಸಮಾಜವನ್ನು ಉಳಿಸಲು ಸಾಧ್ಯ ಎಂದು ಹೇಳಿದರು.