ಬಾಂಗ್ಲಾದೇಶದಲ್ಲಿ ಹಿಂದೂ ಯುವಕನು ಪೈಗಂಬರ್‌ರವರ ವಿರೋಧದಲ್ಲಿ ತಥಾಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಪ್ರಕರಣ
|
ಢಾಕಾ – ಮಹಮ್ಮದ್ ಪೈಗಂಬರ್ ಇವರ ವಿರೋಧದಲ್ಲಿ ಖುಲನಾ ಜಿಲ್ಲೆಯ ದಿಘುಲಿಯಾ ಈ ಉಪಜಿಲ್ಲೆಯಲ್ಲಿ ವಾಸವಾಗಿರುವ ಓರ್ವ ಹಿಂದೂ ಯುವಕನು ‘ಫೇಸ್‌ಬುಕ’ನಲ್ಲಿ ಮಹಮ್ಮದ್ ಪೈಗಂಬರ ವಿಷಯವಾಗಿ ತಥಾ ಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರಿಂದ ಸ್ಥಳೀಯ ಮತಾಂಧ ಮುಸಲ್ಮಾನರು ಅವರ ಮನೆ ಸುಟ್ಟರು. ಈ ಘಟನೆ ಜುಲೈ ೧೬ ರಂದು ನಡೆದಿದ್ದು ನಂತರ ಮತಾಂಧರು ಹಿಂದುಗಳ ವಿರೋಧದಲ್ಲಿ ದಾಳಿಯ ಸರಣಿಯನ್ನೇ ಆರಂಭಿಸಿದರು. ಹಿಂಸಾಚಾರ ಘಟನೆಯ ‘ವಿಡಿಯೋ’ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. ಮತಾಂಧರು ಹಿಂದೂಗಳ ೨೧ ಮನೆ ಸುಟ್ಟರು, ೩೭ ಅಂಗಡಿಗಳು ಲೂಟಿ ಮಾಡಿದರು ಹಾಗೂ ೯ ದೇವಸ್ಥಾನಗಳನ್ನು ನೆಲಸಮ ಮಾಡಿ ದೇವತೆಗಳ ಮೂರ್ತಿಯ ವಿಡಂಬನೆ ಮಾಡಿದರು. ಈ ಘಟನೆಯಲ್ಲಿ ಹಿಂದುಗಳ ಒಟ್ಟು ೨೦೦ ಮನೆಗಳ ಮೇಲೆ ದಾಳಿ ಮಾಡಲಾಯಿತು. ಪೊಲೀಸರು ಪೈಗಂಬರ್‌ರವರ ವಿರೋಧದಲ್ಲಿ ತಥಾಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡುವ ಆಕಾಶ ಸಾಹಾ ಮತ್ತು ಅವನ ತಂದೆ ಅಶೋಕ ಸಾಹಾ ಇವರನ್ನು ಬಂಧಿಸಿದ್ದಾರೆ. ಆದರೆ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಂಡಿರುವ ವಾರ್ತೆ ತಿಳಿದು ಬಂದಿಲ್ಲ. (ಬಾಂಗ್ಲಾದೇಶದ ಪೊಲೀಸರು ಸಾಹಾ ತಂದೆ-ಮಗನನ್ನು ಹೇಗೆ ತತ್ಪರತೆಯಿಂದ ಬಂಧಿಸಿದರೋ, ಅದೇ ತತ್ಪರತೆ ಅವರು ಮತಾಂಧರ ವಿರುದ್ಧ ತೋರಿಸಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಹಿಂದೂಗಳ ಮೇಲೆ ದಾಳಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಭಾರತ ಸರಕಾರ ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವರೇ ? – ಸಂಪಾದಕರು) ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ ಗಲಭೆಕೋರರನ್ನು ಶಾಂತ ಪಡಿಸಿದರು. (ಗಲಭೆಕೋರರ ಗುಂಪನ್ನು ಶಾಂತಗೊಳಿಸುವುದರ ಜೊತೆಗೆ ಅವರ ಮೇಲೆ ಕ್ರಮ ಜರುಗಿಸಿ ಅವರಿಗೆ ಶಿಕ್ಷೆಯಾಗಲು ಪೊಲೀಸರು ಪ್ರಯತ್ನ ಮಾಡುವುದು ಅಗತ್ಯವಾಗಿದೆ ! ಇದರಿಂದ ಭಾರತದಲ್ಲಿನ ಹಾಗೂ ಬಾಂಗ್ಲಾದೇಶದಲ್ಲಿನ ಪೊಲೀಸರು ಹಿಂದೂಗಳ ಮೇಲಿನ ಮತಾಂಧರ ದಾಳಿಯ ಬಗ್ಗೆ ಒಂದೇ ಮಾನಸಿಕತೆಯನ್ನು ಇಟ್ಟುಕೊಂಡಿರುವುದು ಗಮನಕ್ಕೆಬರುತ್ತದೆ ! – ಸಂಪಾದಕರು) ಪೊಲೀಸರು, ಆಕಾಶ ಜುಲೈ ೧೪ ರಂದು ಪೈಗಂಬರ್ ಇವರ ವಿರೋಧದಲ್ಲಿ ಪೋಸ್ಟ್ ಮಾಡಿದ್ದನು. ವಿಚಾರಣೆ ನಡೆಸಿದ ನಂತರ ಮುಂದಿನ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
“They attacked us because we are Hindus”: Anti-Hindu pogrom in Narail, B’desh https://t.co/MzqgRxbVHK
— HinduPost (@hindupost) July 17, 2022
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಬಗ್ಗೆ ಎಲ್ಲಿಯವರೆಗೆ ಭಾರತ ಬಾಂಗ್ಲಾದೇಶಕ್ಕೆ ಕೇಳುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದು ಅಸಾಧ್ಯ ! ಹಿಂದುಗಳೇ, ಇನ್ನು ಬಾಂಗ್ಲಾದೇಶದ ನಿಮ್ಮ ಸಹೋದರರ ರಕ್ಷಣೆಗಾಗಿ ಸರಕಾರದ ಮೇಲೆ ಕಾನೂನಿನ ಮಾರ್ಗದಿಂದ ಒತ್ತಡ ತರಬೇಕು ! ‘ಸೃಜನಶೀಲ ಸ್ವಾತಂತ್ರ್ಯ (ಕ್ರಿಯೇಟಿವ್ ಫ್ರೀಡಂ) ಈ ಸವಿಯಾದ ಹೆಸರಿನಲ್ಲಿ ಹಿಂದೂಗಳ ದೇವತೆಗಳ ವಿಡಂಬನೆ ಮಾಡುವವರನ್ನು ರಕ್ಷಿಸುವ ಪ್ರಗತಿ(ಅಧೋಗತಿ)ಪರರು ಈಗ ಮೌನ ಏಕೆ ? |