ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯ ಫೇಸಬುಕ ಖಾತೆಯನ್ನು ‘ಹ್ಯಾಕ’ ಮಾಡಿ ಇಸ್ಲಾಂ ಬಗ್ಗೆ ಅವಹೇಳನಕಾರಿ ಬರಹಗಳ ಪ್ರಸಾರ !

ಹಿಂದೂ ಯುವತಿಯನ್ನು ಗುರಿಯನ್ನಾಗಿಸುವ ಕುತಂತ್ರ !

ಚಿತಳಮಾರಿ (ಬಾಂಗ್ಲಾದೇಶ) – ಬಾಂಗ್ಲಾದೇಶದ ಚಿತಳಮಾರಿ ಉಪಜಿಲ್ಲೆಯ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಫೇಸಬುಕ ಖಾತೆಯನ್ನು ‘ಹ್ಯಾಕ’ ಮಾಡಿ ಅದರಲ್ಲಿ ಇಸ್ಲಾಂ ಕುರಿತು ಅವಹೇಳನಕಾರಿ ಬರಹವನ್ನು ಪ್ರಸಾರ ಮಾಡಿದನು. ಪೊಲೀಸರು ಹಿಂದೂ ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಆ ವೇಳೆ ಜಿಹಾದಿ ಭಯೋತ್ಪಾದಕರು ಹಿಂದೂ ಯುವತಿಯನ್ನು ಕೊಲ್ಲುವ ಉದ್ದೇಶದಿಂದ ಪೊಲೀಸ ಠಾಣೆ ಮೇಲೆ ದಾಳಿ ಮಾಡಿದ್ದರು.
ಪ್ರಸ್ತುತ ಹಿಂದೂ ಯುವತಿಯು ಆರೋಪಿ ಮುಸ್ಲಿಂ ಯುವಕನ ಪ್ರೀತಿಸುವ ಪ್ರಸ್ತಾವವನ್ನು ತಿರಸ್ಕರಿಸಿದ್ದಳು. ಆದ್ದರಿಂದ ಅವಳನ್ನು ಗುರಿಯಾಗಿಸಲು ಆಕೆಯ ಫೇಸಬುಕ ಖಾತೆಯನ್ನು ‘ಹ್ಯಾಕ’ ಮಾಡಲಾಗಿತ್ತು ಎಂದು ನಂತರ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಇಸ್ಲಾಮಿಕ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಅಸುರಕ್ಷಿತ ! ಈ ಘಟನೆ ಕುರಿತು ಭಾರತ ಸರಕಾರ ಬಾಂಗ್ಲಾದೇಶಕ್ಕೆ ಬುದ್ಧಿ ಕಲಿಸಬೇಕು !