‘ಫ್ಯಾಶನ್ ಶೋ’ ಮತ್ತು ಸೌಂದರ್ಯವರ್ಧಕಗಳ ಮೂಲಕ ಹಿಂದೂ ಮಹಿಳೆಯರ ವಂಚನೆಯ ವಿರುದ್ಧ ಧ್ವನಿ ಎತ್ತಿದರು ! – ಸಾಧ್ವಿ ಆತ್ಮನಿಷ್ಠ, ಜಬಲ್‌ಪುರ, ಮಧ್ಯಪ್ರದೇಶ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಏಳನೇ ದಿನ (ಜೂನ್ 30)

ಸಾಧ್ವಿ ಆತ್ಮನಿಷ್ಠ, ಜಬಲ್‌ಪುರ

ಪ್ರಸ್ತುತ ಹಲವು ಕಡೆಗಳಲ್ಲಿ ‘ಫ್ಯಾಶನ್ ಶೋ’ಗಳನ್ನು ಆಯೋಜಿಸುವವರು ಮುಸ್ಲಿಮರಿದ್ದಾರೆ. ಅಲ್ಲಿ ‘ರ ್ಯಾಂಪ್’ ಮೇಲೆ ನಡೆಯುವ ಹುಡುಗಿಯರು ಹಿಂದೂಗಳಾಗಿರುತ್ತಾರೆ. ಈ ‘ಫ್ಯಾಶನ್ ಶೋ’ನ ‘ವಿಡಿಯೋ’ವನ್ನು ಇಸ್ಲಾಮಿಕ್ ದೇಶಗಳಿಗೆ ಕಳುಹಿಸಲಾಗುತ್ತದೆ. ಈ ಮೂಲಕ ‘ರಾಕೆಟ್’ ನಡೆಸುವ ಮೂಲಕ ಮಹಿಳೆಯರನ್ನು ದೊಡ್ಡ ಮಟ್ಟದಲ್ಲಿ ಶೋಷಣೆ ಮಾಡಲಾಗುತ್ತಿದೆ. ಇಂತಹವುಗಳನ್ನು ಆಯೋಜಿಸುವವರು ‘ಮಾಫಿಯಾ’ಗಳು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿತ್ತಿದ್ದಾರೆ. ಭಾರತದಲ್ಲಿನ ಅನೇಕ ಸೌಂದರ್ಯವರ್ಧಕಗಳು ವಿದೇಶಿ ಸಂಸ್ಥೆಗಳ ಒಡೆತನದಲ್ಲಿದೆ. ಸೌಂದರ್ಯವರ್ಧಕಗಳ ಮೂಲಕವೂ ಹಿಂದೂ ಮಹಿಳೆಯರನ್ನು ವಂಚಿಸುವ ಯೋಜಿತ ಸಂಚು ನಡೆಯುತ್ತಿದೆ. ಇದನ್ನು ಮನಗಂಡ ನಾವು ‘ಫ್ಯಾಶನ್ ಶೋ’ ಮತ್ತು ಬ್ಯೂಟಿ ಪಾರ್ಲರ್‌ಗಳ ಮೂಲಕ ಹಿಂದೂ ಮಹಿಳೆಯರಿಗೆ ಜಿಹಾದಿಗಳಿಂದ ಮೋಸ ಹೋಗುವುದನ್ನು ತಡೆಯಲು ಧ್ವನಿ ಎತ್ತಿದೆವು. ಹಿಂದೂ ಮಹಿಳೆಯರಿಗೆ ಮೋಸ ಮಾಡುತ್ತಿದ್ದ ಕನಿಷ್ಠ 50 ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದೇವೆ.

ಹಿಂದೂ ಮಹಿಳೆಯರನ್ನು ಭಾರತೀಯ ಸಂಸ್ಕೃತಿಯ ಕಡೆಗೆ ಪರಿವರ್ತಿಸಲು, ನಾವು ಅವರ ಏಕೀಕರಣಕ್ಕಾಗಿ ಅರಿಶಿಣ-ಕುಂಕುಗಳಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ ಅವರಿಗೆ ಉದ್ಯೋಗ ಹಾಗೂ ಇತರೆ ಮಾರ್ಗಗಳ ತರಬೇತಿಗಳನ್ನು ನೀಡಿದ್ದೇವೆ. ನಾವು ಈ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿಯನ್ನು ನೀಡುತ್ತೇವೆ. ನಾವು ಕೋಲು ಮತ್ತು ಕತ್ತಿಗಳನ್ನು ಹೇಗೆ ಪ್ರಯೋಗಿಸಬೇಕೆಂದು ಕಲಿಸುತ್ತೇವೆ ಎಂದು ಹೇಳಿದರು.