ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ನಾನು, ವಿಕ್ರಮ್ ಭಾವೆ ಮತ್ತು ಡಾ. ವೀರೇಂದ್ರ ಸಿಂಗ್ ತಾವಡೆ ಅವರನ್ನು ಖುಲಾಸೆಗೊಳಿಸಲಾಯಿತು; ಆದರೆ ಶರದ್ ಕಳಸ್ಕರ್ ಮತ್ತು ಸಚಿನ್ ಅಂದುರೆ ಅವರಿಗೆ ನೀಡಿರುವ ಶಿಕ್ಷೆ ಅನ್ಯಾಯವಾಗಿದೆ. ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತೇವೆ. ಅವರ ನಿರಪರಾಧಿ ಎಂಬುದು ಹೈಕೋರ್ಟ್‌ನಲ್ಲಿ ಸಿದ್ಧವಾಗುತ್ತದೆ ಎಂದು ನಾವು ನಂಬುತ್ತೇವೆ. ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಗಳನ್ನು ನಿಲ್ಲಿಸಲು ಈ ಸುಳ್ಳು ಪ್ರಕರಣವನ್ನು ಎತ್ತಲಾಗಿದೆ; ಆದರೆ ಇದರಿಂದ ನಾವು ಹಿಂದುತ್ವದ ಕಾರ್ಯವನ್ನು ನಿಲ್ಲಿಸುವುದಿಲ್ಲ. ಕೆಲವು ರಾಜಕಾರಣಿಗಳು ಅಧಿಕಾರಕ್ಕಾಗಿ ಹಿಂದುತ್ವನಿಷ್ಠರನ್ನು ವಂಚಿಸಲು ಪ್ರಯತ್ನಿಸಿದರು. ಸ್ವಾರ್ಥ ರಾಜಕಾರಣದಿಂದಾಗಿ ಹಿಂದುತ್ವನಿಷ್ಠರಲ್ಲಿ ಒಡಕು ಮೂಡಿಸಲಾಗುತ್ತದೆ. ಮಾತೆ ಸರಸ್ವತಿ ದೇವಿಯನ್ನು ಅವಮಾನಿಸಿದ ನಾಯಕನನ್ನು ಮಹಾರಾಷ್ಟ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಪ್ರತಿಯೊಂದು ರಾಜಕೀಯ ಪಕ್ಷದಲ್ಲಿಯೂ ಇಂತಹ ಸ್ವಾರ್ಥಿ ನಾಯಕರು ಇದ್ದಾರೆ. ಇವೆಲ್ಲದರ ವಿರುದ್ಧ ಹಿಂದೂಗಳು ಒಗ್ಗೂಡಿ ಹಿಂದೂ ರಾಷ್ಟ್ರಕ್ಕಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ವಕೀಲ ಸಂಜೀವ್ ಪುನಾಳೆಕರ್ ಇವರು ಹೇಳಿದರು. ಅವರ ಭಾಷಣವನ್ನು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ‘ವೀಡಿಯೊ’ ಮೂಲಕ ತೋರಿಸಲಾಯಿತು.