ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂ ಪರಿವಾರದ ಮೇಲೆ ದಾಳಿ
ಭಾರತದ ಮುಸಲ್ಮಾನರ ಮೇಲೆ ದಾಳಿ ನಡೆದರೆ, ಆಗ ಇಸ್ಲಾಮಿ ದೇಶ ಮತ್ತು ಸಂಘಟನೆಗಳು ತಕ್ಷಣ ಭಾರತವನ್ನು ಗುರಿಯಾಗಿಸುತ್ತಾರೆ ಎಂಬುವುದನ್ನು ಭಾರತ ಸರಕಾರ ತಿಳಿದುಕೊಳ್ಳಬೇಕು.
ಭಾರತದ ಮುಸಲ್ಮಾನರ ಮೇಲೆ ದಾಳಿ ನಡೆದರೆ, ಆಗ ಇಸ್ಲಾಮಿ ದೇಶ ಮತ್ತು ಸಂಘಟನೆಗಳು ತಕ್ಷಣ ಭಾರತವನ್ನು ಗುರಿಯಾಗಿಸುತ್ತಾರೆ ಎಂಬುವುದನ್ನು ಭಾರತ ಸರಕಾರ ತಿಳಿದುಕೊಳ್ಳಬೇಕು.
ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಕುಮಾರಖಲಿ ಉಪ ಜಿಲ್ಲೆಯಲ್ಲಿ ಜಿಹಾದಿ ಭಯೋತ್ಪಾದಕರು ಸ್ಥಳೀಯ ಮಹಾವಿದ್ಯಾಲಯದ ನಯನಕುಮಾರ ಸರ್ಕಾರ (೨೨ ವರ್ಷ) ಎಂಬ ಹಿಂದೂ ವಿದ್ಯಾರ್ಥಿಯನ್ನು ಸುತ್ತಿಗೆಯಿಂದ ಬರ್ಬರವಾಗಿ ಥಳಿಸಿದ್ದಾರೆ.
ಮಹಮ್ಮದ್ ಪೈಗಂಬರ್ ಇವರ ವಿರೋಧದಲ್ಲಿ ಖುಲನಾ ಜಿಲ್ಲೆಯ ದಿಘುಲಿಯಾ ಈ ಉಪಜಿಲ್ಲೆಯಲ್ಲಿ ವಾಸವಾಗಿರುವ ಓರ್ವ ಹಿಂದೂ ಯುವಕನು ‘ಫೇಸ್‌ಬುಕ’ನಲ್ಲಿ ಮಹಮ್ಮದ್ ಪೈಗಂಬರ ವಿಷಯವಾಗಿ ತಥಾ ಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರಿಂದ ಸ್ಥಳೀಯ ಮತಾಂಧ ಮುಸಲ್ಮಾನರು ಅವರ ಮನೆ ಸುಟ್ಟರು. ಈ ಘಟನೆ ಜುಲೈ ೧೬ ರಂದು ನಡೆದಿದ್ದು ನಂತರ ಮತಾಂಧರು ಹಿಂದುಗಳ ವಿರೋಧದಲ್ಲಿ ದಾಳಿಯ ಸರಣಿಯನ್ನೇ ಆರಂಭಿಸಿದರು.
ಇಸ್ಲಾಂ ಬಗ್ಗೆ ತಥಾಕಥಿತ ಅವಮಾನ ಮಾಡಿರುವ ಪ್ರಕರಣದಲ್ಲಿ ಲೋಹಾಗರಾ ಉಪ ಜಿಲ್ಲೆಯ ದಿಘಲಿಯ ಬಾಜಾರ್ ದಲ್ಲಿ ಜಮಾಯಿಸಿರುವ ಸಾವಿರಾರು ಮುಸಲ್ಮಾನರು ಹಿಂದೂಗಳ ಸಂಹಾರ ನಡೆಸುವ ಬೆದರಿಕೆ ಒಡ್ಡಿದರು. ಇದರ ನಂತರ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿ ಲೋಹಾಗರಾದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಯಿತು.
