ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂ ಪರಿವಾರದ ಮೇಲೆ ದಾಳಿ

ಢಾಕಾ (ಬಾಂಗ್ಲಾದೇಶ) : ಬಾಂಗ್ಲಾದೇಶದ ಮಾಣಿಕಗಂಜ ಜಿಲ್ಲೆಯ ಶಿವಲೋಯ ಉಪಜಿಲ್ಲೆಯ ಒಂದು ಹಿಂದೂ ಕುಟುಂಬದ ಮೇಲೆ ಔಲಾದ ಹುಸೇನ್ ಎಂಬವನು ಗುಂಪಿನಲ್ಲಿ ಬಂದು ದಾಳಿ ನಡೆಸಿದ್ದಾನೆ ಎಂದು ವಾಯ್ಸ್ ಆಫ್ ಬಂಗ್ಲಾದೇಶಿ ಹಿಂದೂಸ್ ಎಂಬ ಟ್ವಿಟರ ಖಾತೆಯಿಂದ ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ದೇಶದ ಪ್ರಧಾನಿ ಶೇಖ ಹಸೀನಾ ಇವರು ‘ಮದೀನಾ ಚಾರ್ಟರ್’ನ್ನು (ಸೌದಿ ಅರೇಬಿಯಾದಲ್ಲಿ ಮದಿನಾದಲ್ಲಿ ೬ನೇ ಶತಮಾನದಲ್ಲಿ ಮುಸಲ್ಮಾನರು ಬರೆದಿರುವ ಸಂವಿಧಾನ) ಪಾಲಿಸುವುದಾಗಿ ಘೋಷಿಸಿದ್ದರು ಎಂದು ಹೇಳಲಾಗುತ್ತಿದೆ. (ಇದರಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾವುದೇ ಸ್ಥಾನ ಇರುವುದಿಲ್ಲ ಎಂದು ಸ್ಪಷ್ಟವಾಗಿದೆ. ಭಾರತದ ನೆರೆಯ ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ಜೀವನ ನರಕ ಸದೃಶವಾಗಿದೆ. ಭಾರತ ಆದರ ಕಡೆಗೆ ನಿಷ್ಕ್ರಿಯವಾಗಿ ನೋಡುತ್ತಿದೆಯಾದರೆ ಅದು ಹಿಂದೂಗಳಿಗೆ ನಾಚಿಕೆಗೀಡು !-ಸಂಪಾದಕರು)

ಸಂಪಾದಕೀಯ ನಿಲುವು

* ಬಾಂಗ್ಲಾದೇಶದ ಹಿಂದೂಗಳ ಮೇಲೆ ಸತತವಾಗಿ ದಾಳಿ ನಡೆಯುತ್ತಿದ್ದರು ಭಾರತ ಸರಕಾರ ಮೌನವಾಗಿರುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ.

* ಭಾರತದ ಮುಸಲ್ಮಾನರ ಮೇಲೆ ದಾಳಿ ನಡೆದರೆ, ಆಗ ಇಸ್ಲಾಮಿ ದೇಶ ಮತ್ತು ಸಂಘಟನೆಗಳು ತಕ್ಷಣ ಭಾರತವನ್ನು ಗುರಿಯಾಗಿಸುತ್ತಾರೆ ಎಂಬುವುದನ್ನು ಭಾರತ ಸರಕಾರ ತಿಳಿದುಕೊಳ್ಳಬೇಕು.