ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ೬ ನೇದಿನ (೨೯ ಜೂನ್)
ಉದ್ಬೋಧನ ಸತ್ರ – ನ್ಯಾಯ ಮತ್ತು ಸಂವಿಧಾನ
ವಿದ್ಯಾಧಿರಾಜ ಸಭಾಂಗಣ – ದಾಭೋಲಕರ ಹತ್ಯೆ ಪ್ರಕರಣ ಇತರ ಮೊಕದ್ದಮೆಗಳಿಗಿಂತ ಭಿನ್ನವಾಗಿತ್ತು. ಈ ಮೊಕದ್ದಮೆಯ ತೀರ್ಪು ಏನಾಗಿರಬೇಕು ? ಎಂದು ನ್ಯಾಯಾಲಯ ಮತ್ತು ತನಿಖಾ ಇಲಾಖೆ ಮೊದಲೇ ನಿರ್ಧರಿಸಿದ್ದರು, ಎಂದು ಅವರ ವರ್ತನೆಯಿಂದ ಅನಿಸುತ್ತಿತ್ತು. ಪುಣೆ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಇಬ್ಬರು ಆರೋಪಿಗಳ ಬಗ್ಗೆ ನಾವು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ. ಅದರಲ್ಲಿ ಈ ಇಬ್ಬರೂ ಆರೋಪಿಗಳು ನಿರ್ದೋಷ ಮುಕ್ತರಾಗುವರು, ಎಂಬುದು ನಮಗೆ ಖಚಿತವಿದೆ, ಎಂಬ ದೃಢ ಅಭಿಪ್ರಾಯವನ್ನು ದಾಭೋಲಕರ ಹತ್ಯೆ ಪ್ರಕರಣದಲ್ಲಿನ ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ ಇವರು ‘ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ’ ಆರನೇ ದಿನ ವ್ಯಕ್ತ ಪಡಿಸಿದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಘನಶ್ಯಾಮ ಉಪಾಧ್ಯಾಯ, ಸನಾತನದ ಸಾಧಕ ಶ್ರೀ ವಿಕ್ರಮ ಭಾವೆ ಮತ್ತು ತೆಲಂಗಾಣಾದ ಪ್ರಖರ ಹಿಂದುತ್ವನಿಷ್ಠ ಶಾಸಕ ಶ್ರೀ. ರಾಜಾ ಸಿಂಹ ಲೋಧ ಇವರು ಉಪಸ್ಥಿತರಿದ್ದರು.
ನ್ಯಾಯವಾದಿ ಸಾಳಸಿಂಗೀಕರ ಇವರು ಹೇಳಿದರು,
೧. “ಈ ಮೊಕದ್ದಮೆಯನ್ನು ಹೋರಾಡಲು ಸಿಕ್ಕಿದಾಗ, ‘ನನ್ನ ಆಲೋಚನೆಗಳಿಗಾಗಿ ಹೋರಾಡುವ ಅವಕಾಶ ಸಿಕ್ಕಿದೆ’, ಎಂದು ನನಗೆ ಅನಿಸಿತು. ದಾಭೋಲಕರ ಹತ್ಯಾ ಪ್ರಕರಣದಲ್ಲಿ ಮುಖ್ಯ ತನಿಖಾ ಅಧಿಕಾರಿ ಎಸ್. ಆರ್. ಸಿಂಗ್ ಇವರು ಸಾಕ್ಷಿ ನೀಡುವಾಗ ಅವರ ಬಳಿ ಕಾಗದಪತ್ರಗಳ ಸೆಟ್(ಕಟ್ಟು) ಇತ್ತು; ಆದರೆ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ ಆ ಕಾಗದಪತ್ರಗಳ ಸೆಟ್ ಕಣ್ಮರೆಯಾಗಿತ್ತು. ಆ ಸಮಯದಲ್ಲಿ ನ್ಯಾಯಾಲಯದ ಸಭಾಗೃಹ ತುಂಬಿ ತುಳುಕುತ್ತಿತ್ತು. ಈ ದಾಖಲೆಗಳ ಸೆಟ್ ಬಗ್ಗೆ ಎಸ್.ಆರ್. ಸಿಂಗ್ ಇವರು ಹಾರಿಕೆಯ(ಮೇಲುಮೇಲಿನ) ಉತ್ತರಗಳನ್ನು ನೀಡಿದರು. ಆದುದರಿಂದ ಅವುಗಳನ್ನು ಹುಡುಕಲು ಬಹಳಷ್ಟು ಸಮಯ ಹೋಯಿತು. ಅದು ಸಿಕ್ಕ ನಂತರ ಅದರಲ್ಲಿನ ಕೆಲವು ಕಾಗದ ಪತ್ರಗಳು ಕಳೆದು ಹೋಗಿರುವುದು ಕಂಡು ಬಂದಿತು. ಈ ಮೊಕದ್ದಮೆಯಲ್ಲಿ ಸರಕಾರಿ ಪಕ್ಷದ ಜನರಿಗೆ ಅತ್ಯಧಿಕ ಸಮಯ ನೀಡಲಾಯಿತು, ಮತ್ತು ನಮಗೆ ಕಡಿಮೆ ಸಮಯ ನೀಡಲಾಯಿತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ. ಈ ಮೊಕದ್ದಮೆಯಲ್ಲಿ ಅನೇಕ ಪ್ರಸಂಗಗಳಲ್ಲಿ ನ್ಯಾಯಾಲಯದಲ್ಲಿ ಪಕ್ಷಪಾತ ಮಾಡಲಾಯಿತು.
೨. ಓರ್ವ ಸಾಕ್ಷಿದಾರನ ಸಾಕ್ಷಿ ನಡೆದಿತ್ತು. ಆಗ ಅವನಿಗೆ, ಯಾರಾದರೂ ನಿಮಗೆ ಸಾಕ್ಷಿ ಹೇಳುವುದನ್ನು ಕಲಿಸಿದ್ದಾರೆಯೇ ? ಎಂದು ಕೇಳಲಾಯಿತು. ಅದೇ ಸಮಯದಲ್ಲಿ ನ್ಯಾಯಾಲಯದ ಸಭಾಗೃಹದಿಂದ ಓರ್ವ ವ್ಯಕ್ತಿ ಎದ್ದು ಹೋಗುವುದು ಕಾಣಿಸಿತು. ಅನಂತರ ಸಾಕ್ಷಿದಾರನು ಆ ಓಡಿ ಹೋಗುತ್ತಿರುವ ವ್ಯಕ್ತಿಯ ಕಡೆಗೆ ನೋಡಿ ಅವರೇ ನನಗೆ ಸಾಕ್ಷಿ ನೀಡುವ ಬಗ್ಗೆ ತಿಳಿಸಿ ಹೇಳಿದ್ದರು ಎಂದು ಹೇಳಿದನು. ಆ ವ್ಯಕ್ತಿ ಅಂ.ನಿ.ಸ.ದ ಪದಾಧಿಕಾರಿಗಳಾಗಿದ್ದರು. ಈ ವಿಷಯವನ್ನು ನ್ಯಾಯಾಧೀಶರು ಸಹಜವಾಗಿ ತೆಗೆದುಕೊಂಡರು. ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ‘ಯು.ಎ.ಪಿ.ಎ.’ (ಕಾನೂನುಬದ್ಧ ಅಪರಾಧಗಳ (ತಡೆ) ಕಾಯಿದೆ) ವಿಧಿಸಲಾಗಿತ್ತು. ಸಂಕ್ಷಿಪ್ತದಲ್ಲಿ, ಹತ್ಯೆಯಲ್ಲಿ ಈ ಕಾಯಿದೆ ವಿಧಿಸುವುದು ತಪ್ಪಾಗಿತ್ತು.”