ಬಾಂಗ್ಲಾದೇಶದ ನೇತ್ರಕೋನಾ ಜಿಲ್ಲೆಯ ಕಲಾಮಾಕಾಂಡಾ ಉಪಜಿಲ್ಲೆಯ ಮಹಮ್ಮದ್ ಜೆವೆಲ ಮಿಯಾ ಎಂಬ ಮುಸಲ್ಮಾನ ವ್ಯಕ್ತಿಯು ೧೬ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಾಂಗ್ಲಾ ದೇಶದಲ್ಲಿ ಮಾಗುರಾದಲ್ಲಿ ಒಂದು ಹಿಂದೂ ಕುಟುಂಬದ ಭೂಮಿಯ ಮೇಲೆ ಮುಸಲ್ಮಾನರು ಅತಿಕ್ರಮಣ ನಡೆಸಿ ಅದನ್ನು ಕಬಳಿಸಿದ್ದಾರೆ. ಈ ಹಿಂದೂ ಕುಟುಂಬ ಕಳೆದ ೨೬ ವರ್ಷದಿಂದ ಅಲ್ಲಿ ವಾಸವಾಗಿದ್ದರು. ಏಕುತುಂಬದ ಮಹಿಳೆ ಆತಂಕವಾದಿಗಳು ಅವರ ಮನೆಯ ಮೇಲೆ ದಾಳಿ ನಡೆಸಿದ ಮಾಹಿತಿ ನೀಡಿದರು.
ಇಲ್ಲಿ ಹಾಜಿ ಯೂನಸ್ ಅಲಿ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಉತ್ಪಲ ಕುಮಾರ್ ಸರಕಾರ ಇವರನ್ನು ೧೯ ವರ್ಷದ ಅಶ್ರಫುಲ್ ಇಸ್ಲಾಂ ಎಂಬ ಯುವಕ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅವರ ಕೊಲೆ ಮಾಡಿದ್ದಾನೆ.
ಇಲ್ಲಿನ ಮಿರ್ಝಾಪುರ ಯುನಾಯಟೆಡ ಕಾಲೇಜಿನ ಹಿಂದೂ ಪ್ರಾಧ್ಯಾಪಕರಾದ ಸ್ವಪ್ನ ಕುಮಾರ ಬಿಸ್ವಾಸರವರಿಗೆ ಚಪ್ಪಲಿ ಹಾರ ಹಾಕಿ ಅಪಮಾನಗೊಳಿಸಿದ ಘಟನೆಯು ಮುಸಲ್ಮಾನರಿಂದ ಜೂನ ೧೭ರಂದು ನಡೆದಿರುವ ಮಾಹಿತಿಯು ಬೆಳಕಿಗೆ ಬಂದಿದೆ.
ಬಾಂಗ್ಲಾದೇಶದ ಚಿತಳಮಾರಿ ಉಪಜಿಲ್ಲೆಯ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಫೇಸಬುಕ ಖಾತೆಯನ್ನು ‘ಹ್ಯಾಕ’ ಮಾಡಿ ಅದರಲ್ಲಿ ಇಸ್ಲಾಂ ಕುರಿತು ಅವಹೇಳನಕಾರಿ ಬರಹವನ್ನು ಪ್ರಸಾರ ಮಾಡಿದನು. ಪೊಲೀಸರು ಹಿಂದೂ ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ರಾಮದಿಯಾ ಯೂನಿಯನ ಪರಿಷತ್ತಿನ ಹೆಸರನ್ನು ಇಸ್ಲಾಂಪೂರ ಯೂನಿಯನ ಪರಿಷತ್ತು ಎಂದು ಬದಲಾಯಿಸಲಾಗಿದೆ. ರಾಮದಿಯಾ ಯೂನಿಯನ ಪರಿಷತ್ತಿನ ಅಧ್ಯಕ್ಷರು, ‘ನಮಗೆ ರಾಮನ ಹೆಸರನ್ನು ಕೇಳುವ ಇಚ್ಛೆಯಿಲ್ಲ.’ ಎಂದು ಹೇಳಿದರು.