ಬಾಂಗ್ಲಾದೇಶದಲ್ಲಿ ‘ರಾಮದಿಯಾ ಯೂನಿಯನ ಪರಿಷತ್ತು’ ಹೆಸರನ್ನು ಬದಲಾಯಿಸಿ ‘ಇಸ್ಲಾಂಪೂರ ಯೂನಿಯನ್ ಪರಿಷತ್ತು’ ಮಾಡಲಾಯಿತು !

ಹೆಸರಿನಲ್ಲಿ ರಾಮ ಇರುವುದರಿಂದ ಬದಲಾವಣೆ !

ರಾಜಬರಿ (ಬಾಂಗ್ಲಾದೇಶ) – ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ರಾಮದಿಯಾ ಯೂನಿಯನ ಪರಿಷತ್ತಿನ ಹೆಸರನ್ನು ಇಸ್ಲಾಂಪೂರ ಯೂನಿಯನ ಪರಿಷತ್ತು ಎಂದು ಬದಲಾಯಿಸಲಾಗಿದೆ. ರಾಮದಿಯಾ ಯೂನಿಯನ ಪರಿಷತ್ತಿನ ಅಧ್ಯಕ್ಷರು, ‘ನಮಗೆ ರಾಮನ ಹೆಸರನ್ನು ಕೇಳುವ ಇಚ್ಛೆಯಿಲ್ಲ.’ ಎಂದು ಹೇಳಿದರು. (‘ನಮಗೆ ಮುಸಲ್ಮಾನ ಆಕ್ರಮಣಕಾರರ ಹೆಸರನ್ನು ಕೇಳುವ ಇಚ್ಛೆಯಿಲ್ಲ’, ಎಂದು ಹೇಳುವ ಧೈರ್ಯವನ್ನು ಭಾರತದಲ್ಲಿರುವ ಯಾರೋಬ್ಬ ಹಿಂದೂ ಮತ್ತು ಅವರ ನಾಯಕರು ಎಂದಾದರೂ ಹೇಳಬಲ್ಲರೇ ? – ಸಂಪಾದಕರು) ಒಂದು ಕಾಲದಲ್ಲಿ ರಾಮದಿಯಾದಲ್ಲಿ ಶೇ. ೭೫ ರಷ್ಟು ಜನರು ಹಿಂದೂಗಳಾಗಿದ್ದರು. (ಯಾವುದಾದರೂ ಒಂದು ಸ್ಥಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಮತ್ತು ಮುಸಲ್ಮಾನರು ಬಹುಸಂಖ್ಯಾತರಾಗಿದ್ದರೆ ಏನಾಗುತ್ತದೆ, ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ ! – ಸಂಪಾದಕರು) ಇದರಿಂದ ಬಾಂಗ್ಲಾದೇಶ ಎಷ್ಟು ಕಟ್ಟರ ಇಸ್ಲಾಂ ದೇಶವಾಗಿದೆಯೆಂದು ಗಮನಕ್ಕೆ ಬರುತ್ತದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಔರಂಗಜೇಬ, ಅಫಝಲಖಾನ ಮುಂತಾದ ಅಸಂಖ್ಯಾತ ಆಕ್ರಮಣಕಾರರ ಹೆಸರಿನಲ್ಲಿ ಇಂದಿಗೂ ಅನೇಕ ಗ್ರಾಮ, ತಾಲೂಕು, ನಗರಗಳು ಇತ್ಯಾದಿ ಇರುವಾಗ ಆ ವಿಷಯದಲ್ಲಿ ಯಾರೂ ಚಕಾರವನ್ನು ಎತ್ತುವುದಿಲ್ಲ ! ಬದಲಾಗಿ ಈ ಹೆಸರನ್ನು ಬದಲಾಯಿಸುವಂತೆ ಕೋರುವ ಹಿಂದುತ್ವನಿಷ್ಠರನ್ನು ಟೀಕಿಸುತ್ತಾರೆ ! ಈ ಚಿತ್ರಣ ಇಲ್ಲಿಯವರೆಗಿನ ಆಡಳಿತಾಧಿಕಾರಿಗಳಿಗೆ ಲಜ್ಜಾಸ್ಪದ !